ಎಸ್ ಪಿ ಸುಮನ್ ಡಿ ಪೆನ್ನೆಕರ್ ವರ್ಗಾವಣೆಯಲ್ಲಿ ಕಾಂಗ್ರೇಸಿನ ಮಾಜಿ ಶಾಸಕರ ಪಾತ್ರವಿಲ್ಲಾ

ವರ್ಗಾವಣೆ ಷಡ್ಯಂತ್ರದಲ್ಲಿ ನಮ್ಮ ಪಾತ್ರವಿದ್ದದ್ದೆ ಹೌದಾದದರೆ ತಾಕತ್ತಿದ್ದರೆ ಸಾಬಿತು ಪಡಿಸಿ ನಮ್ಮ ಪಾತ್ರ ಸಾಬಿತಾದರೆ ನಾವು ರಾಜಕಿಯ ನಿವೃತ್ತಿ ಪಡೆಯುತ್ತೆವೆ : ಮಾಜಿ ಶಾಸಕ ಮಂಕಾಳ ವೈದ್ಯ

ಮಾಜಿ ಶಾಸಕರನ್ನು ನಿಮ್ಮ ಬ್ರಷ್ಟಾಚಾರ ಮುಚ್ಚಿಹಾಕಲು ಎಳೆಯ ಬೇಡಿ ಜಿಲ್ಲೆಯಲ್ಲಿ ದಕ್ಷ ಪೊಲಿಸ್ ಅಧಿಕಾರಿಯನ್ನು ಉಳಿಸಿಕೊಳ್ಳುವ ಕೆಲಸ ಮಾಡಿ ಅದನ್ನು ಬಿಟ್ಟು ನಿಮ್ಮ ತಪ್ಪನ್ನು ಮುಚ್ಚಿಡಲು ಮಾಜಿ ಶಾಸಕರಾದ ನಮ್ಮ ಹೆಸರನ್ನು ಬಳಸಿಕೊಳ್ಳುವ ಬಂಡತನ ಪ್ರದರ್ಶಿಸ ಬೇಡಿ ಉತ್ತರ ಕನ್ನಡ ಜಿಲ್ಲೆಯ  ಪೊಲಿಸ್ ವರಿಷ್ಟಾಧಿಕಾರಿ ಡಾ ಸುಮನ್ ಡಿ ಪೆನ್ನೆಕರ್ ವರ್ಗಾವಣೆ ಷಡ್ಯಂತ್ರದ ವಿರುದ್ದ ಮಾಜಿ ಶಾಸಕ ಮಂಕಾಳ ವೈದ್ಯ ಆಕ್ರೋಶವನ್ನು ವ್ಯಕ್ತ ಪಡಿಸಿದರು.

ಉತ್ತರ ಕನ್ನಡ ಎಸ್ ಪಿ ಡಾ ಸುಮನ್ ಡಿ ಪೆನ್ನೆಕರ್ ಜಿಲ್ಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳಾದ ಮಟ್ಕಾ ಗಾಂಜಾ ವೇಷ್ಯವಾಟಿಕೆ ಇಸ್ಟಿಟಗಂತ ಅಕ್ರಮಗಳಿಗೆ ಬುಡ ಸಹಿತ ಕಿತ್ತುಹಾಕುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಇದು ಕೆಲವು ಪಟ್ಟ ಭದ್ರ ಹಿತಾಸಕ್ತಿಗಳಿಗೆ ಸಹ್ಯವಾಗಲಿಲ್ಲ ಇಂಥಾ ಕ್ರಿಮಿನಲ್ಸಗಳು ಜಿಲ್ಲೆಯ ಕೆಲವು ಭ್ರಷ್ಟರಾಜಕಾರಣಿಗಳ ಮೊರೆಹೊದ ಪರಿಣಾಮ ಇಂದು ಎಸ್ ಪಿ ಸುಮನ್ ಡಿ ಪೆನ್ನೆಕರ್ ವರ್ಗಾವಣೆಗೆ ತುದಿಗಾಲಲ್ಲಿ ನಿಂತು ಷಡ್ಯಂತ್ರವನ್ನು ಶುರುವಿಟ್ಟುಕೊಂಡಿದ್ದಾರೆ ಕಾರಣ ಜಿಲ್ಲೆಯಲ್ಲಿ ಈ ಅಧಿಕಾರಿ ವರ್ಗಾವಣೆಯ ವಿರುದ್ದ ಈಗಾಗಲೆ ಜನಾಂದೋಲನ ಪ್ರಾರಂಬವಾಗಿದ್ದು ಇಂಥಹ ದಕ್ಷ ಎಸ್ ಪಿ ಯಾದ ಸುಮನ್ ಡಿ ಪೆನ್ನೆಕರ್ ವರ್ಗಾವಣೆಯನ್ನು ಖಡಾಖಂಡಿತವಾಗಿ ವಿರೋದಿಸುತ್ತಿದ್ದಾರೆ ಪರಿಣಾಮ ಕೆಲವು ಜನ ಪ್ರತಿನಿದಿಗಳು ಕಾಗ್ರೇಸಿನ ಮಾಜಿ ಶಾಸಕರು ಕೂಡಾ ಎಸ್ ಪಿ ವರ್ಗಾವಣೆಯ ಬಗ್ಗೆ ಸಹಿ ಹಾಕಿದ್ದಾರೆ ಎಂಬ ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ಗುಸುಗುಸು ಜಿಲ್ಲೆಯಲ್ಲಿ ಹರಿದಾಡುತ್ತಿದೆ ಈ ಬಗ್ಗೆ ಜಿಲ್ಲೆಯ ಕಾಂಗ್ರೇಸ್ ಮಾಜಿ ಶಾಸಕರುಗಳಾದ ಮಂಕಾಳ ವೈದ್ಯ , ಶಾರದ ಶೆಟ್ಟಿ, ಸತೀಶ್ ಶೈಲ್ ಮುಂತಾದವರು ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ

