ಕೋಮು ಸಂಘರ್ಷ ಹುಟ್ಟಿಸಲು ಸುಳ್ಳು ದೂರು ನೀಡಿದ ಹಿಂದೂ ಕಾರ್ಯಕರ್ತರ ಬಂಧನ:

ಪೋಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ

ಭಟ್ಕಳ :ಮುರ್ಡೇಶ್ವರ ಹಾಗೂ ಭಟ್ಕಳದಲ್ಲಿ ಕೋಮು ಸಂಘರ್ಷ ಹುಟ್ಟಿಸಿ ಶಾಂತಿ ಕದಡಲು ಪ್ರಯತ್ನಿಸಿದ ಇಬ್ಬರು ಹಿಂದೂ ಕಾರ್ಯಕರ್ತರನ್ನು ಮುರಡೇಶ್ವರ ಠಾಣೆ ಪೂಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿ ಹೆಡೆಮುರಿ ಕಟ್ಟಿದ ಘಟನೆ ನಡೆದಿದೆ.
ಶಿರಾಲಿಯ ನವೀನ್ ಸೋಮಯ್ಯ ನಾಯ್ಕ ,ನವೀನ್ ವೆಂಕಟೇಶ ನಾಯ್ಕ ಬಂಧಿತ ಹಿಂದೂ ಕಾರ್ಯಕರ್ತರಾಗುದ್ದು ಇಬ್ಬರೂ ವಯಕ್ತಿಕ ಕಾರಣಕ್ಕೆ
ಇದೇ ತಿಂಗಳು ಎಂಟನೇ ತಾರೀಕಿನಂದು ತೆರ್ನಮಕ್ಕಿ ಚರ್ಚ ಎದುರು ಒಬ್ಬರಿಗೊಬ್ಬರು ಜಗಳ ಮಾಡಿಕೊಂಡು ನವೀನ್ ಸೋಮಯ್ಯ ನಾಯ್ಕ ನಿಗೆ ನವೀನ್ ವೆಂಕಟೇಶ ನಾಯ್ಕ ಕೀ ಚೈನ್ ನಿಂದ ತಲೆಗೆ ಹಲ್ಲೆ ನಡೆಸಿದ್ದನು.
ಆದರೇ ನವೀನ್ ಸೋಮಯ್ಯ ನಾಯ್ಕನು ತಾನು ಮಾವಿನಕಟ್ಟಾ ದಿಂದ ಮುರ್ಡೇಶ್ವರದ
ಕುಂಬಾರಕೇರಿಯಲ್ಲಿರುವ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಚಿಟ್ಟಿಹಕ್ಕಲು ಕ್ರಾಸ್ ಬಳಿ ಇರುವಾಗ ಟಿವಿಎಸ್ ಜೂಪಿಟರ್ ಸ್ಕೂಟಿಯಲ್ಲಿ ಬಂದ ವ್ಯಕ್ತಿಗಳು ರಾಟ್ ಮತ್ತು ಚೈನ್ ನಿಂದ ತನಗೆ ಹಲ್ಲೆಮಾಡಿ ಹೋಗಿದ್ದು ,ಅವರು ಹಿಂದಿ ಮಾತನಾಡುತಿದ್ದು ಬಿಳಿ ಪಂಚೆ ಉಟ್ಟಿದ್ದು ಅನ್ಯಕೋಮಿನವರು ಎಂದು ಮುರ್ಡೆಶ್ವರ ಠಾಣೆಯಲ್ಲಿ ಸುಳ್ಳು ದೂರು ನೀಡಿದ್ದನು.
ಎಸ್ಪಿ ಡಾ. ಸುಮನ್ ಡಿ ಪೆನ್ನೆಕರ್ ಮತ್ತು ಡಿವೈಎಸ್ಪಿ ಕೆ ಯು ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಪಿಐ ಮಹಾಬಲೇಶ್ವರ ನಾಯ್ಕ ತಂಡ ಪ್ರಕರಣವನ್ನು ಬೇದಿಸಿದ್ದು ದೂರು ನೀಡಿದ ಹಿಂದೂ ಕಾರ್ಯಕರ್ತ ನವೀನ್ ಭಟ್ಕಳದಲ್ಲಿ ಕೋಮು ಸಂಘರ್ಷ ಮೂಡಿಸಿ ಶಾಂತಿ ಕದಡಲು ಸುಳ್ಳು ದೂರು ನೀಡಿರುವುದಾಗಿ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಇದೀಗ ಸುಳ್ಳು ದೂರು ನೀಡಿದ ಹಾಗೂ ಹಲ್ಲೆ ನಡೆಸಿದ್ದ ಇಬ್ಬರನ್ನೂ ಇಂದು ಬಂಧಿಸುವ ಮೂಲಕ ಭಟ್ಕಳದಲ್ಲಿ ಉಂಟಾಗಬಹುದಿದ್ದ ಕೋಮು ಸಂಘರ್ಷವನ್ನು ಪೊಲೀಸರ ತಪ್ಪಿಸಿದ್ದಾರೆ. ಪೊಲೀಸರು ಈ ಕಾರ್ಯಕ್ಕೆ ಭಟ್ಕಳ ಹಾಗೂ ಮುರಡೇಶ್ವರ ಬಾಗದ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ
ವ್ಯಕ್ತವಾಗಿದೆ.

WhatsApp
Facebook
Telegram
error: Content is protected !!
Scroll to Top