ಭಟ್ಕಳದ ಡಾ ಶೈಲೇಶ ದೇವಾಡಿಗ ಅವರ ಮೇಲೆ ಸೇಡಿನಿಂದ ಪೊಕ್ಸೋ ಕೇಸ್ ದಾಖಲಿಸಲಾಗಿದೆ

ಸುಳ್ಳು ಪೊಕ್ಸೋ ಕೇಸನ್ನು ಕೈ ಬಿಡಿ ಇಲ್ಲವಾದಲ್ಲಿ ಸಾರ್ವಜನಿಕರ ಪ್ರತಿಭಟನೆ ಎದುರಿಸಲು ಸಿದ್ದರಾಗಿ

ಭಟ್ಕಳ ತಾಲೂಕಿನ ಜನ ಸ್ನೇಹಿಯಾಗಿರುವ ಡಾ ಶೈಲೇಶ ದೇವಾಡಿಗ ಅವರ ಮೇಲೆ ಹಲ್ಲೆ ಮಾಡಿ ಇವರ ವಿರುದ್ದ ಸೇಡಿನಿಂದ ಹಾಕಿರುವ ಸುಳ್ಳು ಪೊಕ್ಸೋ ಕೇಸನ್ನು ರದ್ದುಪಡಿಸುವ ಬಗ್ಗೆ ತಾಲೂಕ ತಹಶಿಲ್ದಾರ್ ಹಾಗು ಡಿ ವೈ ಎಸ್ ಪಿ ಅವರ ಮೂಲಕ ರಾಜ್ಯದ ಗ್ರಹ ಸಚಿವರಿಗೆ ಸಾರ್ವಜನಿಕರ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು .

ಭಟ್ಕಳ ತಾಲೂಕಿನಲ್ಲಿ ಕಳೆದ 3 ವರ್ಷಗಳಿಂದ ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿ ಹಾಲಿ ಭಟ್ಕಳ ಮುಖ್ಯ ರಸ್ತೆಯಲ್ಲಿ ಕ್ಲಿನಿಕ್ ನಡೆಸುತ್ತಿರುವ ಡಾ ಶೈಲೇಶ ದೇವಾಡಿಗ ಇವರು ಕಳೆದ 9 ತಿಂಗಳುಗಳಿಂದ ಶೀಥಲ ಗಾಂಧಿ ಅವರ ಮಾರುತಿ ನಗರದಲ್ಲಿ ಇರುವ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಕೆಲವು ದಿನಗಳ ಹಿಂದೆ ಡಾ ಶೈಲೇಶ ಅವರು ಬಾಡಿಗೆ ಮನೆ ಖಾಲಿ ಮಾಡಿದ್ದು ತಾವು ಅಡ್ವಾನ್ಸ ನಿಡಿದ್ದ ಹಣ 40000 ಹಣವನ್ನು ವಾಪಾಸ್ ಪಡೆಯಲು ಮಾಲಿಕರ ಹತ್ತಿರ ಹೋದಾಗ ಬಾಡಿಗೆದಾರರ ಕುಟುಂಬದ ಸದಸ್ಯರು ಮತ್ತು ರೂಪಾ ಗಾಂಧಿ ರವರ ಗಂಡ ದೀಪಕ್ ಶೇಟ್ಟಿ ಸೇರಿಕೊಂಡು ತಮ್ಮ ಸಿ ಸಿ ಟಿವಿ ಸಂಪರ್ಕ ಬಂದ್ ಮಾಡಿ ಹಲ್ಲೆ ಮಾಡಿರುತ್ತಾರೆ ಈ ಕಾರಣ ವೈದ್ಯರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಭಟ್ಕಳಕ್ಕೆ ಬಂದ ನಂತರ ಶೀತಲ್ ಗಾಂಧಿ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ದ ಭಟ್ಕಳ ಶಹರ ಪೋಲಿಸ್ ಠಾಣೆಯಲ್ಲಿ ದಿನಾಂಕ 01/12/2022 ರಂದು ದೂರು ಸಲ್ಲಿಸಿದ್ದು ಈ ದೂರು ಅರ್ಜಿಯ ಕುರಿತು ಪೋಲಿಸರು ಯಾವುದೇ ಕ್ರಮವನ್ನು ಇಂದಿನವರೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಮನವಿಯಲ್ಲಿ ದೂರಲಾಗಿದೆ.

  ಈ ಘಟನೆ ನಡೆದು ಐದು ದಿನಗಳ ಬಳಿಕ,  ಗಾಂಧಿ ಕುಟುಂಬಸ್ಥರು ಡಾ ಶೈಲೇಶ್ ಅವರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದುರುದ್ದೇಶದಿಂದ ಸುಳ್ಳು ದೂರು ನೀಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಡಾ. ಶೈಲೇಶ್ ಅವರ ವಿರುದ್ಧ ದಾಖಲಿಸಿರುವ ಪೋಕ್ಸೊ ಕೇಸನ್ನು ರದ್ದುಪಡಿಸಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮನವಿಯನ್ನು ಸಲ್ಲಿಸಲಾಯಿತು

ಈ ಸಂದರ್ಭದಲ್ಲಿ ನಾಮದಾರಿ ಸಮಾಜ ಅಧ್ಯಕ್ಷ ಕೃಷ್ಣ ನಾಯ್ಕ, ಆಸರಕೇರಿ ಸ್ವಾತಿ ದೇವಾಡಿಗ, ಶ್ರೀನಿವಾಸ ನಾಯ್ಕ, ಗಣಪತಿ ನಾಯ್ಕ, ವೆಂಕಟೇಶ ದೇವಡಿಗ, ದಿನೇಶ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top