ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕಾಗಿ ದ್ವಜ ಸಂಹಿತೆಯನ್ನು ಮೂಲೆ ಗುಂಪುಮಾಡಿ ಮನೆ ಮನೆಗಳಿಗೆ ದ್ವಜ ವಿತರಣೆ ಶಂಕೆ

ದೇಶವಾಸಿಗಳು ದ್ವಜ ಸಂಹಿತೆಗೆ ಒಳಪಟ್ಟ ದ್ವಜಗಳನ್ನು ಗುರುತಿಸಿ ರಾಷ್ಟ್ರದ್ವಜ ಸ್ವೀಕರಿಸುವ ಅನಿವಾರ್ಯತೆ

ಉತ್ತರ ಕನ್ನಡ ಜಿಲ್ಲೆಯಾಧ್ಯಂತ ಸರಕಾರದ ವತಿಯಿಂದ ಸ್ವಾತಂತ್ರ್ಯ ಸುವರ್ಣ ದಿನಾಚರಣೆಯ ಹಿನ್ನೆಲೆಯಲ್ಲಿ ರಾಷ್ಟ್ರದ್ವಜಗಳನ್ನು ಮನೆಮನೆಗಳಿಗೆ ವಿತರಿಸಲಾಗುತ್ತಿದ್ದು ಸ್ಥಳಿಯ ಮಟ್ಟದ ಸರಕಾರ ವಿತರಿಸುತ್ತಿರುವ ರಾಷ್ಟ್ರದ್ವಜಗಳು‌ ದ್ವಜ‌ ಸಂಹಿತೆಗೆ ಒಳಪಡದೆ ರಾಷ್ಟ್ರ ದ್ವಜಕ್ಕೆ‌ ಅಪಮಾನ ಮಾಡಲಾಗುತ್ತಿದೆ ಎಂಬ ಆರೋಪ ಜಿಲ್ಲೆಯಾದ್ಯಂತ ಕೇಳಿಬರುತ್ತಿದೆ.

