ಎರಡು ಕೆರೆಗಳನ್ನು ಮುಚ್ಚಿ ಶಾಸಕರ ಸುನಿಲ್ ನಾಯ್ಕ ಪೆಟ್ರೋಲ್ ಬಂಕ್ ಇಕ್ಕೆಲಗಳಲ್ಲಿ ಸರ್ವಿಸ್ ರಸ್ತೆ ನಿರ್ಮಾಣ :ಸಾರ್ವಜನಿಕರ ಆಕ್ರೋಶ

ವರ್ಷಗಳಿಂದ ಶಿರಾಲಿಯಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಮಾಡಲು ಸಾರ್ವಜನಿಕರು ಬಿದಿಗಿಳಿದು ಪ್ರತಿಭಟನೆ ನಡೆಸಿದರು ಸ್ಪಂದಿಸದ ಸರಕಾರ

ಪಂಚಾಯತ್ ಗಮನಕ್ಕಿಲ್ಲದೆ ಶಾಸಕರ ಪೆಟ್ರೋಲ್ ಬಂಕಿನ ಆಸುಪಾಸಿನಲ್ಲಿ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ ಐ ಆರ್ ಬಿ ಕಂಪನಿ

ಭಟ್ಕಳ: ತಾಲೂಕಿನ ಬೆಂಗ್ರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ಥಳಿಯ ಪಂಚಾಯತ್ ಗಮನಕ್ಕಿಲ್ಲದೆ ಯಾವುದೆ ಚರಂಡಿಗಳನ್ನು ನಿರ್ಮಾಣ ಮಾಡದೆ ನಿಯಮವನ್ನು ಗಾಳಿಗೆ ತೂರಿ ಎರಡು ಕೆರೆಗಳನ್ನು ಮುಚ್ಚಿಹಾಕಿ ಶಾಸಕ ಸುನಿಲ್ ನಾಯ್ಕ ಅವರ ಪೆಟ್ರೋಲ್ ಬಂಕ್ ಇಕ್ಕೆಲಗಳಲ್ಲಿ ರಸ್ತೆ ನಿರ್ಮಾಣ ಮಾಡುತ್ತಿದ್ದು ಈ ಹಿನ್ನೆಲೆಯಲ್ಲಿ ಸ್ಥಳಿಯ ಸಾರ್ವಜನಿಕರು ಪ್ರತಿಭಟನೆ ನಡೆಸಿರುವುದು ಬೆಳಕಿಗೆ ಬಂದಿದೆ.

