ಸಿದ್ದಾಪುರದಲ್ಲಿ ನಾಡಹಬ್ಬ ಉತ್ಸವ ಸಮಿತಿಯಿಂದ ದಸರಾ ಆಚರಣೆ

ಸಿದ್ದಾಪುರ:- ಪಟ್ಟಣದಲ್ಲಿ ಮೊದಲನೇ ವರ್ಷದಲ್ಲಿ ನಾಡಹಬ್ಬ ಉತ್ಸವ ಸಮಿತಿಯಿಂದ ಆಚರಿಸಲ್ಪಟ್ಟ ದಸರಾ ಆಚರಣೆ ಆಚರಣೆಯು ಒಂಬತ್ತು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಪ್ರತಿದಿನ ವಿಶೇಷ ಪೂಜಾ ಕಾರ್ಯಕ್ರಮ, ಪ್ರಸಾದ ವಿತರಣೆ, ಸಂಜೆ ಸಂಗೀತ ಕಾರ್ಯಕ್ರಮ ಯಶಸ್ವಿಯಾಗಿ ನಡೆದವು. ಜನಪ್ರತಿನಿಧಿಗಳು, ಗಣ್ಯರು, ಸಾರ್ವಜನಿಕರು, ಭಕ್ತರು ಶ್ರೀ ದೇವಿಗೆ ಪ್ರತಿನಿತ್ಯ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
ಪಟ್ಟಣದ ಎಸ್ ಬಿ. ಐ ಬ್ಯಾಂಕ್ ಸಮೀಪ ಅಂಬೇಡ್ಕರ್ ಸರ್ಕಲ್ ಬಳಿ ಪ್ರತಿಷ್ಠಾಪಿಸಿದ ಉತ್ಸವ ಮೂರ್ತಿ ವಿಸರ್ಜನೆ ಕಾರ್ಯಕ್ರಮವು ಬುಧವಾರ ನಡೆಯಿತು.
ಪ್ರಥಮ ವರ್ಷದ ಪ್ರತಿಷ್ಠಾಪನೆ ಕಾರ್ಯಕ್ರಮವಾಗಿದ್ದರೂ ಸಹ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದು ಜನ ಮೆಚ್ಚುಗೆಗೆ ಪಾತ್ರವಾಯಿತು.
ವಿಸರ್ಜನೆ ಮೆರವಣಿಗೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡು ಡಿಜೆ ಯ ತಾಳಕ್ಕೆ ಹೆಜ್ಜೆ ಹಾಕಿದರು. ಹುಲಿವೇಷ ನೃತ್ಯ ಜನರ ಗಮನ ಸೆಳೆಯಿತು. ಡೊಳ್ಳು ಕುಣಿತ ಮೆರವಣಿಗೆಗೆ ವಿಸರ್ಜನೆ ಯ ಮೆರಗು ಹೆಚ್ಚಸಿತ್ತು.
ಪಟ್ಟಣದ ಬಾಲಿಕೊಪ್ಪ ಕೆರೆಯಲ್ಲಿ ಮೂರ್ತಿಯನ್ನು ವಿಸರ್ಜಿಸುವುದರೊಂದಿಗೆ ಅತ್ಯಂತ ವಿಜೃಂಭಣೆಯಿಂದ ಪ್ರಥಮ ವರ್ಷದ ಆಚರಣೆ ಸಂಪನ್ನಗೊಂಡಿತು.

WhatsApp
Facebook
Telegram
error: Content is protected !!
Scroll to Top