ಸಿದ್ದಾಪುರದಲ್ಲಿ ಎನ್ ಎಸ್ ಎಸ್ ಹಾಗು ಇತರ ಘಟಕಗಳ ಸಮಾರೋಪ ಸಮಾರಂಭ

ಸಿದ್ದಾಪುರ:- ಕಲೆ, ಸಾಹಿತ್ಯ, ಸಾಂಸ್ಕೃತಿಕ, ಕ್ರೀಡೆ ಎಲ್ಲಾ ಮನುಷ್ಯನಿಗೆ ಬೇಕು ಅವು ಮನುಷ್ಯ ನನ್ನು ಎತ್ತರಕ್ಕೆ ಒಯ್ಯುತ್ತವೆ.
ಮನುಷ್ಯ ನಿಗೆ ಜೀವನದಲ್ಲಿ ಒಂದು ಗುರಿ ಇರಬೇಕು, ಅದಕ್ಕೆ ಗುರಿಯೇಡೆಗೆ ಸಾಗಬೇಕು ಎಂದು ಪದವಿ ಪೂರ್ವ ಕಾಲೇಜು ಹಲಗೇರಿ ಪ್ರಾಚಾರ್ಯರಾದ ದಿನೇಶ ಕೆ ಹೇಳಿದರು.
ಅವರು ಪಟ್ಟಣದ ಸರಕಾರಿ ಪಾಲಿಟೆಕ್ನಿಕ್ ಸಂಸ್ಥೆಯ ವಿದ್ಯಾರ್ಥಿ ಸಂಘ, ಕ್ರೀಡಾ ಸಂಘ, ರೆಡ್ ಕ್ರಾಸ್ ಮತ್ತು ಎನ್.ಎಸ್.ಎಸ್ ಘಟಕಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಹಣ ಮಾಡುವುದೇ ಕೇವಲ ನಮ್ಮ ಗುರಿಯಾಗಬಾರದು.
ಸಮಾಜಕ್ಕೆ ಉಪಯೋಗ ವಾಗುವಂತ ಕೊಡುಗೆ ನೀಡಬೇಕು ಎನ್ನುವುದನ್ನು ಗುರಿಯಾಗಿಸಿಕೊಂಡರೆ ಹಣ ನಮ್ಮ ಹಿಂದೆ ಬರುತ್ತದೆ.
ನಮ್ಮ ಬದುಕಿನ ಉದ್ದೇಶ ಗಳನ್ನು ಗುರಿಯಾಗಿಸಲು ನಾವು ಸೋಲುವುದರಿಂದ ನಾವು ಕೆಳಗೆ ಸಾಗುತ್ತೇವೆ.
ತಪ್ಪು ನಮ್ಮ ಗೆಲುವಿಗೆ ಮೆಟ್ಟಿಲಾಗುತ್ತದೆ.
ನಮ್ಮ ಸಾಮರ್ಥ್ಯ ದ ಬಗ್ಗೆ ನಮಗೆ ನಂಬಿಕೆ ಇರಬೇಕು. ಆತ್ಮ ವಿಶ್ವಾಸವಿದ್ದು ಸುತ್ತಮುತ್ತಲು ಅವಲೋಕನ ಮಾಡಬೇಕು ಅಂದಾಗ ನಮ್ಮ ಗುರಿ ಈಡೇರಿಕೆ ಸಾಧ್ಯ ವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪಾಲಿಟೆಕ್ನಿಕ್ ಕಾಲೇ ಪ್ರಾಚಾರ್ಯರು ಶಾಂತರಾಮ
ಕುಲಸಚಿವರು ಶೋಭಾ ಕೆ ಎನ್

ಶಿವರಾಜಮಾರ. ಎ. ದಿವ್ಯಾ ಎಂ,
ವಿದ್ಯಾರ್ಥಿ ಸಂಘದ ಪ್ರತಿನಿಧಿಗಳಾದ ಸುಮಂತ ಪಿ, ಮೇಘರಾಜ ಎನ್,ಸುಬ್ರಹ್ಮಣ್ಯ ಗೌಡ, ಮನೋಜ ಕೆ ಉಪಸ್ಥಿತರಿದ್ದರು.

ಉಪನ್ಯಾಸಕರಾದ ಮೂರ್ತಿ ಜಿ ಈ ರವರು ಶೈಕ್ಷಣಿಕ ಚಟುವಟಿಕೆ, ರೆಡ್ ಕ್ರಾಸ್ ಘಟಕದ ವರದಿ ವಾಚಿಸಿದರು.
ಉಪನ್ಯಾಸಕರಾದ ಜ್ಯೋತಿ ಬಿಕೆ ಕ್ರೀಡಾ ವರದಿ ವಾಚಿಸಿದರು.
ಉಪನ್ಯಾಸಕರಾದ ಸತೀಶ್ ಕುಮಾರ ಅರ್ ಅರಳಿಕಟ್ಟಿ ಎನ್ ಎಸ್ ಎಸ್ ಘಟಕದ ವರದಿ ವಾಚಿಸಿದರು.
ವಿದ್ಯಾರ್ಥಿನಿ ವೈಷ್ಣವಿ ಪ್ರಾರ್ಥಿಸಿದರು.
ವಿದ್ಯಾರ್ಥಿನಿ ದಿವ್ಯಾ ಸ್ವಾಗತಿಸಿದರು
ಪೂಜಾ ಎಸ್ ಮಡಿವಾಳ ನಿರೂಪಿಸಿದರು.

WhatsApp
Facebook
Telegram
error: Content is protected !!
Scroll to Top