ಭಟ್ಕಳ ಬೆಳ್ಕೆ ಗ್ರಾಮ ಪಂಚಾಯತ್ ಪಿಡಿಓ ನಡೆಯ ವಿರುದ್ದ ಸದಸ್ಯರ ಅಹೋ ರಾತ್ರಿ ಪ್ರತಿಭಟನೆ

ಪೋಲಿಸ ಅಧಿಕಾರಿ ಸಿಪಿಐ ಮಹಾಬಲೆಶ್ವರ ಅವರ ಮನವಿಗೆ ಸ್ಪಂದಿಸಿ ಅಹೋರಾತ್ರಿ ಧರಣಿಯನ್ನು ಕೈ ಬಿಟ್ಟ ಬೆಳಕೆ ಪಂಚಾಯತ್‌ ಸದಸ್ಯರು

ಭಟ್ಕಳ : ಬೆಳಕೆ ಪಂಚಾಯತ್‌ ಉಪಾಧ್ಯಕ್ಷ ಹಾಗೂ ಅಭಿವೃದ್ದಿ ಅಧಿಕಾರಿಯ ಆಡಳಿತ ಕಾರ್ಯ ವೈಖರಿಗೆ ಬೇಸತ್ತು ಪಂಚಾಯತ್‌ ಸದಸ್ಯರು ಅಹೋರಾತ್ರಿ ಧರಣಿಯನ್ನು ಬುದುವಾರ ಸಂಜೆಯಿಂದ ಪಕ್ಷಾತೀತವಾಗಿ ಆರಂಭಿಸಿದ್ದರು. ಈ ಬಗ್ಗೆ ಗ್ರಾಮಿಣ ಪೊಲಿಸ್ ಠಾಣೆಯ ಸಿಪಿಐ ಮಹಾಬಲೆಶ್ವರ ನಾಯ್ಕರ ಪ್ರತಿಭಟನಾಕಾರರಮನ ಒಲಿಸಿ ಧರಣಿಯನ್ನು ಕೈಬಿಡುವಂತೆ ಕೋರಿಕೊಂಡರು. ಪೋಲಿಸ ಅಧಿಕಾರಿಯ ಮಾತಿಗೆ ಸಮ್ಮತಿಸಿ ಸರಿ ಸುಮಾರು ರಾತ್ರಿ 10-00 ಗಂಟೆಯ ಹೊತ್ತಿಗೆ ಧರಣಿಯನ್ನು ಕೈ ಬಿಟ್ಟ ಘಟನೆ ಬೆಳಕೆ ಪಂಚಾಯತ್‌ ಆವರಣದಲ್ಲಿ ನಡೆದಿದೆ.

ಮಾಧ್ಯಮದೊಂದಿಗೆ ಮಾತನಾಡಿದ ಪಂಚಾಯತ ಸದಸ್ಯ ಜಗದೀಶ ನಾಯ್ಕ ಮಾತನಾಡಿ ಪಂಚಾಯತ್‌ ಅಭೀವೃದ್ದಿ ಅಧಿಕಾರಿ ಚಿದಾನಂದ ಜನ ಪ್ರತಿನಿಧಿಗಳ ಮಾತಿಗೆ ಬೆಲೆ ಕೋಡುತ್ತಿಲ್ಲ ಅದರ ಬದಲಿಗೆ ಅವರನ್ನು ಬೆದರಿಸುವಂತಹ ಕಾರ್ಯಗಳನ್ನು ಮಾಡುತ್ತಿದ್ದಾರೆ. ಸಾಮಾನ್ಯ ಸಭೆಯಲ್ಲಿ ಜರುಗುವ ನಡಾವಳಿಯ ಪ್ರತಿಯನ್ನು ಕೇಳಿದರು ಸಹ ನೀಡುವಂತಹ ಸೌಜನ್ಯವನ್ನು ಸಹ ತೊರಿಲ್ಲ. ಈ ಬಗ್ಗೆ ತಾಲೂಕು ಪಂಚಾತ್‌ನ ಇಒ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು ಸಹ ಈ ಬಗ್ಗೆ ಸೂಕ್ತವಾಗಿ ಸ್ಪಂದಿಸಿಲ್ಲ ಎಂದರು.

ಬೀದಿ ದೀಪಗಳ ಕುರಿತು 1.90 ಲಕ್ಷರೂಗಳನ್ನು ಕ್ರಿಯಾ ಯೋಜನೆಯಲ್ಲಿ ಉಪಾಧ್ಯಕ್ಷರು ಮತ್ತು ಪಿಡಿಓ ಜೊತೆಗೂಡಿ ಅವ್ಯಹಾರಗಳನ್ನು ನಡೆಸಿರುವ ಕುರಿತು ಆರೋಪಿಸಿದ ಅವರು ಹಲವು ಸದಸ್ಯರ ವಾರ್ಡಗಳಲ್ಲಿ ಇನ್ನು ತನಕ ಸರಿಯಾದ ಬೀದಿ ದೀಪಗಳನ್ನು ಉಪಾದ್ಯಕ್ಷರ ಕುಮ್ಮಕ್ಕಿನಿಂದ ಅಳವಡಿಸಿಲ್ಲ , ಸಾರ್ವಜನಿಕರ ಪ್ರಶ್ನೆಗೆ ಜನ ಪ್ರತಿನಿಧಿಗಳು ಉತ್ತರಿಸದಂತಾದ ಪರಿಸ್ಥಿತಿ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆಯುತ್ತಿದೆ.

