ಉತ್ತರ ಕನ್ನಡ ಎಸ್ ಪಿ ಡಾ ಸುಮನ್ ಡಿ ಪೆನ್ನೆಕರ್ ವರ್ಗಾವಣೆಗೆ ಇನ್ನಿಲ್ಲದ ಕಸರತ್ತು

ಕಾನೂನು ಬಾಹಿರ ಚಟುವಟಿಕೆಗೆ ಕಡಿವಾಣ ಹಾಕಿದ್ದೆ ಸುಮನ್ ಡಿ ಪೆನ್ನೆಕರ್ ವರ್ಗಾವಣೆಗೆ ಕಾರಣವಾಯಿತೆ

ಸೇವೆಗೆ ನಿಯುಕ್ತಿಗೊಂಡು ಒಂದು ವರ್ಷದ ಮೊದಲೆ ವರ್ಗಾವಣೆಗೆ ಪಿತೂರಿ ನಡೆಸಿದ ಭ್ರಷ್ಟ ರಾಜಕಾರಣಿಗಳು

ದಕ್ಷ ಎಸ್ ಪಿ ಸುಮನ್ ಡಿ ಪೆನ್ನೆಕರ್ ವರ್ಗಾವಣೆ ಮಾಡದಂತೆ ಜಿಲ್ಲೆಯಾಧ್ಯಂದ ಅಭಿಯಾನ

ಕಾರವಾರ : ದಕ್ಷತೆಗೆ ಹೆಸರಾಗಿದ್ದ ಉತ್ತರ ಕನ್ನಡ ಎಸ್ ಪಿ ಡಾ ಸುಮನ್ ಡಿ ಪೆನ್ನೆಕರ್ ವರ್ಗಾವಣೆಗೆ ಭ್ರಷ್ಟ ರಾಜಕಾರಣಿಗಳು ಪ್ರಯತ್ನವನ್ನು ನಡೆಸುತ್ತಿದ್ದು ಪ್ರಾಮಾಣಿಕತೆಗೆ ಹೆಸರಾಗಿದ್ದ ಎಸ್ ಪಿ ಸುಮನ್ ಡಿ ಪೆನ್ನೆಕರ್ ಅವರನ್ನು ವರ್ಗಾವಣೆ ಮಾಡದಂತೆ ಉತ್ತರ ಕನ್ನಡ ಜಿಲ್ಲೆಯಾಧ್ಯಂತ ಆಂದೊಲನ ಪ್ರಾರಂಬವಾಗಿದೆ ಈ ದಕ್ಷ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದೆ ಹೌದಾದಲ್ಲಿ ಮುಂದಿನ ದಿನದಲ್ಲಿ ನಾವು ಬಿ.ಜೆ.ಪಿ ಸರಕಾರಕ್ಕೆ ತಕ್ಕ ಪಾಠ ಕಲಿಸುವುದಾಗಿ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಟ್ಕಾ ಇಸ್ಪಿಟ್ ಗಾಂಜಾ ಹೀಗೆ ಅನೇಕ ಕಾನೂನು ಬಾಹಿರ ಚಟುವಟಿಕೆಗಳ ಮಾಪಿಯಾಗಳಿಗೆ ಜಿಲ್ಲೆಯ ಎಸ್ ಪಿ ಡಾ ಸುಮನ್ ಡಿ ಪೆನ್ನೆಕರ್ ಅವರು ಸಿಂಹಸ್ವಪ್ನರಾಗಿದ್ದರು ಜಿಲ್ಲೆಯಲ್ಲಿ ಕ್ರಿಮಿನಲ್ಸಗಳು ಡಾ ಸುಮನ್ ಅವರ ಹೆಸರು ಕೇಳಿದರೆ ನಿದ್ದೆಯಲ್ಲೂ ಬೆಚ್ಚಿ ಬಿಳುತ್ತಿದ್ದರು. ಜಿಲ್ಲೆಯಾಧ್ಯಂತ ಕಾನೂನು ಬಾಹಿರ ಚಟುವಟಿಕೆಗಳು ಸಂಪೂರ್ಣವಾಗಿ ನಿಂತೆ ಹೊಗಿತ್ತು ಎಂದರೆ ತಪ್ಪಾಗಲಿಕ್ಕಿಲ್ಲಾ ಆ ಪ್ರಮಾಣದಲ್ಲಿ ನಮ್ಮ ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ಪೋಲಿಸ್ ಅಧಿಕ್ಷಕರಾದ ಡಾ ಸುಮನ್ ಡಿ ಪೆನ್ನೆಕರ್ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದರು ಇವರ ಈ ಕರ್ತವ್ಯನಿಷ್ಟೆ ಜಿಲ್ಲೆಯ ಅಪರಾದಿಗಳ ಅಸ್ತಿತ್ವವೆ ಅಲುಗಾಡಿಸುವಂತೆ ಮಾಡಿತ್ತು ಈ ಅಪರಾದಿಗಳು ಕ್ರಿಮಿನಲ್ಸಗಳು ಹತಾಶರಾಗಿ ತಮ್ಮಂತೆ ಬ್ರಷ್ಟರಾಗಿರುವ ಉತ್ತರ ಕನ್ನಡ ಜಿಲ್ಲೆಯ ಭ್ರಷ್ಟ ರಾಜಕಾರಣಿಗಳು ಜನಪ್ರತಿನಿದಿಗಳ ಮೊರೆ ಹೊಗಿದ್ದಾರೆ ತಮ್ಮನ್ನು ದಯಮಾಡಿ ಬದುಕಿಸಿ ಎಂದು ಕಾಲಿಗೆ ಬಿದ್ದಿದ್ದಾರೆ ಆಗಲೆ ನೋಡಿ ಈ ಕಡು ಭ್ರಷ್ಟ ರಾಜಕಾರಣಿಗಳು ಪ್ರಾಮಾಣಿ ಅಧಿಕಾರಿ ಡಾ ಸುಮನ್ ಡಿ ಪೆನ್ನೆಕರ್ ಅವರಿಗೆ ಮೊದಮೊದಲು ಸಮಾಜಾಯಿಸಿ ನೀಡಿ ಅಷ್ಟು ಪ್ರಾಮಾಣಿಕತೆ ಒಳ್ಳೆಯದಲ್ಲಾ ಎಂದು ಬುದ್ದಿ ಹೇಳಿದ್ದಾರೆ, ವರ್ಗಾವಣೆ ಮಾಡುವುದಾಗಿ ಬೆದರಿಸಿದ್ದಾರೆ ಆದರೆ ಎಸ್ ಪಿ ಸುಮನ್ ಡಿ ಪೆನ್ನೆಕರ್ ಅವರು ಈ ಬರಗೆಟ್ಟ ಜನ ಪ್ರತಿನಿದಿಗಳ ಗೊಡ್ಡು ಬೆದರಿಕೆಗೆ ಸೊಪ್ಪನ್ನೆ ಹಾಕಲಿಲ್ಲ ಅಲ್ಲಿಗೆ ನೊಡಿ ಈ ಭ್ರಷ್ಟ ಜನ ಪ್ರತಿನಿದಿಗಳು ದಕ್ಷ ಅಧಿಕಾರಿಯ ವರ್ಗಾವಣೆಗೆ ಷಡ್ಯಂತ್ರವನ್ನು ಶುರುವಿಟ್ಟುಕೊಂಡಿದ್ದಾರೆ ಈ ರಾಜಕಿಯ ಪಕ್ಷಗಳು ಬಾಯಿ ಮಾತಿಗೆ ಮಾತ್ರ ಪ್ರಾಮಾಣಿಕ ಆಡಳಿತ ನಡೆಸುವ ಮಾತನ್ನು ಆಡುತ್ತದೆ ಆದರೆ ಅದೆ ರಾಜ್ಯ ಜಿಲ್ಲೆಗಳಲ್ಲಿ ನಿಜವಾಗಿಯು ದಕ್ಷ ಆಡಳಿತಕ್ಕಾಗಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ನೆಮ್ಮದಿಯಾಗಿ ತಮ್ಮ ಕರ್ತವ್ಯ ನಿರ್ವಹಿಸಲು ಅವಕಾಶವನ್ನೆ ಕೊಡುವುದಿಲ್ಲಾ ಇವರು ಎಷ್ಟು ಸೋಗಲಾಡಿಗಳಂತೆ ವರ್ತಿಸುತ್ತಾರೆಂದರೆ ಮಾಧ್ಯಮದ ಮುಂದೆ ನೈತಿಕತೆ ಪ್ರಾಮಾಣಿಕತೆಯ ಬಗ್ಗೆ ಉದ್ದುದ್ದ ಭಾಷಣ ಮಾಡಿ ಹಣದ ಗಂಟು ಕಟ್ಟಲು ಕ್ರಿಮಿನಲ್ಸ ಹಾಗು ಬ್ರಷ್ಟರನ್ನು ಬೇಳೆಸುತ್ತಾರೆ ಇಂದು ಜಿಲ್ಲೆಯ ಧಕ್ಷ ಪೊಲಿಸ್ ಅಧಿಕಾರಿ ಎಸ್ ಪಿ ಡಾ ಸುಮನ್ ಡಿ ಪೆನ್ನೆಕರ್ ತಮ್ಮ ಭ್ರಷ್ಟತೆಗೆ ಸಹಕರಿಸಲಿಲ್ಲ ಎಂಬ ಒಂದೆ ಒಂದು ಕಾರಣಕ್ಕೆ ಅವರನ್ನು ವರ್ಗಾವಣೆ ಮಾಡಲು ತುದಿಗಾಲಲ್ಲಿ ನಿಂತು ಷಡ್ಯಂತ್ರವನ್ನು ನಡೆಸುತ್ತಿದ್ದಾರೆ ಜಿಲ್ಲೆಯಲ್ಲಿ ಡಾ ಸುಮನ್ ಪೆನ್ನೆಕರ್ ವರ್ಗಾವಣೆ ಮಾಡಕೂಡದು ಎಂದು ಆಂದೊಲನವನ್ನೆ ಪ್ರಾರಂಬಿದ್ದಾರೆ ಆದರೆ ಈ ರಾಜಕಾರಣಿ ಜನಪ್ರತಿ ನಿದಿಗಳು ಬಂಡತನದಿಂದ ಅವರನ್ನು ವರ್ಗಾವಣೆ ಮಾಡಲು ಮಸಲತ್ತನ್ನು ಮಾಡುತ್ತಿದ್ದಾರೆ ಒಂದು ವೇಳೆ ನಮ್ಮ ಜಿಲ್ಲೆ ಇಂದ ಈ ಪ್ರಾಮಾಣಿಕ ಅಧಿಕಾರಿ ವರ್ಗಾವಣೆ ಆಗಿ ಹೊಗಿ ಬಿಟ್ಟರೆ ಆ ಅಧಿಕಾರಿಗೆ ನಷ್ಟವೇನು ಇಲ್ಲ ನಷ್ಟ ನಮ್ಮ ಉತ್ತರ ಕನ್ನಡ ಜನತೆಗೆ ಒಬ್ಬ ನಿಷ್ಟಾವಂತ ಅಧಿಕಾರಿಯ ಸೇವೆಯಿಂದ ಜಿಲ್ಲೆ ವಂಚಿತವಾಗುತ್ತದೆ ಆದರೆ ಈ ಜನಪ್ರತಿನಿದಿಗಳಿಗೆ ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಜನತೆ ಸರಿಯಾದ ಪಾಠವನ್ನು ಕಲಿಸುವುದು ಮಾತ್ರ ಶತಸಿದ್ದ ಎನ್ನುವುದು ಜನತೆಯ ಆಕ್ರೋಶದ ಮಾತಾಗಿದೆ

