ಪ್ರಯಾಣಿಕರಿಗೆ ಕುಡಿಯಲೊದಗಿಸುವ ನೀರಿನ ಬಾವಿಗೆ ಸೇರುತ್ತಿರುವ ತ್ಯಾಜ್ಯ ನೀರು

ಜಾಣ ಕುರುಡುತನ ಪ್ರದರ್ಶಿಸುತ್ತಿರುವ ಭಟ್ಕಳದ ರೈಲ್ವೆ ಇಲಾಖೆಯ ಅಧಿಕಾರಿಗಳು

ಭಟ್ಕಳ: ತಾಲೂಕಿನ ರೇಲ್ವೇ ನಿಲ್ದಾಣದ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಘಟಕಗಳಿಗೆ ನೀರು ಸರಬರಾಜು ಮಾಡುವ ಬಾವಿಗೆ ಪಕ್ಕದಲ್ಲಿಯೇ ಕಸ, ತ್ಯಾಜ್ಯದ ಗುಂಡಿ ನಿರ್ಮಾಣವಾಗಿದ್ದು, ಅಲ್ಲಿಂದ ಮಲೀನ ನೀರು ಕುಡಿಯುವ ನೀರಿನ ಬಾವಿಯನ್ನು ಸೇರಿಕೊಳ್ಳುವ ಆತಂಕ ಎದುರಾಗಿದೆ.

ಬಾವಿಗೆ ಸಮೀಪದಲ್ಲಿಯೇ ಕಸ, ತ್ಯಾಜ್ಯಗಳನ್ನು ಸಂಗ್ರಹಿಸಲಾಗುತ್ತಿದ್ದು, ಅಲ್ಲಿ ಜನರು ಕಾಲು ಇಡಲು ಹೇಸಿಗೆ ಪಡುವಂತಹ ಸತಿ ನಿರ್ಮಾಣವಾಗಿದೆ. ಅಲ್ಲಿಯೇ ಕೆಲವು ಪದಾರ್ಥಗಳು ಕೊಳೆತ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದು, ಹುಳುಗಳು ಸೃಷ್ಟಿಯಾಗಿವೆ. ಒಮ್ಮೊಮ್ಮೆ ಜಾನುವಾರು, ಬೀದಿ ನಾಯಿ ಸತ್ತು ಬಿದ್ದು, ಕೊಳೆತು ಹೋದ ಹಲವು ದಿನಗಳ ನಂತರ ವಿಲೇವಾರಿ ಮಾಡಲಾಗುತ್ತಿದೆ

ಸದ್ಯ ಎಂಬಂತೆ ಕಳೆದ 4 -5 ದಿನಗಳ ಹಿಂದೆ ದನವೊಂದು 2 ನೇ ಪ್ಲಾಟ್‌ ಫಾರಂನಲ್ಲಿ ಮೃತ ಪಟ್ಟಿತ್ತು 2 ದಿನಗಳ ಬಳಈ ವಿಷಯ ಸುದ್ದಿ ವಾಹಿನಿಗಳಲ್ಲಿ ಬಿತ್ತರ ಗೊಂಡ ನಂತರ ಎಚ್ಚೆತ್ತ ಅಧಿಕಾರಿಗಳು ದನದ ಕಳೆಬರ ತೆಗೆಸಿದ್ದು ಇದಕ್ಕೆ ಉತ್ತಮ ಉದಾಹರಣೆ .ಸ್ವಚ್ಛ ಭಾರತ ಅಭಿಯಾನ ಕೇವಲ ಸರ್ಕಾರದ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತ ಹೊರೆತು, ನಿತ್ಯದ ಬಳಕೆಗಲ್ಲ ಎಂದು ಸಾರ್ವಜನಿಕರು ಆಡಿಕೊಳ್ಳುತಿದ್ದಾರೆ.

ಮಳೆಯ ನೀರು ಕಸ, ತ್ಯಾಜ್ಯಗಳ ಗುಂಡಿಯಲ್ಲಿ ತುಂಬಿಕೊಂಡು ಅಲ್ಲಿಯೇ ಇಂಗಿ ಪಕ್ಕದ ಬಾವಿಯನ್ನು ಸೇರಿಕೊಳ್ಳುತ್ತಿದೆ. ಇದೇ ಬಾವಿಯ ನೀರನ್ನು ರೇಲ್ವೇ ನಿಲ್ದಾಣದ ಎಲ್ಲ ಕುಡಿಯುವ ನೀರು ಸರಬರಾಜು ಘಟಕಗಳಿಗೆ ಒದಗಿಸಲಾಗುತ್ತಿದ್ದು, ಬಹಳಷ್ಟು ಪ್ರಯಾಣಿಕರು ಈ ನೀರನ್ನೇ ಬಾಟಲಿಗೆ ತುಂಬಿಸಿಕೊಂಡು ಹೋಗುತ್ತಾರೆ. ಮಲಿನ ನೀರು ಸೇವಿಸುವ ಜನರ ಆರೋಗ್ಯದ ಗತಿ ಏನು.? ಎಂದು ಬಗ್ಗೆ ಕೊಕಣ ರೈಲೈ ಇಲಾಖೆಯ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಬೇಜವ್ದಾರಿ ನಡವಳಿಕೆಯ ಬಗ್ಗೆ ಆಕ್ರೋಶ ಹೊರ ಹಾಕುತ್ತಿದ್ದಾರೆ

WhatsApp
Facebook
Telegram
error: Content is protected !!
Scroll to Top