ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ನೆರೆ ಸಂತ್ರಸ್ತರಿಗೆ ಆಹಾರ ಕಿಟ್ ವಿತರಣೆ

ಭಟ್ಕಳ: ಭಟ್ಕಳ ತಾಲೂಕು ಮುಂಡಳ್ಳಿ ಗ್ರಾಮದ ನೆರೆ ಸಂತ್ರಸ್ತರಿಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉತ್ತರ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಆಹಾರ ಕಿಟ್ ವಿತರಿಸಲಾಯಿತು.

ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವಾರು ಮನೆಗಳಲ್ಲಿ ನೀರು ತುಂಬಿಕೊಂಡಿದೆ. ಬಡ ಕುಟುಂಬಗಳ ಜೀವನ ನೆರೆಯಿಂದ ಬಹಳ ಸಂಕಷ್ಟದಲ್ಲಿ ಇದ್ದು ಸರ್ಕಾರದ ಪರಿಹಾರಕ್ಕೆ ಇನ್ನು ಕಾಯುತ್ತಿದ್ದಾರೆ , ಇಂಥ ಕುಟುಂಬಗಳಿ ರೇಷನ್ ಕಿಟ್ ವಿತರಿಸಿ ಧ್ಯರ್ಯ ತುಂಬುವ ಕೆಲಸ ಪಕ್ಷದ ವತಿಯಿಂದ ಮಾಡಲಾಗಿದೆ.

ಈ ಸಂದರ್ಭದಲ್ಲಿ:
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷರಾದ ಅಬ್ದುಲ್ ಮಾಜಿದ್ ಕೋಲಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಸಿಫ್ ಶೇಕ್, ಜಿಲ್ಲಾ ಮುಖಂಡರಾದ ಅಬ್ದುಲ್ ಜಬ್ಬಾರ್ ಅಸದಿ, ಜಹೂರ್ ಲಾಡ್, ಶೇಷ ಮುಂತಾದರೂ ಪಕ್ಷದ ಮುಖಂಡರು ಇದ್ದರು.

WhatsApp
Facebook
Telegram
error: Content is protected !!
Scroll to Top