ಜಿಲ್ಲೆಯ ಎಸ್ ಪಿ ವರ್ಗಾವಣೆ ಮಾಡದಂತೆ ಜಿಲ್ಲೆಯ‌ ಜನತೆ ಮುಖಂಡರು ಪಕ್ಷ ಜಾತಿ ಧರ್ಮ‌ ಎಂಬ ಬೇದ ಬಾವಗಳಿಲ್ಲದೆ ಆಂದೋಲನವನ್ನು ಪ್ರಾರಂಬಿಸಿದ್ದಾರೆ ಆಕ್ರೊಶವನ್ನು ವ್ಯಕ್ತ ಪಡಿಸುತ್ತಿದ್ದಾರೆ

ಒಟ್ಟಾರೆ ಬಿಜೆಪಿ ಸರಕಾರವು ಕೂಡಾ ದಕ್ಷ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದರ ಮೂಲಕ ನಮ್ಮ ಭ್ರಷ್ಟಚಾರ ನಿರ್ಮೂಲನ ಮಂತ್ರ ಕೆವಲ ರಾಜಕಿಯ ಹಿತಾಸಕ್ತಿ ತಾನು ಕೂಡ ಭ್ರಷ್ಟ ಆಡಳಿತ ನಡೆಸಲು ಯಾವ ಪಕ್ಷಗಳಿಗೆ ಕಮ್ಮಿ ಇಲ್ಲಾ ಎಂಬುವುದನ್ನು ಸಾಭಿತು ಮಾಡಿದೆ ಎಂದು ಬಿಜೆಪಿ ಪಕ್ಷದ ನಿಷ್ಟಾವಂತ ಕಾರ್ಯಕರ್ತರು ಮುಖಂಡರೆ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ .

WhatsApp
Facebook
Telegram
error: Content is protected !!
Scroll to Top