ಈ ಬಗ್ಗೆ ಭಟ್ಕಳ ಹೊನ್ನಾವರ ಮಾಜಿ ಶಾಸಕರಾದ ಮಂಕಾಳ ವೈದ್ಯರು ಮಾತನಾಡಿ ಉತ್ತರ ಕನ್ಬಡ ಎಸ್ ಪಿ ವರ್ಗಾವಣೆ ತುಂಬ ಖಂಡನಿಯ ಅವರು ದಕ್ಷ ಅಧಿಕಾರಿಗಳಾಗಿದ್ದಾರೆ ಅವರನ್ನು ವರ್ಗಾವಣೆ ಮಾಡುವುದನ್ನು ನಾವು ಸಾರಾಸಗಾಟಾಗಿ ವಿರೋದಿಸುತ್ತೆವೆ ಇನ್ನು ಕೆಲವು ಶಾಸಕರು ಕಾಂಗ್ರೇಸಿನ ಮಾಜಿ ಶಾಸಕರು ಎಸ್ ಪಿ ವರ್ಗಾವಣೆಗೆ ಷಡ್ಯಂತ್ರ ನಡೆಸುತ್ತಾರೆ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಇದು ತುಂಬ ಖಂಡನಿಯ ಇವರು ತಾಕತ್ತಿದ್ದರೆ ನಾವು ಎಸ್ ಪಿ ವರ್ಗಾವಣೆಗೆ ಸಹಿ ಹಾಕಿರುವುದು ಸಾಬಿತು ಪಡೆಸಲಿ ಸಾಬಿತಾದ ಪಕ್ಷದಲ್ಲಿ ನಾವು ರಾಜಕಿಯ ನಿವೃತ್ತಿಯನ್ನೆ ತೆಗೆದುಕೊಳ಼್ಳುತ್ತೆವೆ ಹೊಲಸು ರಾಜಕಿಯವನ್ನು ಮಾಡುವುದನ್ನು ಬಿಟ್ಟು ಜಿಲ್ಲೆಯ ಪ್ರಾಮಾಣಿಕ ಎಸ್ ಪಿ ಸುಮನ್ ಡಿ ಪೆನ್ನೆಕರ್ ಅವರನ್ನು ಜಿಲ್ಲೆಯಲ್ಲಿ ಉಳಿಸಿ ಅವರಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಅವಕಾಶವನ್ನು ನಿಡಲಿ ಅದನ್ನು ಬಿಟ್ಟು ಬಂಡತನ ಪ್ರದರ್ಶಿಸಬೇಡಿ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು

ಒಟ್ಟಾರೆ ಈ ರಾಜಕಾರಣಿಗಳು ತಾವು ಎಷ್ಟು ಬಂಡರು ಸೋಗಲಾಡಿಗಳು ಎಂಬುವುದನ್ನು ಉತ್ತರ ಕನ್ನಡ ಪೊಲಿಸ್ ವರಿಷ್ಟಾಧಿಕಾರಿ ಡಾ ಸುಮನ್ ಡಿ ಪೆನ್ನೆಕರ್ ಅವರ ವರ್ಗಾವಣೆ ಷಡ್ಯಂತ್ರದ ಪ್ರಹಸನದಲ್ಲೆ ಸಾಬಿತಾದಂತಾಗಿದೆ ಈ ಎಲ್ಲಾ ಸೊಗಲಾಡಿತನಕ್ಕೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಜನತೆಯೆ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದೆ ಎಂದು ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ.

WhatsApp
Facebook
Telegram
error: Content is protected !!
Scroll to Top