ಈ ವರ್ಷದ ಕನ್ನಡ ರಾಜ್ಯೋತ್ಸವ ಮೆರವಣಿಗೆ ತಾಲೂಕ ಸೌದದದ ಆವರಣದಿಂದ ಪ್ರಾರಂಭವಾಗಲಿದೆ ಸಹಾಯಕ ಆಯುಕ್ತೆ ಮಮತಾ ದೇವಿ

ಭಟ್ಕಳ: ಈ ವರ್ಷದ ಕನ್ನಡ ರಾಜ್ಯೋತ್ಸವ ವಿಜ್ರಂಬಣೆಯಿಂದ ನಡೆಯಲ್ಲಿದ್ದು ಕನ್ನಡಮ್ಮನ ಮೆರವಣಿಗೆ ಈ ಬಾರಿ ತಾಲೂಕ ಆಡಳಿತ ಸೌದದಿಂದಲೆ ಪ್ರಾರಂಬವಾಗಲಿದೆ ಎಂದು ಸಹಾಯಕ ಆಯುಕ್ತೆ ಮಮತಾ ದೇವಿ ಹೇಳಿದರು


ಅವರು ತಾಲೂಕು ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಸಂಭಂದಿಸಿದಂತೆ ಕರೆದ ಪೂರ್ವಬಾವಿ ಸಬೆಯಲ್ಲಿ ಮಾತನಾಡುತ್ತಿದ್ದರು. ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಅಧೇಶದಂತೆ ರಾಜ್ಯದ ಪ್ರತಿ ತಾಲೂಕಿನಲ್ಲಿ ಏಕಕಾಲದಲ್ಲಿ ಕನ್ನಡದ ಕೋಟಿ ಕಂಠ ಗಾಯನ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕನ್ನಡಕ್ಕೆ ಸಂಬಂದಿಸಿದ ಗಾಯನವನ್ನು ಹಾಡಲಾಗುತ್ತದೆ. ತಾಲೂಕಿನಲ್ಲಿ ೪೦ ಸಾವಿರಕ್ಕೂ ಅಧಿಕ ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಯೋಜನೆ ರೂಪಿಸಲಾಗಿದೆ ಎಂದರಲ್ಲದೆ ತಾಲೂಕು ಆಡಳಿತದಿಂದ ನಗರದ ಮುಖ್ಯ ರಸ್ತೆಯ ಜೈನ್ ಬಸಿದಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಅದರಂತೆ ಹಾಡುವಳ್ಳಿಯ ಜೈನ್ ಬಸದಿಯಲ್ಲಿ , ಮುರುಡೇಶ್ವರದ ಆರ್.ಎನ್.ಎಸ್. ವಿದ್ಯಾನಿಕೇತನ ಶಾಲೆಯಲ್ಲಿ, ಬಸ್ತಿಯ ಪಬ್ಲಿಕ್ ಸ್ಕೂಲ ಆವರಣದಲ್ಲಿ, ನಗರದ ಶ್ರೀ ಗುರು ಸುದೀಂದ್ರ ಕಾಲೇಜು, ಆನಂದಾಶ್ರಮ ಹೈಸ್ಕೂಲು, ಸರಕಾರಿ ಕಾಲೇಜು ರಂಗಿಕಟ್ಟೆ, ಅಂಜುಮಾನ್ ಕಾಲೇಜು, ಬೆಳಕೆ ಹೈಸ್ಕೂಲು ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು.ಕಾರ್ಯಕ್ರಮಕ್ಕೂ ಮುನ್ನ ಅಕ್ಟೋಬರ ೨೭ರ ಒಳಗೆ ಕನ್ನಡ ಸಿರಿ ಡಾಟ್ ಕಾಂ ವೆಬ್ ನಲ್ಲಿ ಸಾರ್ವಜನಿಕರ ನೊಂದಣಿ ಮಾಡಬೆಕಾಗುತ್ತದೆ ಎಂದರಲ್ಲದೇ ಎಲ್ಲ ಸಂಘ ಸಂಸ್ಥೆಗಳ ಸದಸ್ಯರು ಸಾರ್ವಜನಿಕರು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ನವೆಂಬರ ೧ ರಂದು ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಬಗ್ಗೆ ರೂಪು ರೇಷೆಗಳನ್ನು ತಿಳಿಸಿದ ಅವರು ರಾಜ್ಯೋತ್ಸವ ಮೆರವಣಿಗೆ ಕಾರ್ಯಕ್ರಮದಲ್ಲಿ ವಿವಿಧ ಸ್ಥಬ್ದ ಚಿತ್ರಗಳೂ, ಮೈಸೂರು ದಸರಾದಲ್ಲಿ ಪಾಲ್ಗೊಂಡು ರಾಜ್ಯಕ್ಕೆ ೩ ನೇ ಸ್ಥಾನ ಪಡೆದು ನಮ್ಮೂರಿನ ಕೋಡಾರದ ಗೊಂಡರ ಡಕ್ಕೆ ಕುಣಿತ,ತಂಡ ಪಾಲ್ಗೊಳ್ಳಲಿದೆ. ಈ ಬಾರಿ ತಾಲೂಕು ಸೌಧದ ಆವರಣದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ತಾಲೂಕು ಕ್ರೀಡಾಂಗಣದಲ್ಲಿ ದ್ವಜಾರೋಹಣ ಕಾರ್ಯಕ್ರಮ ನಂತರ ಸಭಾ ಕಾರ್ಯಕ್ರಮ ನಡೆಯಲಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತದೆ ಈ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದರು. ಸಭೆಯಲ್ಲಿ ತಹಶೀಲ್ದಾರ ಸುಮಂತ. ವಿವಿಧ ಇಲಾಖೆಯ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರಮುಖರು, ವಿವಿಧ ಶಾಲಾ ಕಾಲೇಜುಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top