ಉತ್ತರ ಕನ್ನಡ ಜಿಲ್ಲಾ ದೇವಾಡಿಗ ಸಮಾಜ ನೌಕರ ಸಮಾವೇಶ, ಪ್ರತಿಭಾ ಪುರಸ್ಕಾರ,

ನಿವೃತ್ತರಿಗೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಭಟ್ಕಳ : ನಮ್ಮ ದೇವಾಡಿಗ ಸಮಾಜದಲ್ಲಿ ಪ್ರತಿಭಾವಂತರು ಸಾಕಷ್ಟು ಸಂಖ್ಯೆಯಲ್ಲಿ ಇದ್ದು, ಅವರಿಗೆ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ಅಗತ್ಯವಾಗಿದೆ. ವಿದ್ಯಾರ್ಥಿಗಳು ಹಾಗೂ ಯುವ ಜನತೆ ತಂದೆ ತಾಯಿ, ಗುರು ಹಿರಿಯರು ಹಾಗೂ ತನ್ನ ಸಮಾಜವನ್ನು ಗೌರವಿಸಬೇಕು ಹಾಗೂ ತಾವು ಉನ್ನತ ಸ್ಥಾನವನ್ನು ಪಡೆದಾಗ ಅಥವಾ ಆರ್ಥಿಕವಾಗಿ ಸದೃಢರಾದಾಗ ತನ್ನ ಸಮಾಜದ ಏಳ್ಗೆಗಾಗಿ ಶ್ರಮಿಸಬೇಕು ಎಂದು ಶ್ರೀ ಸುಬ್ರಹ್ಮಣ್ಯ ಕೆ. ದೇವಾಡಿಗ, ಸಹಾಯಕ ಇಂಜಿನೀಯರ್, ಮಂಗಳೂರು ಮಹಾನಗರ ಪಾಲಿಕೆ, ಮಂಗಳೂರು ಇವರು ಹೇಳಿದರು.

ಅವರು ತಾಲೂಕಿನ ಬೆಂಗ್ರೆ ಯಕ್ಷೆಮನೆ ದೇವಾಡಿಗ ಸಭಾ ಭವನದಲ್ಲಿ ದಿನಾಂಕ: 09-10-2022 ರಂದು ಉತ್ತರ ಕನ್ನಡ ಜಿಲ್ಲಾ ದೇವಾಡಿಗ ಸಮಾಜ ನೌಕರ ಸಂಘದ ವತಿಯಿಂದ ಜರುಗಿದ ನೌಕರ ಸಮಾವೇಶ, ಪ್ರತಿಭಾ ಪುರಸ್ಕಾರ, ನಿವೃತ್ತರಿಗೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಶ್ರೀಮತಿ ಕಸ್ತೂರಿ ಎಸ್. ದೇವಾಡಿಗ, ಅಸಿಸ್ಟಂಟ್ ಮ್ಯಾನೇಜರ, ಕರ್ನಾಟಕ ಬ್ಯಾಂಕ್, ಸರಸ್ವತಿ ಪುರಂ, ಮೈಸೂರು, ಅತಿಥಿಗಳಾಗಿ ಶ್ರೀ ಉಮೇಶ ಜಿ. ಕೆರೆಕಟ್ಟೆ, ಶಿಕ್ಷಕರು ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ಸದಸ್ಯರು, ಭಟ್ಕಳ, ಶ್ರೀಮತಿ ಕೃಷ್ಣಾಬಾಯಿ ಎಸ್. ದೇವಾಡಿಗ, ಶಿಕ್ಷಕರು, ಸ.ಹಿ.ಪ್ರಾ.ಶಾಲೆ, ಮಣ್ಕುಳಿ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾಡಿಗ ಸಮಾಜ ನೌಕರ ಸಂಘದ ಅಧ್ಯಕ್ಷರಾದ ಶ್ರೀ ನಾರಾಯಣ ಎಂ. ದೇವಾಡಿಗ ಇವರು ವಹಿಸಿದ್ದರು. ಸಂಘದ ಸದಸ್ಯರಾದ ಶ್ರೀ ನಾಗೇಶ ದೇವಾಡಿಗ ಎಲ್ಲರನ್ನೂ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಕಾರ್ಯದರ್ಶಿ ಶ್ರೀ ಪದ್ಮಯ್ಯ ದೇವಾಡಿಗ ವರದಿ ವಾಚನ ಮಾಡಿದರು. ಶ್ರೀ ನಾಗೇಶ ದೇವಾಡಿಗ ಹಾಗೂ ಶ್ರೀ ಕೃಷ್ಣ ಎ. ದೇವಾಡಿಗ ಇವರು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಣದಲ್ಲಿ ಸಾಧನೆಗೈದ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಉದಯೋನ್ಮುಖ ಕ್ರೀಡಾ ಪ್ರತಿಭೆಗಳಿಗೆ, ಸಾಧಕರಿಗೆ ಹಾಗೂ ಸೇವಾ ನಿವೃತ್ತಿ ಹೊಂದಿದವರಿಗೆ ಸನ್ಮಾನಿಸಿ ಗೌರವಿಸಲಾಯಿತು.

WhatsApp
Facebook
Telegram
error: Content is protected !!
Scroll to Top