ಕುಸಿಯುವ ಹಂತದಲ್ಲಿದೆ ಹುಲಿಗಿರ್ತಿ ದೇವಸ್ಥಾನದ ಸಮೀಪದ ಧರೆ

ಸಂಬಂದಿಸಿದ ಅಧಿಕಾರಿಗಳೆ ಇತ್ತ ಗಮನ ಹರಿಸಿ ಸಾರ್ವಜನಿಕರ ಆಗ್ರಹ

ಭಟ್ಕಳ : ಯಲ್ವಡಿ ಕವೂರ ಪಂಚಾಯತ್‌ ವ್ಯಾಪ್ತಿಯ ರಾಷ್ಟ್ರಿಯ ಹೆದ್ದಾರಿ 66 ರಕ್ಕೆ ಹೊಂದಿಕೊಂಡಿರುವ ಹುಲಿಗಿರ್ತಿ ದೇವಸ್ಥಾನದಿಂದ ಸರಿ ಸುಮಾರು 100 ಮೀಟರ್‌ ಅಂತರದಲ್ಲಿ ಧರೆ ಕುಸಿಯುವ ಹಂತದಲ್ಲಿದೆ.

ರಾಷ್ಟ್ರೀಯ ಹೆದ್ದಾರಿಯ -66 ರ ಈ ಮಾರ್ಗವಾಗಿ ಸಾವಿರಾರು ಜನ ಸಂಚರಿಸುತ್ತಾರೆ. ಈ ಮಾರ್ಗವವು ಸರ್ಪನಕಟ್ಟೆ ಗೊರಟೆ ಸೇರಿದಂತೆ ಭಟ್ಕಳ ನಗರಕ್ಕೆ ಗ್ರಾಮೀಣರು ಸಂಪರ್ಕಿಸುವ ಮುಖ್ಯ ಮಾರ್ಗ. ಈ ರಸ್ತೆ ಗೆ ಹೊಂದಿಕೊಂಡಂತೆ 10 ಮೀಟರ್‌ ದೂರದಲ್ಲಿ ಗುಡ್ಡ (ಧರೆ) ವಿದ್ದು . ಕಳೆದ ಮಳೆಗಾಲದಲ್ಲಿ ಇದೇ ಪ್ರದೇಶದಲ್ಲಿ ಧರೆ ಕುಸಿದು ಸಮಸ್ಯೆ ನಿರ್ಮಿಸಿತ್ತು . ಸದ್ಯದ ಹವಾಮಾನ ವೈಪರಿತ್ಯಗಳಿಂದಾಗಿ ಎಂದು ಮಳೆ ಬರುತ್ತದೋ ಹೆಳಲಸಾಧ್ಯವಾದ ಪರಿಸ್ಥಿತಿ.

ಈ ರಸ್ತೆ ಗೆ ಹೊಂದಿಕೊಂಡಿರುವ ಧರೆ ಒಂದೊಮ್ಮೆ ಎನಾದರು ಕುಸಿತಗೊಂಡರೆ ಪಾದಾಚಾರಿಗಳಿಗೆ ಅಥವಾ ವಾಹನ ಸವಾರರಿಗೆ ಸಾವು ನೋವುಗಳು ಸಂಭವಿಸುವಂತಹ ಸಾಧ್ಯತೆಗಳಿವೆ. ದುರ್ಘಟನೆಗಳು ಸಂಭಂವಿಸಿದ ಬಳಿಕ ಕ್ರಮ ಕೈಗೊಳ್ಳುವ ಬದಲು ಮುನ್ನೆ ಚರಿಕಾಕ್ರಮವಾಗಿ ಕುಸಿಯುವ ಹಂತದಲ್ಲಿರುವ ಧರೆಯನ್ನು ತೆರವುಗೊಳಿಸುವುದು ಸೂಕ್ತ ಎಂಬುವುದು ಸ್ಥಳಿಯ ನಿತ್ಯ ಸಂಚಾರಿಗಳ ಅಭಿಪ್ರಾಯ. ಈ ಬಗ್ಗೆ ತಾಲೂಕಾಡಳಿತ ಅಥವಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಬಗ್ಗೆ ಶಿಘ್ರವಾಗಿ ಸೂಕ್ತ ಕ್ರಮ ಕೈಗೊಳ್ಳಲಿ ಎಂಬದು ವರದಿಯ ಆಶಯ.

WhatsApp
Facebook
Telegram
error: Content is protected !!
Scroll to Top