ಕುರುಡು ಕಾಂಚಾಣ ಕುಣಿಯುತಲಿತ್ತು ಕಾಲಿಗೆ ಬಿದ್ದವರ ತುಳಿಯುತಲಿತ್ತು ಎಂಬ ಗಾದೆ ತಾಲೂಕಿನ ಬೆಂಗ್ರೇ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಕ್ಷರಶ ಸತ್ಯವಾಗಿದೆ ವಿಕ್ಷಕರೆ ಉಳ್ಳವರು ಏನು ಮಾಡಿದರು ನಡೆಯುತ್ತದೆ ಎಂದರೆ ಸುಳ್ಳಲ್ಲ ಶಿರಾಲಿ ಗ್ರಾಮ‌ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕರು ತಮಗೆ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಮಾಡಿಕೊಡಿ ಇಲ್ಲದಿದ್ದಲ್ಲಿ ಅಪಘಾತ ಸಂಬವಿಸಿ ಸಾವು ನೊವುಗಳು ಸಂಬವಿಸುತ್ತದೆ ತಮಗೆ ಸರ್ವಿಸ್ ರಸ್ತೆ ನಿರ್ಮಿಸಿ ಕೊಡಿ ಎಂದು ಸ್ಥಳಿಯ ಸಾರ್ವಜನಿಕರು ಬಿದಿಗಿಳಿದು ಪ್ರತಿಭಟನೆ ಮಾಡಿದ್ದರು ಆ ಸಮಯದಲ್ಲಿ ಶಾಸಕ ಸುನಿಲ್ ನಾಯ್ಕ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದವರೆ ಎರಡು ಕಡೆಗಳಲ್ಲಿ ಈಗ ಬಿಜೆಪಿ ಸರಕಾರವಿದೆ ಆದರು ಕೂಡ ಸಾರ್ವಜನಿಕರ ಈ ಬೇಡಿಕೆ ಅರಣ್ಯರೊದವಾಗಿ ಹೊಯಿತೆ ಹೊರತು ಸರ್ವಿಸ್ ರಸ್ತೆ ನಿರ್ಮಾಣವಾಗಲೆ ಆದರೆ ನಮ್ಮ ಭಟ್ಕಳ ತಾಲೂಕಿನಲ್ಲಿ ಉಳ್ಳವರು ಅಧಿಕಾರ ಹೊಂದಿರುವವರು ಯಾವುದನ್ನು ಬಯಸಿದರು ಅದನ್ನು ಪಡೆದುಕೊಳ್ಳುತ್ತಾರೆ ಕಾನೂನು ವ್ಯಾಪ್ತಿಯಲ್ಲಿ ಆಗಿರಬಹುದು ಅಥವಾ ಇನ್ಯಾವುದೆ ಮಾರ್ಗಗಳಿಂದ ಆಗಿರಬಹುದು ಇದಕ್ಕೆ ಸ್ಪಷ್ಟ ಉದಾಹರಣೆ ಬೆಂಗ್ರೇ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶಾಸಕ ಸುನಿಲ್ ನಾಯ್ಕ ಅವರ ಪೆಟ್ರೋಲ್ ಬಂಕ್ ಇಕ್ಕೆಲಗಳಲ್ಲಿ ನಿಯಮಗಳೆಲ್ಲವನ್ನು ಗಾಳಿಗೆ ತೂರಿ ಸ್ಥಳಿಯ ಪಂಚಾಯತ್ ಗಮನಕ್ಕೆ ತರದೆ ರಾಷ್ಟಿಹೆದ್ದಾರಿ ಪಕ್ಕದಲ್ಲಿ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಮಂದಾಗಿದ್ದಾರೆ ಆದರೆ ಯಾವುದೆ ಚರಡಿ ನಿರ್ಮಿಸಿಲ್ಲಾ ರಸ್ತೆ ನಿರ್ಮಾಣದ ಹೇಸರಲ್ಲಿ ಎರಡು ಕೆರೆಗಳನ್ನು ಮುಚ್ಚುತಿದ್ದಾರೆ ಈ ಬಗ್ಗೆ ಪ್ರಶ್ನಿಸಿದರೆ ಕಾನೂನಿನಲ್ಲಿ ಪೆಟ್ರೋಲ್ ಬಙಕ್ ಇಕ್ಕೆಲಗಳಲ್ಲಿ ರಸ್ತೆ ನಿರ್ಮಾಣ ಅಗಬೇಕು ಎಂದು ಕಾನೂನಿನ ಪಾಠವನ್ನು ಮಾಡುತ್ತಾರೆ ಇಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಮಾಡಲು ಸಾರ್ವಜನಿಕರ ಅಡ್ಡಿಯಿಲ್ಲ ಆದರೆ ನಿಯಮ ಭಾಹಿರ ರಸ್ತೆ ನಿರ್ಮಾಣ ಮಾಡ ಬೇಡಿ ಕಾನೂನು ಭದ್ದವಾಗಿ ನಿರ್ಮಿಸಿ ಎಂದು ಸಾರ್ವಜನಿಕರು ಪ್ರತಿಭಟನೆಗೆ ಇಳಿದಿದ್ದಾರೆ . ಸಾರ್ವಜನಿಕ ಹಿತಾಸಕ್ತಿಗಾಗಿ ಶಿರಾಲಿಯಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಮಾಡಿ ಎಂದು ಪ್ರತಿಭಟನೆಗಿದರು ಕೂಡ ಸರಕಾರ ಸ್ಪಂದಿಸುವುದಿಲ್ಲಾ ಕಾನೂನಿನ ಮಾತಾಡುತ್ತದೆ ಆದರೆ ಅದೆ ಶಾಸಕ ಸುನಿಲ್ ನಾಯ್ಕ ಅವರ ಪೆಂಟ್ರೋಲ್ ಬಂಕ್ ಇರುವ ಕಾರಣ ಬೆಂಗ್ರೆಯಲ್ಲಿ ಎಲ್ಲಾ ನಿಯಮವನ್ನು ಗಾಳಿಗೆ ತೂರಿ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಮುಂದಾಗುತ್ತಾರೆ ಅದಕ್ಕೆ ನಾವು ಮೊದಲಿಗೆ ಹೇಳಿದ್ದು ಕುರುಡು ಕಾಂಚಾಣ ಕುಣಿಯುತಲಿತ್ತು ಕಾಲಿಗೆ ಬಿದ್ದವರ ತುಳಿಯುತಲಿತ್ತು ಎಂದು ಎಂತಹ ಹೊಲಸು ವ್ಯವಸ್ಥೆ ಅಲ್ಲವೆ ವಿಕ್ಷಕರೆ.

ಈ ಸಂದರ್ಬದಲ್ಲಿ ಪತ್ರಕರ್ತರಾದ ವಿಷ್ಣುದೇವಾಡಿಗ , ಸ್ಥಳಿಯ ಸಾರ್ವಜನಿಕರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top