ಸರ್ಕಾರದಿಂದ ಸಂಬಳ ಪಡೆಯುತ್ತಿರುವ ಅಧಿಕಾರಿಗಳು ಗಿಂಬಳದ ಆಸೆಗೆ ಬಿದ್ದಿದ್ದಾರೆ: ಸಂಜೀವಿನಿ ಮಹಿಳಾ ಒಕ್ಕೂಟ ಮತ್ತು ಮಹಿಳೆಯರ ಆಕ್ರೋಶ

ಸಿದ್ದಾಪುರ:- ಸರ್ಕಾರದಿಂದ ಸಂಬಳ ಪಡೆಯುತ್ತಿರುವ ಅಧಿಕಾರಿಗಳು ಗಿಂಬಳದ ಆಸೆಗೆ ಬಿದ್ದಿದ್ದಾರೆ. ಅಕ್ರಮ ಸಾರಾಯಿ ಬಂದಮಾಡಿ ಇಲ್ಲವೇ ನಮಗೂ ಪರವಾನಿಗೆ ಕೊಡಿ ನಾವು ಮನೆಯಿಂದಲೇ ಸರಾಯಿ ಮಾರುತ್ತೇವೆ.
ಪೋಲಿಸರು ರಕ್ಷಕರಾಗಿ ಭಕ್ಷಕರಾಗಬೇಡಿ. ನಿಮ್ಮಿಂದ ಭದ್ರತೆ ಇಲ್ಲದಾಗಿದೆ ಎಂದು ಹೀಗೆಂದು ಗುರುವಾರ ಸಂಜೀವಿನಿ ಮಹಿಳಾ ಒಕ್ಕೂಟ ಮತ್ತು ಮಹಿಳೆಯರು ಪಟ್ಟಣದಲ್ಲಿ ಅಕ್ರಮ ಸಾರಾಯಿ ಮಾರಾಟ ವಿರೋಧಿಸಿ ಪ್ರತಿಭಟನೆ ನಡೆಸಿ

ತಮ್ಮ ಆಕ್ರೋಶಫವನ್ನು ಹೊರಹಾಕಿದರು.
ಹೋರಾಟದ ನೇತೃತ್ವ ವಹಿಸಿದ್ದ ದೊಡ್ಮನೆ ಗ್ರಾಮ ಪಂಚಾಯತ್ ಸದಸ್ಯೆ ಸಾಧನ ಭಟ್ ಮಾತನಾಡಿ ಸ್ವಾತಂತ್ರ್ಯ ಸುವರ್ಣ ಮಹೋತ್ಸವ ವನ್ನು ಆಚರಿಸಿದರೂ ಮಹಿಳೆಯರು ಮ್ಮ ಹಕ್ಕಿಗಾಗಿ ಹೋರಾಡುತ್ತಿರುವುದು ನಮ್ಮ ದುರ್ದೈವವೇ ಸರಿ. ಅಕ್ರಮ ಸಾರಾಯಿ ಮಾರಾಟ ಸಂಪೂರ್ಣವಾಗಿ ನಿಲ್ಲಬೇಕು. ಕುಡಿತದಿಂದಾಗಿ ಮತ್ತು ಕುಡಿಯುವ ಹಣಕ್ಕಾಗಿ ಈಗಾಗಲೆ ನಮ್ಮಲ್ಲಿ ಕೊಲೆಗಳಾಗಿವೆ. ಸಮಾಜಿಕ ಸ್ವಾಸ್ಥ್ಯ ವನ್ನು ಹಾಳುಮಾಡುವ ಸಾರಾಯಿ ಬಂದಾಗಬೇಕು. ಇನ್ನು ಹದಿನೈದು ದಿನಗಳೊಳಗಾಗಿ ಅಕ್ರಮ ಸಾರಾಯಿ ಮಾರಾಟ ಬಂದ ಮಾಡದಿದ್ದರೆ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.

ವೇಧಾ ಆಯ್ ನಾಯ್ಕ ಬೇಡ್ಕಣಿ ಮಾತನಾಡಿ ಸಾರಾಯಿ ಕುಡಿತದಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ಇಲ್ಲವಾಗಿದೆ. ಪೋಲಿಸ್ ರಿಗೆ ಮಾಮೂಲಿ ನೀಡಿ ಸಾರಾಯಿ ಮಾಟಮಾಡುತ್ತಿದ್ದೇವೆ ಎನ್ನುವ ಅಕ್ರಮ ಸಾರಾಯಿ ಮಾಟಗಾರರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಮತ್ತು ಸಾರಾಯಿ ಮಾರಾಟ ಬಂದ ಮಾಡಬೇಕು ಎಂದು ಆಗ್ರಹಿಸಿದರು.

ಗೀತಾ ವಿ ನಾಯ್ಕ ಸೂರಗಾಲ್ ಮಾತನಾಡಿ ನಮ್ಮಲ್ಲಿ ಯಾರಾದರು ಸತ್ತರೆ ನೇರವಾಗಿ ಪೋಲಿಸ್ ರೆ ಹೊಣೆ ಯಾಗುತ್ತರೆ. ಪರವಾನಿಗೆ ಇಲ್ಲದೆ ಅಕ್ರಮ ಸಾರಾಯಿ ಮಾರಾಟ ಮಾಡುವವರಿಗೆ ನೀವು ಬರುವ ಮೊದಲೆ ಹೇಗೆ ಗೊತ್ತಾಗುತ್ತದೆ. ಸಾರಾಯಿಯಿಂದ ನಮಗೆ ಅನ್ನಕ್ಕೂ ಕಷ್ಟವಾಗಿದೆ. ಮನೆಯಲ್ಲಿರುವ ಎಲ್ಲಾ ವಸ್ತು ಗಳು ಸಾರಾಯಿ ಮಾರಾಟಗಾರರ ಮನೆ ಸೇರುತ್ತಿವೆ‌. ಸರಕಾರದ ಸಂಬಳ ಪಡೆಯುವ ನಿಮಗೆ ಗಿಂಬಳ ಏಕೇ?. ನಮಗೂ ನೌಕರಿ ಕೊಡಿಸಿ. ನೆಮ್ಮದಿಯಿಂದ ಜೀವನ ನಡೆಸುತ್ತೇವೆ ಎಂದು ಆಕ್ರೋಶ ಹೊರಹಾಕಿದರು.ತಾಲೂಕಿನ. ದೊಡ್ಮನೆ, ಕ್ಯಾದಗಿ, ಬಿಳಗಿ, ಇಟಗಿ, ಬೇಡ್ಕಣಿ ಮುಂತಾದ ಪಂಚಾಯತಿ ಗಳ ನೂರಾರು ಪ್ರತಿಭಟನಾಕಾರರು ಪಟ್ಟಣದ ನೆಹರು ಮೈದಾನ ದಿಂದ ಪ್ರತಿಭಟನೆ ಹೊರಟು ಘೋಷಣೆ ಕೂಗುತ್ತಾ ತಹಶಿಲ್ದಾರ ಕಚೇರಿ ಗೆ ಬಂದು ತಹಶಿಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ತಹಶಿಲ್ದಾರ ಸಂತೋಷ ಭಂಡಾರಿ ರವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವ ಭರವಸೆ ನೀಡಿದರು.

WhatsApp
Facebook
Telegram
error: Content is protected !!
Scroll to Top