ನಾಡಿನಾದ್ಯಂತ ವಿಸ್ತರಿಸಿಕೊಳ್ಳಲ್ಲಿ ವಿಸ್ತಾರ ಸುದ್ದಿವಾಹಿನಿ ಗೋವಿಂದ ನಾಯ್ಕ

ಭಟ್ಕಳ: ಖ್ಯಾತ ಪತ್ರಕರ್ತರಾದ ಶ್ರೀಯುತ ಹರಿಪ್ರಕಾಶ ಕೋಣೆಮನೆ ಅವರ ನೇತ್ರತ್ವದಲ್ಲಿ ನಿಖರ ಮತ್ತು ಜನಪರ ಎಂಬ ಧ್ಯೇಯವಾಕ್ಯದೊಂದಿಗೆ ವಿಸ್ತಾರ ಕನ್ನಡ ಸುದ್ದಿವಾಹಿನಿ ನವೆಂಬರ ೬ನೇ ತಾರೀಖಿನಂದು ಲೋಕಾರ್ಪಣೆಗೊಂಡು ರಾಜ್ಯದ ಎಲ್ಲ ತಾಲೂಕುಗಳಲ್ಲಿ ಸುಮಾರು ೨೨೦ ಕಡೆಗಳಲ್ಲಿ ಈ ವಾಹಿನಿಯ ಪರಿಚಯ ಕಾರ್ಯಕ್ರಮದ ಮೂಲಕ ವಿಸ್ತರಿಸಿಕೊಳ್ಳುತ್ತಿದ್ದು
ಈ ಹಿನ್ನೆಲೆಯಲ್ಲಿ ಭಟ್ಕಳದ ಗುರುಸುಧೀಂದ್ರ ಕಾಲೇಜಿನಲ್ಲಿ ವಿಸ್ತಾರ ಸುದ್ದಿವಾಹಿನಿಯ ಪರಿಚಯದ ಕಾರ್ಯಕ್ರಮ ಇಂದು ನಡೆಯಿತು.

ಈ ಕಾರ್ಯಕ್ರಮವನ್ನು ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷರಾದ ಶ್ರೀ ಗೋವಿಂದ ನಾಯ್ಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವ ಸದವಕಾಶವನ್ನು ನನಗೆ ಒದಗಿಸಿದ ವಾಹಿನಿಗೆ ನಮನಗಳು ಎಂದು ಹೇಳಿದರು

. ಕಾರ್ಯಕ್ರಮದ ವೇದಿಕೆಯಲ್ಲಿ‌ ಭಟ್ಕಳ ಎಜುಕೇಶನ್ ಟ್ರಸ್ಟನ ಅಧ್ಯಕ್ಷರಾದ ಡಾ.ಸುರೇಶ ನಾಯಕ, ಹಿರಿಯ ಸಾಹಿತಿಗಳಾದ ಡಾ.ಸಯ್ಯದ್ ಝಮೀರುಲ್ಲ ಷರೀಫ್, ತಹಶೀಲ್ದಾರರಾದ ಡಾ.ಸುಮಂತ್ ಬಿ. , ಪಿ.ಎಸ್.ಐ. ಸುಮಾ ಆಚಾರ್ಯ, ಕಾಲೇಜಿನ ಪ್ರಾಂಶುಪಾಲ ಶ್ರೀ ಶ್ರೀನಾಥ ಪೈ ಅವರ ಉಪಸ್ಥಿತಿ ಹಾಗೂ ಜಿಲ್ಲಾ ವರದಿಗಾರರಾದ ಶ್ರೀ ಸಂದೀಪ ಸಾಗರ್ ಹಾಗೂ ತಾಲೂಕಾ ವರದಿಗಾರರಾದ ಶ್ರೀ ಭಾಸ್ಕರ ನಾಯ್ಕ ಮತ್ತು ಕಾಲೇಜಿನ ಪತ್ರಿಕೋದ್ಯಮದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ಭಾಗವಹಿಸುವಿಕೆಯಲ್ಲಿ ಕಾರ್ಯಕ್ರಮವು ಸರಳ ಮತ್ತು ಸುಂದರವಾಗಿ ಮೂಡಿಬಂದಿತು.

WhatsApp
Facebook
Telegram
error: Content is protected !!
Scroll to Top