ಶಾಸಕ ಸುನಿಲ್ ನಾಯ್ಕ ಅವರಿಗೆ ಸ್ವ ಪಕ್ಷದ ಕಾರ್ಯಕರ್ತರಿಂದಲೆ ಕಪ್ಪು ಬಾವುಟ ಪ್ರದರ್ಶನ

ಹೊನ್ನಾವರದಲ್ಲೂ ಶಾಸಕರ ಸ್ವಪಕ್ಷದ ವಿರೋದಿಗಳ ಬಣ ಬೆಳೆಯುತ್ತಿದೆಯೆ

ಹೊನ್ನಾವರ : ಶಾಸಕ ಸುನೀಲ ನಾಯ್ಕ ಕೋಟೆಬೈಲ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಮಯದಲ್ಲಿ ಅವರಿದೆ ಪಕ್ಷದ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡಿದ ಘಟನೆ ನಡೆದಿದೆ.

ತಮ್ಮ ಗ್ರಾಮದ ರಸ್ತೆ ಕೆಲಸ ಆಗಿಲ್ಲ, ಹಣ ಮಂಜೂರಿ ಮಾಡಿಲ್ಲ ಎಂದು ಶಾಸಕರ ಕಾಯಕ್ರಮದಲ್ಲಿ ಇರುವಾಗ ಪಕ್ಕದ ಮುಟ್ಟಾ ಗ್ರಾಮದ ಐದಾರು ಜನರು ಕಪ್ಪು ಬಾವುಟ ಹಿಡಿದು ಸಭಾಂಗಣದ ಸನಿಹದಲ್ಲೆ ನಿಂತಿದ್ದರು. ಬಾವುಟ ಎತ್ತಿ ಶಾಸಕರಿಗೆ ತೋರಿಸುತ್ತಲೆ ಇದ್ದರು.

ಸುಮಾರು ಹತ್ತು ನಿಮಿಷವಾದರೂ ಬಾವುಟ ಹಿಡಿದೆ ನಿಂತಿದ್ದ ನೋಡಿ ಸೇರಿರುವ ಶಾಸಕರ ಬೆಂಬಲಿಗರು ಮತ್ತು ಕಾರ್ಯಕರ್ತರು ಸ್ತಳಕ್ಕೆ ಜಮಾಹಿಸಿ ಮಾತಿಗೆ ಮಾತು ಬೆಳೆದು ಕೈ ಕೈ ಮೀಸಲಾಯಿಸಿದ ಘಟನೆ ನಡೆಯಿತು. ನಂತರ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬಂದು ಪ್ರತಿಭಟನೆ ನಿರತರನ್ನು ಕಳುಹಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ನಂತರ ವೇದಿಕೆಯಲ್ಲಿ ಭಾಷಣದ ವೇಳೆ ವಿಷಯ ಪ್ರಸ್ತಾಪಿಸಿದ ಶಾಸಕರು ಬಾವುಟ ಹಿಡಿದು ಬರುವ ಬದಲು ವಿಷಯವನ್ನು ಗಮನಕ್ಕೆ ತಂದಿದ್ದರೆ ಅವರ ಕೆಲಸ ಇಂದೆ ಪ್ರಾರಂಭ ಮಾಡುತ್ತಿದೆ. ಅವರು ಕೂಡ ನಮ್ಮವರೇ, ನೆರೆಯ ನಮ್ಮ ಪಕ್ಷದ ಕಾರ್ಯಕರ್ತರಾಗಿ ಯಾಕೆ ಈ ರೀತಿ ಮಾಡಿದರೂ ಗೊತ್ತಿಲ್ಲ. ಆ ಭಾಗದ ಎರಡು ರಸ್ತೆಗೆ ಈಗಾಗಲೇ ಹಣ ಹಾಕಲಾಗಿದೆ. ೪೦ ಲಕ್ಷ ವೆಚ್ಚದಲ್ಲಿ ರಸ್ತೆ ನಿಮಾಣವಾಗಲಿದ್ದು, ಈ ವಾರವೇ ಕಾಮಗಾರಿಗೆ ಚಾಲನೆ ನೀಡಲಿದ್ದೇನೆ. ಕಾರ್ಯಕರ್ತರಿಂದ ಏನಾದರೂ ತೊಂದರೆ ಆದರೆ ಅವರ ಪರವಾಗಿ ಬಹಿರಂಗ ಕ್ಷಮೆ ಕೇಳುತ್ತೇನೆ ಎನ್ನುವ ಮೂಲಕ ಘಟನೆಯ ಕಹಿ ನೆನಪನ್ನು ಮರೆ ಮಾಚಲು ಪ್ರಯತ್ನಿಸಿದರು

ಒಟ್ಟಾರೆ ಇದನ್ನು ಗಮನಿಸಿದರೆ ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಬಿಜೆಪಿಯಲ್ಲಿ ಎಲ್ಲವೂ ಸರಿ ಇದೆ ಎಂದು ಶಾಸಕರು ಹೇಳುತ್ತಿದ್ದರು ಯಾವುದು ಸರಿ ಇಲ್ಲಾ , ಪಕ್ಷದ ಕಾರ್ಯಕರ್ತರಲ್ಲಿ ಅಸಮಧಾನವಿದೆ ಎನ್ನುವ ಆರೋಪಕ್ಕೆ ಇಂದಿನ ಕಪ್ಪು ಬಾವುಟದ ಪ್ರಕರಣ ಪುಷ್ಠಿ ನೀಡಿದ್ದು, ಇದು ಶಾಸಕರ ಎದುರೆ ಮತ್ತೊಮ್ಮೆ ಜಗಜ್ಜಾಹಿರಾಗಿದೆ. ಪರೇಶ ಮೆಸ್ತಾ ಪ್ರಕರಣದ ಕುರಿತಾಗಿ ಸಿಬಿಐ ಸಲ್ಲಿಸಿದ್ದ ಬಿ.ರಿರ್ಪೊಟ್ ವರದಿಯಿಂದ ಮುಜಗರಕ್ಕೊಳಗ್ಗಾಗಿದ್ದ ಬಿಜೆಪಿ ಪಕ್ಷದ ಕಾರ್ಯಕರ್ತರ ಬಹಿರಂಗವಾಗಿ ಅಸಮಧಾನದ ಜೊತೆ ಕಪ್ಪು ಬಾವುಟ ಪ್ರದರ್ಶನದ ಬೆಳವಣಿಗೆಯನ್ನು ಯಾವ ರೀತಿಯಾಗಿ ನಿಭಾಯಿಸಲಿದೆ ಎನ್ನುವುದು ಕಾದು ನೋಡಬೇಕಿದೆ ಶಾಸಕ ಸುನಿಲ್ ನಾಯ್ಕ ರಾಜಕಿಯ ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ನಡೆಸುತ್ತಿರುವುದು ಎಷ್ಟು ಸತ್ಯವೊ ಹಾಗೆ ಅವರ ಪ್ರಯತ್ನಗಳೆಲ್ಲವು ಹೊಳೆಯಲ್ಲಿ ಹುಣಸೆ ಹಣ್ಣು ಕಿವುಚಿದಂತಾಗುತ್ತಿರುವುದು ಅಷ್ಟೆ ಕಟು ಸತ್ಯ

WhatsApp
Facebook
Telegram
error: Content is protected !!
Scroll to Top