ಭಟ್ಕಳ ಪುರಸಭಾ ಅಧ್ಯಕ್ಷ ತನ್ನ ಖಾಸಗಿ ಕಾಂಪ್ಲೇಕ್ಸ ಮುಂಬಾಗದಲ್ಲಿ ಪುರಸಭಾ ಹಣವನ್ನು ದುಂದು ವೆಚ್ಚ ಮಾಡುತ್ತಿದ್ದಾರೆ

ಪುರಸಭಾ ಸದಸ್ಯ ಪಾಸ್ಕಲ್ ಗೊಮ್ಸ ಆಕ್ರೋಶ

ಭಟ್ಕಳ: ತಾಲೂಕ ಪುರಸಭಾ ಅಧ್ಯಕ್ಷ ಪರ್ವೆಜ್ ಖಾಶಿಂ ಅವರು ಸಾರ್ವಜನಿಕ ಹಿತಾಸಕ್ತಿಯನ್ನು ಬದಿಗೊತ್ತಿ ತನ್ನ ಖಾಸಗಿ ಒಡೆತನದ ಕಾಪ್ಲೇಕ್ಸ ಮುಂಬಾಗದಲ್ಲಿ ಸ್ವ ಹಿತಾಸಕ್ತಿಗಾಗಿ ಇಂಟರ್ ಲಾಕ್ ‌ದುರಸ್ತಿ ಹೇಸರಲ್ಲಿ ಲಕ್ಷಾಂತ ಹಣವನ್ನು ಪೋಲು ಮಾಡುತ್ತಿದ್ದಾರೆ ಎಂದು ಪುರಸಭಾ ಸದಸ್ಯ ಆಕ್ರೋಶವನ್ನು ವ್ಯಕ್ತ ಪಡಿಸಿದರು.

ಭಟ್ಕಳ ಪುರಸಭೆ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ ಈ ಪುರಸಭೆ ಒಂದಿಲ್ಲೊಂದು ವಿವಾದಗಳನ್ನು ಯಾವಾಗಲು ತನ್ನ ಮೇಲೆ ಏಳೆದುಕೊಳ್ಳುತ್ತಲೆ ಇರುತ್ತದೆ ಈ ಹಿಂದೆ ಉರ್ದು ಬೊರ್ಡ ವಿವಾದದಿಂದ ಈಗಷ್ಟೆ ಚೇತರಿಸಿಕೊಳ್ಞಲುತ್ತಿದ್ದು ಈ ಪುರಸಭಾ ಅಧ್ಯಕ್ಷ ಪರ್ವೇಜ್ ಖಾಶಿಂ ಅವರು ತನ್ನ ಖಾಸಗಿ ಒಡೆತನದ ಕಾಂಪ್ಲೇಕ್ಸ ಮುಂಬಾಗದಲ್ಲಿ ಹಾಕಿರುವ ಇಂಟರ್ ಲಾಕ್ ಸಿಂಕಾಗಿದೆ ಎಂಬ ನೆಪವನ್ನು ಮುಂದಿಟ್ಟುಕೊಂಟು ಹಾಕಿರುವ ಇಂಟರ್ ಲಾಕ್ ಸಂಪೂರ್ಣವಾಗಿ ಕಿತ್ತುಹಾಕಿ ಹೊಸದಾಗಿ ಹಾಕಿಸಲು ಹೊರಟಿದ್ದಾರೆ ಇದು ಸಾರ್ವಜನಿಕ ವಲಯದ ಆಕ್ರೋಶಕ್ಕೆ ಕಾರಣವಾಗಿದೆ ತಮ್ಮ ಹಿತಾಸಕ್ತಿಗಾಗಿ ಪುರಸಭಾ ವ್ಯಾಪ್ತಿಯಲ್ಲಿ ಮಾಡಲು ಬೇಕಾದಷ್ಟು ಕೆಲಸಗಳಿದ್ದರು ಅದನ್ನು ಮಾಡದೆ ಈ ಪರ್ವೆಜ್ ಕಾಶಿಮ್ ಅವರು ಪುರಸಭಾ ಹಣದಿಂದ ತಮ್ಮ‌ ಕಾಂಪ್ಲೇಕ್ಸ ಮುಂಬಾಗದಲ್ಲಿ ಇಂಟರ್ ಲಾಕ್ ಹಾಕಿಸಲು ಹೊರಟಿದ್ದಾರೆ

