ಸಿದ್ದಾಪುರದಲ್ಲಿ ರೌದ್ರ ಮಳೆಗೆ ತತ್ತರಿಸಿಹೋದ ಜನತೆ

ಕಡಕೇರಿಯಲ್ಲಿ ಮಳೆಯ ಹೊಡೆತಕ್ಕೆ ದರೆಗುರುಳಿದ ಮನೆ

ಸಿದ್ದಾಪುರ:- ತಾಲೂಕಿನಲ್ಲಿ ಇಂದು ರೌದ್ರ ಮಳೆ ಮುಂದುವರಿದಿದೆ. ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ನಾಟಿ ಕಾರ್ಯ ಚುರುಕುಗೊಂಡಿದ್ದು ಭಾರಿ ಮಳೆಯಿಂದ ನಾಟಿಮಾಡಲು ತೊಂದರೆಯಾಗಿದೆ. ನಾಟಿ ಮಾಡಿದ ಗದ್ದೆಗಳಲ್ಲಿ ನೀರು ತುಂಬಿಕೊಂಡಿದ್ದು ಭತ್ತದ ಸಸಿಗಳು ಕರಗಿ ಹೋಗುವ ಚಿಂತೆ ರೈತರಲ್ಲಿ ಮನೆ ಮಾಡಿದೆ. ತಾಲೂಕಿನ ಹಲವು ಭಾಗಗಳಲ್ಲಿ ಅಡಿಕೆಗೆ ಕೊಳೆ ರೋಗ ಕಾಣಿಸಿಕೊಂಡಿದೆ. ಮೊದಲೆ ಔಷಧಿ ಸಿಂಪಡಿಸಲು ಕೊನೆ ಗೌಡರು ಸಿಗುತ್ತಿಲ್ಲ. ಈಗ ಭಾರಿ ಮಳೆ ಸುರಿಯುತ್ತಿರುವುದರಿಂದ ರೈತರನ್ನು ಮತ್ತಷ್ಟು ಚಿಂತೆಗೊಳಗಾಗಿದ್ದಾರೆ.
ಇಂದು ಸುರಿದ ಭಾರಿ ಮಳೆಗೆ
ತಾಲೂಕಿನ ಕಡಕೇರಿಯ ಗೌರಿ ಕೆರಿಯ ನಾಯ್ಕ ರವರ ವಾಸ್ತವ್ಯದ ಕಚ್ಚ ಮನೆಯ ಅಡುಗೆ ಕೋಣೆಯ ಮಣ್ಣಿನ ಗೋಡೆ ಬಿದ್ದು ಭಾಗಶಃ ಹಾನಿ ಯಾಗಿದ್ದು ಅಂದಾಜು ರೂ 35000 ಹಾನಿಯಾಗಿರುತ್ತದೆ. ಚಂದ್ರಘಟಗಿ ಗ್ರಾಮದ ವಡದಾರಿಯ ಗೋವಿಂದ ಗಣಪ ನಾಯ್ಕ ರವರ ವಾಸ್ತವ್ಯದ ಕಚ್ಚಾ ಮನೆಯ ಒಂದು ಪಕ್ಕದ ಗೋಡೆ ಬಿದ್ದು ಅಂದಾಜು 33000/- ರೂಪಾಯಿ ಹಾನಿಯಾಗಿರುತ್ತದೆ.
ಹಿತ್ಲತೋಟದ ಮೈರುನ್ನಿಸ್ಸಾ ಸಾಬ್ ರವರ ವಾಸದ ಕಚ್ಚಾ ಮನೆಯ ಮೇಲ್ಚಾವಣಿಯ ಮೇಲೆ ಮಾವಿನ ಮರ ಬಿದ್ದು ಸುಮಾರು 25000 ಹಾನಿಯಾಗಿರುತ್ತದೆ. ಯಾವುದೇ ಜೀವ ಹಾನಿಯಾಗಿರುವುದಿಲ್ಲ.

WhatsApp
Facebook
Telegram
error: Content is protected !!
Scroll to Top