12-02-2021 ರಂದು ಚುನಾಯಿತ ಜನಪ್ರತಿನಿಧಿಗಳ ಅಧೀಕಾರ ಪದಗ್ರಹಣ ಕಾರ್ಯಕ್ರಮ ನಡೆದು ಇಲ್ಲಿಯ ತನಕ 2 ವರ್ಷಗಳು ಕಳೆದರು ಕಿನಿಷ್ಠ 5 ರಿಂದ 6 ಗ್ರಾಮ ಸಭೆಗಳು ನಡೆಯಬೇಕಿತ್ತು ಆದರೆ 2 ವರ್ಷಗಳಲ್ಲಿ ನಡೆದಿದ್ದು 1 ಗ್ರಾಮ ಸಭೆ ಮಾತ್ರ ಪಿಡಿಒ ಈ ಪಂಚಾಯತ್‌ ವ್ಯಾಪ್ತಿಯ ಜನರಿಗೆ ಉತ್ತರಿಸಲು ಸಾಧ್ಯವಾಗದೇ ಪಲಾಯನ ಮಾರ್ಗ ಕಂಡುಕೊಡಿದ್ದು ಅವರ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿ, ಈ ತಿಂಗಳ ಡಿಸೆಂಬರ್‌ 29 ರಂದು ಗ್ರಾಮ ಸಭೆಯನ್ನು ನಡೆಸುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿತ್ತು . ಈ ಕಾರ್ಯಕ್ರಮಕ್ಕೆ ಆರೋಗ್ಯ ಸರಿ ಇರದ ಕಾರಣ ನೀಡಿ ರಜಾ ಪಡೆದು ಗ್ರಾಮ ಸಭೆಯಿಂದ ದೂರ ಇರುವುದಾಗಿ ಪಿಡಿಒ ಬೆದರಿಸಿರುವುದಾಗಿ ತಿಳಿಸಿದರು.

ಪಿಡಿಒರ ಕಾರ್ಯ ವೈಖರಿ ಜನಪ್ರತಿನಿಧಿಗಳ ಜೊತೆಗೆ ಹೀಗಾದರೆ ಜನ ಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದ ಅವರು ಸರ್ಕಾರದ ಬೆಳಕು ಯೋಜನೆಯ ಬಗ್ಗೆ ಸಾಮಾನ್ಯ ಸಭೆಯಲ್ಲಿ ಠರಾಯಿಸಿ ಹೆಸ್ಕಾಂಗೆ ಕಳಿಸುವಂತೆ ಸೂಚಿಸಿದ್ದರೂ ಅದನ್ನು ಕಳುಹಿಸದೇ ಬಡವರಿಗೆ ಸಿಗುವಂತಹ ಸೌಲತ್ತನ್ನು ಕಳುಹಿಸದೇ ಸಭೆಯಲ್ಲಿ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿ ಜನ ಸಾಮಾನ್ಯರಿಗೆ ದೊರೆಯುವಂತಹ ಸೌಲತ್ತನ್ನು ಸಿಗದಂತೆ ಮಾಡುತ್ತಿದ್ದಾರೆ.

ತಾಲೂಕಿನ ರೋಗ ಗ್ರಸ್ಥಪಂಚಾಯತ್‌ ಎಂದರೆ ಬೆಳಕೆ ಪಂಚಾಯತ್‌ ಎಂದು ಸಾರ್ವಜನಿಕರು ಆಡಿಕೂಳ್ಳುತ್ತಿದ್ದು 35 ವರ್ಷಗಳ ಅವಧಿಯಲ್ಲಿ ಇಂತಹ ಅಧಿಕಾರಿಯನ್ನು ಬೆಳಕೆ ಪಂಚಾಯತ್‌ ಕಂಡಿಲ್ಲ ಎಂದರು. ರಾಷ್ಟ ದ್ವಜದ ವಿಷಯವಾಗಿಯೂ ಸಹ ಇಂತಹದೇ ಉಢಾಪೆ ಮತ್ತು ನಿರ್ಲಕ್ಷಧೊರಣೆಗಳಿಂದಾಗಿ ಕೆಲ ದಿನಗಳ ಹಿಂದೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಗೊಂಡಿದ್ದರೂ ಸಹ ಇಂದಿನ ತನಕ ಪಿಡಿಓ ಈ ಬಗ್ಗೆ ಮಾಧ್ಯಗಳಿಗಾಗಲಿ ಯಾ ಜನ ಪ್ರತಿನಿಧಿಗಳಿಗೆ ಈ ಬಗ್ಗೆ ಸ್ಪಷ್ಟಿಕರಣ ನೀಡಿಲ್ಲ ಎಂದು ಆರೋಪಿಸಿದರು. ಪಿಡಿಒ ಜೊತೆಗೂಡಿ ಉಪಾಧ್ಯಕ್ಷರಾದ ರಾಮಾ ನಾಯ್ಕ ತಮ್ಮ ವೈಯಕ್ತಿಕ ಲಾಭಕ್ಕಾಗಿ ತಮ್ಮ ವೈಯಕ್ತಿಕ ಅಭಿವೃದ್ದಿ ಯಲ್ಲಿ ತೊಡಗಿಕೊಂಡಿರುವುದಾಗಿ ಆಪಾದಿಸಿದರು.

