ಹಳೆಕೊಟೆ ಹನುಮಂತ ದೇವಾಸ್ಥಾನ ಸಭಾಭವನದಲ್ಲಿ ಕರಾಟೆ ಸ್ಪರ್ಧಾ ಕಾರ್ಯಕ್ರಮ

ಸ್ಪರ್ದೆಯಲ್ಲಿ ತನ್ನ ಪ್ರದರ್ಶನದಿಂದ ನೇರೆದವರ ಮನಸೂರೆಗೊಂಡ ಪುಟಾಣಿ ಪ್ರಣವಿ ಕಿಣಿ

ಭಟ್ಕಳ: ನಮ್ಮ ತಾಲೂಕಿನ ವಿದ್ಯಾರ್ಥಿಗಳು ಕರಾಟೆಯಲ್ಲಿ ಅಂತರಾಷ್ಟಿಯ ಮಟ್ಟದಲ್ಲಿ ಭಾಗವಹಿಸಿ ನಮ್ಮ ಜಿಲ್ಲೆ ಮಾತ್ರವಲ್ಲದೆ ರಾಜ್ಯಕ್ಕೂ ಕೀರ್ತಿ ತರುತ್ತಿದ್ದಾರೆ. ಇವರನ್ನು ಉತ್ತಮ ತರಬೇತಿ ನೀಡುವಲ್ಲಿ ಶೋಟೋಕಾನ ಕರಾಟೆ ಸಂಸ್ಥೆಯ ಪರಿಶ್ರಮ ಶ್ಲಾಘನೀಯ ಎಂದು ಶ್ರೀ ಗುರುವಿದ್ಯಾಧಿರಾಜ ನ್ಯೂ ಇಂಗ್ಲೀಷ ಪಿ.ಯು.ಕಾಲೇಜಿನ ಪ್ರಾಂಶುಪಾಲ ವೀರೇಂದ್ರ ಶ್ಯಾನಭಾಗ ಹೇಳಿದರು.


ಅವರು ಭಟ್ಕಳ ತಾಲೂಕಿನ ಸಾರದೊಳೆಯ ಹಳೇಕೋಟೆ ಶ್ರೀ ಹನುಮಂತ ದೇವಸ್ಥಾನ, ಸಭಾಭವನದಲ್ಲಿ ಶೋಟೊಕಾನ್ ಕರಾಟೆ ಸಂಸ್ಥೆಯ ಆಯೋಜಿಸಿದ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಬದಲ್ಲಿ ವಿವಿಧ ಬೆಲ್ಟ್, ವಿವಿಧ ವಿಭಾಗಗಳಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸುಧೀಂದ್ರ ಕಾಲೇಜಿನ ಬಿ.ಕಾಂ ವಿದ್ಯಾರ್ಥಿನಿಯಾದ ಅಂಜಲಿ ಕಾಮತ, ವಿದ್ಯಾಭಾರತಿ ವಿದ್ಯಾ ಭಾರತಿ ದೈಹಿಕ ಶಿಕ್ಷಕಿ ಸೀಮಾ ನಾಯ್ಕ ಇವರಿಗೆ ಬ್ಲಾಕ್ ಬೆಲ್ಟ್ ಅನ್ನು ಕಾರವಾರದ ಕರಾಟೆಯ ಗ್ರಾಂಡ್ ಮಾಸ್ಟರ್ ಹನ್ಸಿ ಸಿ. ರಾಜನ್ ವಿತರಣೆ ಮಾಡಿದರು. ಚಾಂಪಿಯನ್ ಶಿಪ್‌ಗಾಗಿ ನಡೆದ ಪ್ರಣವಿ ಕಿಣಿ ಮತ್ತು ಆಯಿಷಾ ನಡುವೆ ನಡೆದ ಪಂದ್ಯ ಪ್ರೇಕ್ಷಕರನ್ನು ಕೂತುಹಲ ಮೂಡಿಸಿತು. ಪ್ರಣವಿಯ ಕಿಣಿ ಇವರ ಆಟದ ಕೆಚ್ಚನ್ನು ನೋಡಿದ ಪ್ರೇಕ್ಷಕ ಮಹ್ಮದ್ ಇಸ್ಮಾಯಿಲ್ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು.
ಭಟ್ಕಳ ಗುರುಮಠದ ಅಧ್ಯಕ್ಷ ಕೃಷ್ಣ ನಾಯ್ಕ, ಅಬಕಾರಿ ಇಲಾಖೆಯ ಸತೀಶ್ ನಾಯ್ಕ. ಸೆಂಟ್ ಥಾಮಸ್ ಶಾಲೆಯ ಮುಖ್ಯೋಪಾಧ್ಯಾಯ ಸ್ಯಾಮುಯಲ್ ವರ್ಗೀಸ್ ಶೋಟೊಕಾನ್ ಕರಾಟೆ ಸಂಸ್ಥೆಯ ಅಧ್ಯಕ್ಷರು ಈಶ್ವರ ನಾಯ್ಕ, ಸಂತೋಷ ಅಚಾರ್ಯ ಇತರರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top