ಈ ಬಗ್ಗೆ ಪುರಸಭಾ ಸದಸ್ಯ ಪಾಸ್ಕಲ್ ಗೊಮ್ಸ ಅವರು ಮಾತನಾಡಿ ಭಟ್ಕಳ ಪುರಸಭಾ ಅಧ್ಯಕ್ಷ ಪರ್ವೇಜ್ ಖಾಶಿಂ ಅವರು ತಮ್ಮ ಸ್ವ ಹಿತಾಸಕ್ತಿಗಳಿಗಾಗಿ ತಮ್ಮ ಖಾಸಗಿ ಕಾಂಪ್ಲೇಕ್ಸ ಮುಂಬಾಗದಲ್ಲಿ ಇಂಟರ್ ಲಾಕ್ ಅಳವಡಿಸುವ ನೆಪದಲ್ಲಿ ಸಾರ್ವಜನಿಕರ ಲಕ್ಷಾಂತರ ಹಣವನ್ನು ದುಂದುವೆಚ್ಚ ಮಾಡುತ್ತಿದ್ದಾರೆ ತಾಲೂಕಿನ ಮುಗ್ದುಮ್ ಕಾಲನಿ ಮುಂತಾದ ಪ್ರದೇಶದಲ್ಲಿ ರಸ್ತೆಗಳೆ ದುರಸ್ತಿಯಾಗಿಲ್ಲ ಚರಂಡಿಗಳ ಹುಳೆತ್ತುತ್ತಿಲ್ಲಾ ಸೊಳ್ಳೆಗಳಿಂದ ಸಾಂಕ್ರಾಮಿಕ ರೋಗ ಹರಡುವ ಲಕ್ಷಣ ಕಂಡುಬರುತ್ತಿದೆ ಹೀಗಿರುವಾಗ ಪುರಸಭಾ ಅಧ್ಯಕ್ಷ ಸಾರ್ವಜನಿಕ ರಸ್ತೆ ಎಂಬ ನೆಪವನ್ನು ಮುಂದಿಟ್ಟುಕೊಂಡುವ ತನ್ನ ಖಾಸಗಿ ಒಡೆತನದ ಕಾಂಪ್ಲೇಕ್ಸ ಮುಂಬಾಗದಲ್ಲಿ ಇಂಟರ್ ಲಾಕ್ ಸಿಂಕಾಗಿದೆ ಎಂದು ಸಾರ್ವಜನಿಕರ ಹಣವನ್ನು ಸ್ವಹಿತಾಸಕ್ತಿಗಾಗಿ ಪೋಲು ಮಾಡುತ್ತಿದ್ದಾರೆ ಎಂದು ಆಕ್ರೋಶವನ್ನು ವ್ಯಕ್ತ ಪಡಿಸಿದರು

ಒಟ್ಟಾರೆ ನಮ್ಮ ಭಟ್ಕಳ ಪುರಸಭಾ ವ್ಯಾಪ್ತಿಯಲ್ಲಿ ಎಷ್ಟೋ ರಸ್ತೆಗಳು ಎಷ್ಟೋ ಒಳ ಚರಂಡಿಗಳು ದುರಸ್ತಿಕಾಣದೆ ಸಾರ್ವಜನಿಕರು ತೊಂದರೆಯನ್ನು ಅನುಭವಿಸುತ್ತಿದ್ದಾರೆ ಹೀಗಿರುವಾಗ ಈ ಪುರಸಭಾ ಅಧ್ಯಕ್ಷ ಪರ್ವೇಜ್ ಖಾಶಿಂ ಅವರ ನಡೆ ಹಿಗೇಕೆ ತಮ್ಮ ಅಧಿಕಾರದ ಕೊನೆ ಎರಡು ಮೂರು ತಿಂಗಳಲ್ಲಿ ತಮ್ಮ ಈ ಒಂದು ಕೆಲಸವು ಮುಗಿಯಲಿ ಸ್ವಾಮಿ ಕಾರ್ಯದಲ್ಲಿ ಸ್ವ ಕಾರ್ಯವು ನಡೆಯಲಿ ಎಂದು ಈ ಕಾಮಗಾರಿಗೆ ಮುಂದಾದರೆ ಎಂಬ ಅನುಮಾನ ತಾಲೂಕಿನಾಧ್ಯಂತ ಮೂಡುತ್ತಿದೆ

WhatsApp
Facebook
Telegram
error: Content is protected !!
Scroll to Top