ಮುರ್ಡೆಶ್ವರ ಮಹಾಂಕಾಳಿಕಾ ಅಮ್ಮನವರ ದೇವಸ್ಥಾನದಲ್ಲಿ ವಿಜ್ರಂಬಣೆಯಿಂದ ನಡೆದ ನವರಾತ್ರಿ ಉತ್ಸವ  

ಭಟ್ಕಳ ತಾಲೂಕ ಮುರ್ಡೆಶ್ವರ ಕನ್ನಡ ಶಾಲೆಯ ಪಕ್ಕದಲ್ಲಿರುವ ಮಹಾಂಕಾಳಿಕಾ ಅಮ್ಮನವರ ಹಾಗು ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ 9 ದಿನದ ನವರಾತ್ರಿ ಉತ್ಸವ ಅತಿ ವಿಜ್ರಂಬಣೆಯಿಂದ ನಡೆಯಿತು.

ದಿನಾಂಕ 26/09/2022 ಇಂದ 05/09/2022 ರ ವರೆಗೆ  ನವರಾತ್ರಿ ಉತ್ಸವ ಅತಿ ವಿಜ್ರಂಬಣೆಯಿಂದ ನಡೆಯುತ್ತಿದ್ದು  ಸಾವಿರಾರು ಭಕ್ತಾಧಿಗಳು ಶ್ರೀ  ದೇವಿಯ ಕ್ರಪೆಗೆ ಪಾತ್ರರಾಗಿದ್ದಾರೆ.  ಈ ದೇವಿ ದೇವಸ್ಥಾನವು ಅತಿ ಪುರಾತನ ಪರಂಪರೆಯನ್ನು ಹೊಂದಿರುವ ದೇವಸ್ಥಾನವಾಗಿದ್ದು  ದೇವಿಯನ್ನು ನಂಬಿಬರುವ ಭಕ್ತರನ್ನು ಆ ಕರುಣಾಮಯಿ ಅಮ್ಮ ಯಾವತ್ತು ಕೈ ಬಿಡಲಾರಳು ಎಂಬ  ಅನೇಕ ಸತ್ಯ ನಿದರ್ಶನಗಳಿವೆ

ಈ ದೇವಸ್ಥಾನದ ಅಭಿವೃದ್ದಿಗೆ ಭಕ್ತಾಧಿಗಳು ಕೈಜೊಡಿಸಬೇಕು ಎನ್ನುವುದು ದೇವಸ್ಥಾನ ಆಡಳಿತ ಕಮಿಟಿಯ ಮಾತಾಗಿದೆ

ಈಗಾಗಲೆ ಈ ದೇವಸ್ಥಾನದ ಅಭಿವೃದ್ದಿಗೆ ಶಾಸಕ ಸುನಿಲ್ ನಾಯ್ಕ ಅವರು ಎಂಟು ಲಕ್ಷ ಅನುದಾನ ಮಂಜುರು ಮಾಡಿಸಿದ್ದು ಇನ್ನು ಹದಿನೆಂಟು ಲಕ್ಷ ಅನುದಾನ ಬಿಡುಗಡೆ ಮಾಡಿಸುವುದಲ್ಲದೆ ತಮ್ಮ ವಯಕ್ತಿಕ ಸಹಾಯಧನವನ್ನು ನಿಡುವ ಬರವಸೆಯನ್ನು ನಿಡಿದ್ದಾರೆ

ಒಟ್ಟಾರೆ ಈ ದೇವಸ್ಥಾನ ಇನ್ನು ಹೆಚ್ಚಿನ ಉತ್ತರೋತ್ತರ ಅಭಿವೃದ್ದಿ ಕಾಣಬೇಕು ಎನ್ನುವುದು ಸಾರ್ವಜನಿಕರ ಆಶಯವಾಗಿದೆ

WhatsApp
Facebook
Telegram
error: Content is protected !!
Scroll to Top