ತಾಲೂಕಾ ಕಸಾಪ ವತಿಯಿಂದ ಶಿಕ್ಷಕರಿಗಾಗಿ ಕವನ ರಚನಾ ಸ್ಪರ್ಧೆ

ಬಹುಮಾನ ವಿತರಣೆ.


ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವದ ಸಂಭ್ರಮ ಎಂಬ ವಿಷಯದ ಕುರಿತು ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರು ಹಾಗೂ ಕಾಲೇಜು ಉಪನ್ಯಾಸಕರುಗಳಿಗೆ ಕವನ ರಚನಾ ಸ್ಪರ್ಧೆಯನ್ನು ಆಯೋಜಿಸಿತ್ತು.‌ ಪ್ರಾಥಮಿಕ‌ ವಿಭಾಗದಲ್ಲಿ ಸುಮಲತಾ ಡಿ.ನಾಯ್ಕ, ಸ.ಹಿ.ಪ್ರಾ.ಶಾಲೆ ಹೊನ್ನೆಮಡಿ ಪ್ರಥಮ, ಪರಮೇಶ್ವರ ನಾಯ್ಕ, ಸ.ಹಿ.ಪ್ರಾ. ಶಾಲೆ ಕೊಡ್ಸೂಳ್ ದ್ವಿತೀಯ, ಸೌಮ್ಯ ದೇವಾಡಿಗ ಸ.ಕಿ.ಪ್ರಾ.ಶಾಲೆ, ಕೆರೆಗದ್ದೆ ತೃತೀಯ ಹಾಗೂ ವಿಜಯಕುಮಾರ ನರ್ವೇಕರ ಸ.ಕಿ.ಪ್ರಾ. ಶಾಲೆ ಹೇರೂರು, ಎಚ್.ಎನ್.ನಾಯ್ಕ ಮಾದರಿ ಹಿ.ಪ್ರಾ.ಶಾಲೆ ಚಿತ್ರಾಪುರ ಇವರುಗಳು ಪ್ರೋತ್ಸಾಹಕ ಬಹುಮಾನ ಪಡೆದರು. ಪ್ರೌಢಶಾಲಾ ವಿಭಾಗದಲ್ಲಿ ಎನ್.ಜಿ.ಗೌಡ ಸರ್ಕಾರಿ ಪ್ರೌಢಶಾಲೆ ಬೆಳ್ಕೆ ಪ್ರಥಮ,ಸವಿತಾ ನಾಯ್ಕ ಸರ್ಕಾರಿ ಪ್ರೌಢಶಾಲೆ ಸೊನಾರಕೇರಿ ದ್ವಿತೀಯ, ಶಿವಮ್ಮ ಗೊಂಡ ಸರ್ಕಾರಿ ಉರ್ದು ಪ್ರೌಢಶಾಲೆ ನವಾಯತ ಕಾಲನಿ ತೃತೀಯ ಹಾಗೂ ಕುಮಾರ ನಾಯ್ಕ ಸರ್ಕಾರಿ ಪ್ರೌಢಶಾಲೆ ಕುಂಟವಾಣಿ, ವಿಮಲಾ ಪಟಗಾರ ಸರ್ಕಾರಿ ಪ್ರೌಢಶಾಲೆ ತೆಂಗಿನ ಗುಂಡಿ ಪ್ರೋತ್ಸಾಹಕ ಬಹುಮಾನ ಪಡೆದುಕೊಂಡರು. ಕಾಲೇಜು ವಿಭಾಗದಲ್ಲಿ ವಿಶ್ವನಾಥ ಭಟ್ ಗುರು ಸುಧೀಂದ್ರ ಕಾಲೇಜು ಪ್ರಥಮ, ಹೇಮಾವತಿ ನಾಯ್ಕ ಬೀನಾ ವೈದ್ಯ ಕಾಲೇಜು ದ್ವಿತೀಯ, ಪೆಟ್ರಿಕ್ ಟೆಲ್ಲಿಸ್ ಆನಂದಾಶ್ರಮ ಪ.ಪೂ.ಕಾಲೇಜು ತೃತೀಯ ಬಹುಮಾನ ಪಡೆದರೆ, ಸಿದ್ಧಾರ್ಥ ಪದವಿ ಕಾಲೇಜಿನ ಮನೋರಮಾ ಪ್ರೋತ್ಸಾಹಕ ಬಹುಮಾನ ಪಡೆದುಕೊಂಡರು. ಕಮಲಾವತಿ ರಾಮನಾಥ ಶಾನಭಾಗ ಸಭಾಭವನದಲ್ಲಿ ಶಿಕ್ಷಣ ಇಲಾಖೆಯಿಂದ ನಡೆದ ಶಿಕ್ಷಕ ದಿನಾಚರಣೆಯ ಕಾರ್ಯಕ್ರಮದ ವೇದಿಕೆಯಲ್ಲಿ ವಿಜೇತರಿಗೆ ಬಹಮಾನ ಹಾಗೂ ಭಾಗವಹಿಸಿದ ಎಲ್ಲ ಶಿಕ್ಷಕರಿಗೂ ಪುಸ್ತಕ ಬಹುಮಾನ ನೀಡಲಾಯಿತು. ಶಿಕ್ಷಕರಿಗಾಗಿ ಆಯೋಜಿಸಿದ ಕವನ ರಚನಾ ಸ್ಪರ್ಧೆಯಲ್ಲಿ ಬಹುಮಾನ‌ ವಿಜೇತರಾದವರಿಗೆ ಹಾಗೂ ಉತ್ಸಾಹದಿಂದ ಭಾಗವಹಿಸುತ್ತಿರುವ ಶಿಕ್ಷಕರಿಗೆ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಅಭಿನಂದಿಸಿದ್ದಾರೆ.

WhatsApp
Facebook
Telegram
error: Content is protected !!
Scroll to Top