ಕೆಂದ್ರ ಸರಕಾರವು ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಹರ್ ಗರ್ ಮೆ ತಿರಂಗಾ ಹೈ ಎನ್ನುವ ಒಂದು ಸುಂದರ ಪರಿಕಲ್ಪನೆಯನ್ನು ಮುಂದಿಟ್ಟು ಕೊಂಡು ದೇಶದ ಪ್ರತಿ ಮನೆ ಮನೆಗಳಿಲ್ಲಿ ನಮ್ಮ ದೇಶದ ಹೆಮ್ಮೆಯಾದ ರಾಷ್ಟ್ರದ್ವಜವನ್ನು ಹಾರಿಸುವಂತೆ ದೇಶವಾಸಿಗಳಿಗೆ ಕರೆಕೊಟ್ಟು ದೇಶದ ಪ್ರತಿ ಮನೆಗಳಿಗೆ ರಾಷ್ಟ್ರದ್ವಜವನ್ನು ವಿತರಣೆ ಮಾಡುತ್ತಿದೆ ಆದರೆ ಸರಕಾರ ವಿತರಣೆ ಮಾಡುತ್ತಿರುವ ರಾಷ್ಟ್ರದ್ವಜ ದ್ವಜ ಸಂಹಿತೆಗೆ ಒಳಪಟ್ಟಿಲ್ಲಾ ಸರಕಾರ ವಿತರಿಸುತ್ತಿರುವ ರಾಷ್ಟ್ರ ದ್ವಜದಲ್ಲಿ ಅಶೋಕ ಚಕ್ರವು ದ್ವಜದ ಮಧ್ಯಬಾಗದಲ್ಲಿ ಇರಬೇಕು ಎನ್ನುವುದು ನಿಯಮ ಹಾಗೆ ಕೆಸರಿ ಬಿಳಿ ಹಸಿರು ಬಣ್ಣಗಳು ಒಂದೆ ಪ್ರಮಾಣದ ಅಳತೆಯಲ್ಲಿ ಮಾಡಿರಬೇಕು ರಾಷ್ಟ್ರದ್ವಜ ಅಂಕುಡೊಂಕಾಗಿರಬಾರದು ಎಂಬುವುದು ನಿಯಮ ಈ ನಿಯಮಗಳು ಸಾಮಾನ್ಯ ಇದನ್ನು ತಿಳಿದುಕೊಳ್ಳಲು ಯಾವುದೆ ಉನ್ನತ ಮಟ್ಟದ ವಿಧ್ಯಾಭ್ಯಾಸವನ್ನು ಮಾಡಿರಬೇಕೆಂದಿದ್ದಲ್ಲಾ ಆದರೆ ದೇಶ ನಡೆಸುತ್ತಿರುವ ಸರಕಾರಕ್ಕೆ ಈ ನಿಯಮ ತಿಳಿದಿಲ್ಲವೆ ಎನ್ನುವುದು ಸಾರ್ವಜನಿಕರ ಆಕ್ರೋಶದ ಪ್ರಶ್ನೇಯಾಗಿದೆ ನಾವು ದೇಶ ಪ್ರೇಮಿಗಳು ನಮ್ಮನ್ನು ಪ್ರಶ್ನೇ ಮಾಡುವವರು ದೇಶದ್ರೋಹಿಗಳು ಎಂದು ಬಿಂಬಿಸುವ ಕೆಲವು ಪಟ್ಟಬದ್ರ ಹಿತಾಸಕ್ತಿಯ ರಾಜಕಾರಣಿಗಳಿಗೆ ನಿಮ್ಮ‌ ಕ್ಷೇತ್ರದಲ್ಲಿ ದೇಶದ ರಾಷ್ಟ್ರ ದ್ವಜಕ್ಕೆ ಅವಮಾನವಾಗುತ್ತಿರುವಾಗ ನೀವುಗಳು ಮಾಡುತ್ತಿರುದಾದದರು ಆಯಾ ಕ್ಷೇತ್ರದ ಶಾಸಕರು ತನ್ನ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ ಸ್ವಾತಂತ್ರ್ಯ ಉತ್ಸವ ಸನ್ನಿಹಿತವಾಗಿದೆ ರಾಷ್ಟ್ರದ್ವಜ ಯಾವ ಪ್ರಮಾಣದಲ್ಲಿ ಎಂತಹ ರಾಷ್ಟ್ರ ದ್ವಜ ವಿತರಣೆ ಆಗುತ್ತಿದೆ ಎಂಬ ಬಗ್ಗೆ ಸ್ವಲ್ಪ ಗಮನಹರಿಸಿದ್ದರೆ ಇಂದು ಸಾರ್ವಜನಿಕರು ದ್ವಜಕ್ಕಾಗುತ್ತಿರುವ ಅವಮಾನವನ್ನು ಕಂಡು ಪರಿತಪಿಸುವ ಪರಿಸ್ಥಿತಿಯೆ ಉಂಟಾಗುತ್ತಿರಲಿಲ್ಲಾ ರಾಜ್ಯದಾಧ್ಯಂತ ಕೆವಲ ತಮ್ಮ ಬೊಕ್ಕಸಕ್ಕೆ ತುಂಬಿಸಲು ರಾಜಕಾರಣ ಮಾಡುತ್ತಿರುವ ರಾಜಕಾರಣಿಗಳ ಕಾರಣ ನಮ್ಮ ರಾಷ್ಟ್ರ ದ್ವಜಕ್ಕೆ ಅವಮಾನವಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ

ಆದ್ದರಿಂದ ನಮ್ಮ ದೇಶ ರಾಜ್ಯ ಜಿಲ್ಲೆ ತಾಲೂಕುಗಳಲ್ಲಿರುವ ದೇಶವಾಸಿಗಳೆ ನಿಮಗೆ ನಿಜವಾಗಿಯು ದೇಶದ ಮೇಲೆ ಅಭಿಮಾನ ಪ್ರೇಮ ಭಕ್ತಿಗಳಿದ್ದರೆ ಈ ಕೂಡಲೆ ಎಚ್ಚೆತ್ತುಕೊಳ್ಳಿ ನಿಮ್ಮ ಮನೆಗಳಿಗೆ ಸರಕಾರದ ವತಿಯಿಂದ ದ್ವಜ ವಿತರಣೆ ಮಾಡಲು ಬಂದಾಗ ದ್ವಜವನ್ನು ಪರಿಕ್ಷಿಸಿ ಸ್ವಿಕರಿಸಿ ಒಂದು ವೇಳೆ ನೀವು ಪಡೆದುಕೊಳ್ಳುವ ರಾಷ್ಟ್ರ ದ್ವಜ ದ್ವಜ ಸಂಹಿತೆಗೆ ಒಳಪಡದೆ ಇದ್ದರೆ ರಾಷ್ಟ್ರದ್ವಜಕ್ಕೆ ಅವಮಾನವಾಗುವಂತ ರಾಷ್ಟ್ರದ್ವಜ ವಿತರಿಸಲು ಬಂದರೆ ಅಂತಹ ದ್ವಜವನ್ನು ಅವರಿಂದ ಸ್ವಿಕರಿಸಬೇಡಿ ಹಾಗು ಅಂತಹ ದ್ವಜವನ್ನು ನಿಮ್ಮ ಮನೆಯ ಮಂದೆ ಹಾರಿಸಬೇಡಿ ಯಾಕೆಂದರೆ ಅಂತಹ ದ್ವಜ ಹಾರಿಸುವುದು ರಾಷ್ಟ್ರ ದ್ವಜಕ್ಕೆ ಅವಮಾನ ಮಾಡಿದಹಾಗೆ ದೇಶಕ್ಕೆ ಅವಮಾನ ಮಾಡಿದ ಹಾಗೆ ಕಾರಣ ತಾವುಗಳು ಮಾರುಕಟ್ಟೆಯಿಂದ ದ್ವಜ ಸಂಹಿತೆಗೆ ಒಳಪಡುವಂತ ದ್ವಜ ನಿಮಕ್ಕೆ ದಕ್ಕೆ ಬರದಂತ ರಾಷ್ಟ್ರ ದ್ವಜವನ್ನು ಖರಿದಿಸಿ ನಿಮ್ಮ ನಿಮ್ಮ ಮನೆಗಳ ಮುಂದೆ ರಾಷ್ಟ್ರದ ತಿರಂಗವನ್ನು ಹಾರಿಸುವುದರ ಮೂಲಕ ಸ್ವಾತಂತ್ರ್ಯ ಸುವರ್ಣ ದಿನಾಚರಣೆಯನ್ನು ಆಚರಿಸೋಣ

ಮುಖ್ಯವಾಗಿ ನಮ್ಮ ಮನೆಯ ಮುಂದೆ ದ್ವಜ ಸಂಹಿತೆಗೆ ಒಳಪಡದ ದ್ವಜ ಹಾರಿಸಿ ರಾಷ್ಟ್ರಕ್ಕೆ ನಮ್ಮಿಂದಾಗುವ ಅವಮಾನವನ್ನು ನಾವು ತಡೆಯೋಣ ಈ ಭಾರಿಯ ಸ್ವಾತಂತ್ರ್ಯ ಸ್ವರ್ಣಮಹೋತ್ಸವಕ್ಕೆ ನಾವು ನಮ್ಮ ಮನೆಯ ಮುಂದೆ ನಮ್ಮ ದೇಶದ ಹೆಮ್ಮೆಯಾದ ರಾಷ್ಟ್ರದ್ವಜವನ್ನು ಕಡ್ಡಾಯವಾಗಿ ಹಾರಿಸೋಣ ಆದರೆ ಅದು ದೇಶ ಹೆಮ್ಮೆ ಪಡುವಂತೆ ಹಾರಿಸಬೇಕೆ ಹೊರತು ದೇಶ ತಲೆ ತಗ್ಗಿಸುವಂತಲ್ಲ ಎನ್ನುವುದು ದೇಶ ಪ್ರೇಮಿಗಳ ಕಳಕಳಿಯಾಗಿದೆ

WhatsApp
Facebook
Telegram
error: Content is protected !!
Scroll to Top