ಸಿದ್ದಾಪುರದಲ್ಲಿ ರೈತರ ರಾಜ್ಯ ಮಟ್ಟದ ಅಧ್ಯಯನ ಶಿಬಿರ

ಸಿದ್ದಾಪುರ:- ರೈತರ ಬೆಳೆಗೆ ರಕ್ಷಣೆಗಾಗಿ ಸಂಶೋಧನೆ ನಡೆಸಬೇಕಾಗಿದೆ. ಜೊತೆಗೆ ಹಲವಾರು ಹೊಸ ಹೊಸ ಯೋಜನೆ ಕೈಗೊಳ್ಳಬೇಕು ಎಂದುವತಾಳಗುಪ್ಪ ಕೂಡ್ಲಿಮಠದ ವಿದ್ವಾನ್ ಶ್ರೀ ಸಿದ್ದವೀರ ಮಹಾಸ್ವಾಮಿಗಳವರು ಅಭಿಪ್ರಾಯ ಪಟ್ಟರು.
ಅವರು ತಾಲೂಕಿನ ಐಗಳಕೊಪ್ಪ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯು ಆಯೋಜನೆ ಮಾಡಿದ್ದ ರಾಜ್ಯ ಮಟ್ಟದ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಇಂದು ರೈತರನ್ನು ಮೋಸ ಮಾಡುವವರಿದ್ದಾರೆ. ಅಲ್ಲದೆವಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ರೈತರು ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ. ಇರುವ ಇಂತಹ ಹತ್ತಾರು ಸಮಸ್ಯೆಗಳಿಗೆ ಪರಿಹಾರ ಹುಡುಕಲೂ ಇಂತಹ ಶಿಬಿರ ಪೂರಕವಾಗಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿ ಸರ್ಕಾರಗಳು ರೈತರನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ಚಳುವಳಿ ಗಳು ಜೀವಂತವಾಗಿರಬೇಕು. ಹಾಗಾದಾಗ ಮಾತ್ರ ಆರೋಗ್ಯ ಕರ ವಾತಾವರಣ ಇರುತ್ತದೆ. ಇಂದು ನ್ಯಾಯಾಂಗ, ರಾಜ್ಯಾಂಗ ಹಾಗೂ ರಾಜಕೀಯ ವ್ಯವಸ್ಥೆ ಹದಗೆಟ್ಟಿವೆ. ಸರಕಾರ ಮತ್ತು ರಾಜಕೀಯ ಪಕ್ಷಗಳು ನೇತ್ರತ್ವ ವಹಿಸುವವರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ರಾಜ್ಯ ದಲ್ಲಿ
ರಸಗೊಬ್ಬರ ದ ಕೊರತೆ ಇದೆ. ಇಡಿ ದೇಶದ ವ್ಯವಸ್ಥೆ ಖಾಸಗಿಕರಣದತ್ತ ವಾಲುತ್ತಿವೆ. ದೇಶದ ಆಸ್ತಿ ಕೆಲವೇ ಶ್ರೀಮಂತರ ಕೈ ಸೇರಲಿದೆ ಇದರ ಬಗ್ಗೆ ರೈತ ಚಳುವಳಿ ಮಾಡಬೇಕಿದೆ ಎಂದರು.

ಕನ್ನಡ ಉಪನ್ಯಾಸಕ ಡಾ. ಸರ್ಪ್ರಾಜ್ ಚಂದ್ರಗುತ್ತಿ ಮಾತನಾಡಿ ಇಂದು ರೈತರು ಮುಳುಗಡೆಯಾಗಿದ್ದಾರೆ. 12 ನೇ ಶತಮಾನದಲ್ಲಿ ರೈತ ಚಳುವಳಿ ಹುಟ್ಟಿಕೊಂಡಿತು. ನಿಜವಾದ ಸ್ವಾತಂತ್ರ್ಯ ಸಮಾನತೆ ಸ್ರಷ್ಟಿಸಬೇಕಿತ್ತು. ದುಡಿಯುವ ಕೈಗಳಿಗೆ ಜಮೀನಿಲ್ಲ. ಹಳ್ಳಿಯೇ ಜಗತ್ತು. ಎಂದರು.

ರಾಜ್ಯ ಕಾರ್ಯಾಧ್ಯಕ್ಷ ಎನ್ ಕೆ. ಮಂಜುನಾಥ ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ರರಳ್ಳಿ ಬೈರೇಗೌಡ, ವೀರಭದ್ರ ನಾಯ್ಕ, ಕೇರಿಯಪ್ಪ ನಾಯ್ಕ, ಮುಂತಾದ ವರು ಉಪಸ್ಥಿತರಿದ್ದರು.
ವೀರಭದ್ರ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಘವೇಂದ್ರ ಕಿರವತ್ತಿ ಸ್ವಾಗತಿಸಿದರು. ಉಮೇಶ ರೈತಗೀತೆ ಹಾಡಿದರು. ಪ್ರೀತಿ ಜೋಗಫಾಲ್ಸ್ ನ್ರತ್ಯ ಪ್ರದರ್ಶಿಸಿ ದರು. ರಾಘವೇಂದ್ರ ಆರ್ ನಾಯ್ಕ ನಿರೂಪಿಸಿದರು.

WhatsApp
Facebook
Telegram
error: Content is protected !!
Scroll to Top