ಇನ್ನೋರ್ವ ಸದಸ್ಯ ಪಾಂಡು ನಾಯ್ಕ ಮಾತನಾಡಿ ಪಿಡಿಒ ಕಡು ಭ್ರಷ್ಠ ಅಧಿಕಾರಿಯಾಗಿದ್ದು ನರೇಗಾ ಕಾಮಗಾರಿಯಲ್ಲಿ ರೂ 20,000 ವನ್ನು ನೀಡುವಂತೆ ಬೇಡಿಕೆ ಇಟ್ಟಿದ್ದರು. ಅಂತೆಯೆ 5 ಲಕ್ಷ ಒಳಗಿನ ಯಾವುದೇ ಕಾಮಗಾರಿಗಳನ್ನು ಟೆಂಡರ್‌ ಇಲ್ಲದೇ ಮನಸೋ ಇಚ್ಚೆ ಜಾರಿಗೋಳಿಸುತ್ತಿದ್ದಾರೆ. ಪ್ರತಿಯೊಂದು ಕಾಮಗಾರಿಗಳಿಂದ ಹಣದ ಬೇಡಿಕೆಯನ್ನು ಪಿಡಿಒ ಇಡುತ್ತಿದ್ದು ಇದರಿಂದ ಅಭಿವೃದ್ದಿ ಕಾರ್ಯಗಳನ್ನು ನಡೆಸುವುದು ಸಾಧ್ಯವಾಗುತ್ತಿಲ್ಲ. ಕೆಲಸ ಮಾಡಲು ಗುತ್ತಿಗೆದಾರರು ಮುಂದೆ ಬರುತ್ತಿಲ್ಲ. ಸಾಲ ಮಾಡಿ ಕಾಮಗಾರಿ ಗತ್ತಿಗೆ ಪಡೆದವರು ಸಾಯುವ ಪರಿಸ್ತಿತಿ ನಿರ್ಮಾಣ ವಾಗಿದೆ ಎಂದರು. ಈ ಬಗ್ಗೆ ತಾಲೂಕ ಪಂಚಾಯತ್‌ ಇಒ ಬಳಿ ಕಳೆದ 3 – 4 ತಿಂಳಿನಿಂದ ಗಮನಕ್ಕೆ ತಂದಿರುವುದಾಗಿ ತಿಳಿಸಿದರು.

ಸಾರ್ವಜನಿಕ ಗ್ರಂಥಾಲಯ ಸೋರುತ್ತಿದ್ದು ಅದನ್ನು ರೀಪೇರಿಗೋಳಿಸಿ ಎಂದರೆ ಆರೋಗ್ಯ ಇಲಾಖೆ ಕಟ್ಟಡಕ್ಕೆ ಗ್ರಂಥಾಲಯವನ್ನು ಸ್ಥಳಾಂತರಿಸಿ ಕಾಮಗಾರಿಯಲ್ಲಿ ಅವ್ಯವಹಾರ ಮಾಡಿರುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಇಂತಹ ಒಡೆದು ಆಳುವ ನೀತಿಯನ್ನು ಹೊಂದಿರುವ ಅಭೀವೃದ್ದಿ ಅಧಿಕಾರಿಗಳ ಅವಶ್ಯಕತೆ ನಮಗೆ ಇಲ್ಲಾ ಇಂತಹ ಅಧೀಕಾರಿಗಳನ್ನು ಶಿಗ್ರವಾಗಿ ವರ್ಗಾವಣೆ ಮಾಡುವಂತೆ ಮಾಧ್ಯಮಗಳ ಮೂಲಕ ಹಿರಿಯ ಅಧಿಕಾರಿಗಳಲ್ಲಿ ವಿನಂತಿಸುವುದಾಗಿ ತಿಳಿಸಿದರು.

ಈ ಸಂಧರ್ಭದಲ್ಲಿ ಪಂಚಾಯತ್‌ ಸದಸ್ಯರಾದ ಹೇಮಾ ನಾಯ್ಕ ಮತ್ತು ಪರಮೇಶ್ವರ ಮೋಗೇರ ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top