ಭಟ್ಕಳದಲ್ಲಿ ಕೊಟಿ ವೆಚ್ಚದ ವಿಧ್ಯಾರ್ಥಿ ನಿಲಯಗಳ ಉದ್ಗಾಟನೆ

ಉದ್ಗಾಟನೆ ನೆರವೇರಿಸಿದ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪುಜಾರಿ

ಭಟ್ಕಳ: 61 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯ ವಿದ್ಯಾರ್ಥಿ ನಿಲಯ ಭಟ್ಕಳ, ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಭಟ್ಕಳ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಶೇಡಬರಿ ಹೆಬಳೆ ಭಟ್ಕಳ ಹಾಗು ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ರವಿವಾರ ಉದ್ಘಾಟಿಸಿದರು

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ವಸತಿ ಶಾಲೆಯ 14 ಮಕ್ಕಳು ಐ.ಐ.ಟಿ ಮತ್ತು ಐ.ಎ.ಎಂ ಸಮನಾದಂತ ಶಿಕ್ಷಣ ಸಂಸ್ಥೆಗೆ ಆಯ್ಕೆಯಾಗಿದ್ದಾರೆ. ಆದರ ಅವರ ಬಳಿ ಹಣದ ಕೊರತೆ ಇರುತ್ತದೆ . ಅದಕ್ಕಾಗಿ ಈ ವರ್ಷದಿಂದ ಐ.ಐ.ಟಿ ಮತ್ತು ಐ.ಎ.ಎಂ ಸಹಿತ ಉನ್ನತ ಶಿಕ್ಷಣ ಸಂಸ್ಥೆಗೆ ನಮ್ಮ ಶಾಲೆಯ ವಿದ್ಯಾರ್ಥಿಗಳು ಆಯ್ಕೆಯಾಗುತ್ತಾರೋ ಅಂತವರಿಗೆ ನಮ್ಮ ಇಲಾಖೆಯಿಂದ ಪೂರ್ಣ ಖರ್ಚನ್ನುವಹಿಸುವ ಕೆಲಸ ಮಾಡುತ್ತೇವ ಎಂದ ಅವರು ಶಿಕ್ಷಣ ಎಂಬುವುದು ಉಳ್ಳವರ ಸ್ವತ್ತಲ್ಲ ಅದು ಸಮಾಜದ ಕಡು ಬಡವರ ಸ್ವತ್ತು ಎಂದು ಯೋಚನೆ ಮಾಡಿದ್ದೇವೆ. ಅನೇಕ ಸಾರಿ ಸಮಾಜದಲ್ಲಿ ಜನ ಬಲ , ತೋಳ ಬಲ  ಹಾಗೂ ಹಣ ಬಲ ಇದ್ದವರು ಮಾತ್ರ ಶಿಕ್ಷಣದಲ್ಲಿ ಅವಕಾಶ ಪಡೆದುಕೊಳ್ಳುತ್ತಾರೆ ನಮ್ಮಂತ ಬಡವರ ಮಕ್ಕಳು ಯಾರು ನೋಡುತ್ತಾರೆ ಎಂಬ ಭಾವನೆ ಇನ್ನು ಕೂಡ ಸಮಾಜದಲ್ಲಿ ಎಂದರು

ಮುಂದಿನ ವರ್ಷದಿಂದ ನಮ್ಮ ಇಲಾಖೆಯಲ್ಲಿ 500ಕ್ಕೂ ಹೆಚ್ಚು ಪ್ರತಿಷ್ಠಿತ ಶಾಲೆಗಳಿಗೆ ಬಡ ಮಕ್ಕಳನ್ನು ಮಕ್ಕಳನ್ನು ಕಳುಹಿಸುತವ ತೀರ್ಮಾನ ಮಾಡಿದ್ದೇವೆ. ಅದು ಯಾರ ಮಕ್ಕಳೆಂದರೆ ಸ್ಮಶಾನದಲ್ಲಿ ಕೆಲಸ ಮಾಡುವವರು, ಪೌರ ಕಾರ್ಮಿಕರ ಮಕ್ಕಳು, ಏಡ್ಸ್ ಪೀಡಿತರ ಮಕ್ಕಳಿಗೆ, ಕೋವಿಡ್ ನಿಂದ ಮೃತ ಪಟ್ಟವರ ಮಕ್ಕಳಿಗೆ ಹಾಗೂ ಪ್ರಥಮ ಬಾರಿಗೆ ವಿಧುವೆ ಮಕ್ಕಳಿಗೆ ಇಂತಹ ಬಡ ಮಕ್ಕಳಿಗೆ ಮುಂದಿನ ವರ್ಷದಿಂದ ಪ್ರತಿಷ್ಠಿತ ಶಾಲೆಗಳಿಗೆ ಕಳುಹಿಸಲು ತೀರ್ಮಾನ ಮಾಡಿದ್ದೇವೆ ಇದರಿಂದ ಯಾವುದೇ ಸಮಸ್ಯೆ ಬಂದರು ಎದುರಿಸಲು ಸಿದ್ದವಿದ್ದು ಬಡವರಿಗೆ ನ್ಯಾಯ ಒದಗಿಸುವ ತೀರ್ಮಾನಿಸಿದ್ದೇವೆ ಎಂದರು

ನಮ್ಮ ಸಮಾಜದಲ್ಲಿರುವ ಕೊನೆಯ ಮಗು ಉನ್ನತ ಶಿಕ್ಷಣ ಪಡೆಯಲು ಯಾವ ಪೂರ್ವ ಬಾವಿ ಸಿದ್ದ ಮಾಡಬೇಕೋ ಅದನ್ನೆಲ್ಲ ನಮ್ಮ ಇಲಾಖೆಯಿಂದ ಮಾಡುತ್ತಿದ್ದೇವೆ ಹಾಗೂ ಈ ವರ್ಷದಿಂದ ನಮ್ಮ ವಸತಿ ಶಾಲೆಗಳಿಲ್ಲಿ ಇಂಗ್ಲಿಷ್ ಸ್ಪಿಕಿಂಗ್ ಕೋರ್ಸ್ ನ್ನು ಪ್ರಾರಂಭ ಮಾಡುತ್ತಿದ್ದೆವೇ ಎಂದರು.

ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸುನೀಲ ನಾಯ್ಕ ನನ್ನ  ಕ್ಷೇತ್ರದಲ್ಲಿ ಇಂತಹ ಅದ್ಬುತ ವಾಗಿರುವಂತಹ ಈ ಎರಡು ಶಾಲೆಗಳು ಇಂದು ಸ್ವತಃ ಕಟ್ಟಡದಲ್ಲಿ ಪ್ರಾರಂಭವಾಗುತ್ತಿರುವುದು ತುಂಬಾ ಸಂತೋಷ ತಂದಿದೆ. ಈ ಭಾಗದ ವ್ಯವಸ್ಥೆಯನ್ನು ನೋಡಿದರೆ ನನಗೆ ಮಣಿಪಾಲ್ ಯುನಿರ್ವಸಿಟಿ ನೋಡಿದ ಹಾಗೆ ಆಗುತ್ತಿದೆ ಎಂದ ಅವರು ಹೆಬಳೆ ಭಾಗದಲ್ಲಿ ಈ ಎರಡು ಶಾಲೆಗಳನ್ನು ನಿರ್ಮಾಣ ಮಾಡಲು ತೀರ್ಮಾನಿಸಿದಾಗ ಬಹಳ ವಿರೋಧವಿತ್ತು. ಈ ಭಾಗದಲ್ಲಿ ಶಾಲೆ ನಿರ್ಮಾಣ ಮಾಡಬಾರದು. ಈ  ಜಾಗವನ್ನು ಸರ್ಕಾರ ನಮಗೆ ದನ ಕರುಗಳಿಗೆ ಮೇವು ತಿನ್ನಲು ಕಾಯ್ದಿಟ್ಟ ಜಾಗ ಎಂದು ವಿರೋಧ ವ್ಯಕ್ತ ಪಡಿಸಿದ್ದರು. ಆ ವೇಳೆಯಲ್ಲಿ  ನಾನು ಅವರಿಗೆ ವಿಶ್ವಾಸ ನೀಡಿದ್ದೆ ಈ ಭಾಗದಲ್ಲಿ ಎರಡು ಶಾಲೆಗಳು ನಿರ್ಮಾಣವಾಗಲಿ ನಂತರ ಈ ಭಾಗದ ಚಿತ್ರಣ ವೇ ಬದಲಾಗುತ್ತದೆ ಹಾಗೂ ಮತ್ತೆ ಈ ಭಾಗದಲ್ಲಿ ಇನ್ಯಾವುದೇ ಶಾಲೆಗಳನ್ನು ಈ ಭಾಗದಲ್ಲಿ ನಿರ್ಮಾಣ ಮಾಡುವುದಿಲ್ಲ ಎಂದು ಎಂದು ವಿಶ್ವಾಸ ನೀಡಿದ ನಂತರ ಬಹಳ ಸಂತೋಷದಿಂದ ನಿರ್ಮಾಣ ಮಾಡಲು ಅನುವು ಮಾಡಿಕೊಟ್ಟರು ಎಂದರು.

ತಾಲೂಕಿನಲ್ಲಿ ಈಗಾಗಲೇ ಐ.ಟಿ.ಐ ಕಾಲೇಜಿಗೆ ಟೆಂಡರ್ ಕರೆಯಾಗಿದೆ. ಲಾ ಕಾಲೇಜಿಗೆ ಜಾಗ ಮಜೂರಾಗಿದೆ. ಜಾಲಿಯಲ್ಲಿ ಡಿಗ್ರಿ ಕಾಲೇಜು ಕಟ್ಟಡ ನಿರ್ಮಾಣವಾಗುತ್ತಿದೆ. ಸರ್ಕಾರಿ ಆಸ್ಪತ್ರೆಗೆ ಈಗಾಗಲೇ 4 ಎಕರೆ ಜಾಗ ಮಂಜೂರಿಯಾಗಿದೆ. ಹೀಗೆ ಆಸಾಧ್ಯವನ್ನು ಸಾಧ್ಯ ಮಾಡುವಂತಹ ಕೆಲಸವನ್ನು ಒಬ್ಬ ಶಾಸಕನಾಗಿ ನಾನು ಮಾಡಿದ್ದೇನೆ ಎಂದರು.

ನಂತರ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಸುನೀಲ ನಾಯ್ಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದಕ್ಕೂ ಪೂರ್ವದಲ್ಲಿ ಸಾಗರ ರಸ್ತೆ ಸಮೀಪವಿರುವ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯ ವಿದ್ಯಾರ್ಥಿ ನಿಲಯ ಹಾಗೂ ಆನಂದ ಆಶ್ರಮ ಕಾನ್ಮೆಂಟ್ ಸಮೀಪದ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯವನ್ನು ಉದ್ಘಾಟಿಸಿದರು.

WhatsApp
Facebook
Telegram
error: Content is protected !!
Scroll to Top