ಭಟ್ಕಳ ಪೈಯರ್ ಬ್ರಾಂಡ್ ಗೋವಿಂದ ನಾಯ್ಕ ಅವರಿಗೆ ಒಲಿದು ಬಂದ ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಪಡೆ ನಿಗಮ ಅಧ್ಯಕ್ಷ ಪಟ್ಟ

ಪಕ್ಷ ನಿಷ್ಟರನ್ನು ಗುರುತಿಸು ಇಷ್ಟು ವರ್ಷಗಳೆ ಬೇಕಾಯಿತೆ ಬಿಜೆಪಿಗೆ : ಕಾರ್ಯಕರ್ತರ ಪ್ರಶ್ನೆ

ಭಟ್ಕಳ : ತಾಲೂಕಿನ ಹಿಂದೂಗಳ ಪೈಯರ್ ಬ್ರಾಂಡ್ ಕಟ್ಟಾ ಹಿಂದೂವಾದಿ ಗೊವಿಂದ್ ನಾಯ್ಕ ಹನುಮಾನ ನಗರ ಇವರಿಗೆ ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಪಡೆ ನಿಗಮ ಅಧ್ಯಕ್ಷ ಪಟ್ಟ ಒಲಿದು ಬಂದಿದ್ದು ಚುನಾವಣೆಗೆ ಕೆಲವು ತಿಂಗಳಿರುವಾಗಲಾದರು ಬಿಜೆಪಿ ಸರಕಾರ ಪಕ್ಷ ನಿಷ್ಟರನ್ನು ಗುರುತಿಸು ಕೆಲಸಕ್ಕೆ ಮುಂದಾಗಿದೆ ಎಂದು ಗೊವಿಂದ ನಾಯ್ಕ ಅಭಿಮಾನಿ ಬಳಗ ಹಾಗು ಪಕ್ಷದ ನಿಷ್ಟಾವಂತ ಕಾರ‍್ಯಕರ್ತರು ಹರ್ಷವನ್ನು ವ್ಯಕ್ತಪಡಿಸುತ್ತಿದ್ದಾರೆ.

ಭಟ್ಕಳದ ಗೋವಿಂದ ನಾಯ್ಕ ಹಿಂದೂವಾದದ ಮತ್ತೊಂದು ಮುಖ ಎಂದರೆ ತಪ್ಪಾಗಲಿಕ್ಕಿಲ್ಲ ಇವರನ್ನು ಯುವಕರು ಗೊವಿಂದಣ್ಣ ಎಂದು ಕರೆಯುತ್ತಾರೆ ತಾಲೂಕಿನ ಯಾವುದೆ ಹಿಂದೂ ಯುವಕರು ಕಷ್ಟದಲಿದ್ದಾರೆ, ಪೋಲಿಸ್ ಕೇಸ್ ಕೊರ್ಟ ಕೇಸ್ ಕೊಮುದಳ್ಳುರಿಯಲ್ಲಿ ಯುವಕರು ಬೆಂದು ಹೋದಾಗ ಯುವಕರಿಗೆ ನೆನಪಾಗುವವರು ಇದೆ ಗೊವಿಂದ ನಾಯ್ಕ ಇನ್ನು ಇವರದು ಬಿಜೆಪಿ ಪಕ್ಷಕ್ಕಾಗಿ ಹಗಲಿರುಳು ಎನ್ನದೆ ದುಡಿದ ಜೀವ ಎಂದರೆ ಅದು ಹನುಮಾನ್ ನಗರ ಗೊವಿಂದ ನಾಯ್ಕ ಎಂಬುವುದು ಭಟ್ಕಳದ ಹಿಂದೂ ಯುವಕರು ಮತ್ತು ಬಿಜೆಪಿ ಪಕ್ಷದ ನಿಷ್ಟಾವಂತ ಕಾರ‍್ಯಕರ್ತರ ಮಾತಾಗಿದೆ ಒಟ್ಟಾರೆ ತಮ್ಮ ಜೀವಿತಾವದಿಯ ಸಂಪೂರ್ಣ ಅವದಿಯನ್ನು ಹಿಂದೂತ್ವಕ್ಕಾಗಿ ಬಿಜೆಪಿ ಪಕ್ಷಕ್ಕಾಗಿ ಮಿಸಲಾಗಿಟ್ಟಿದ್ದಾರೆ ಎಂದರೆ ತಪ್ಪಾಗಲಿಕ್ಕಿ ಇಷ್ಟೇಲ್ಲಾ ಶ್ರಮ ಪಟ್ಟ ಭಟ್ಕಳ ಗೊವಿಂದ ನಾಯ್ಕ ಅವರನ್ನು ಬಿಜೆಪಿ ಪಕ್ಷ ಕಡೆಗಣಿಸಿತೆ ಹೋರತು ಯಾವುದೆ ಹುದ್ದೆಯನ್ನು ನಿಡಿರಲಿಲ್ಲಾ ಪಕ್ಷಕ್ಕೆ ತನ್ನ ಪ್ರಚಾರಕ್ಕೆ ಹಿಂದೂತ್ವದ ಹೆಸರಲ್ಲಿ ಹೊರಾಡಲು ತನ್ನ ಬೇಳೆಯನ್ನು ಬೇಯಿಸಿಕೊಳ್ಳಲು ಹೊರಾಟಗಾರ ಹಿಂದೂ ನಾಯಕ ಗೊವಿಂದ ನಾಯ್ಕ ಬೇಕು ಆದರೆ ಈ ಪಕ್ಷ ಅಧಿಕಾರವನ್ನು ಹಾಗು ಚುನಾವಣಾ ಟಿಕೆಟ್ ಅನ್ನು ಮಾತ್ರ ಇತರ ಪಕ್ಷದಲ್ಲಿದ್ದು ಹಿಂದೂತ್ವಕ್ಕೆ ಹಾನಿ ಉಂಟು ಮಾಡಿದವರಿಗೆ ಇಲ್ಲವಾದರೆ ಪಕ್ಷದ ವಿರೋದ ಕೆಲಸ ಮಾಡುವವರಿಗೆ ನೀಡುತ್ತದೆ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಇದೆ ಗೊವಿಂದ ನಾಯ್ಕ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು ಆ ಸಮಯದಲ್ಲಿ ರಾಜ್ಯದಾಧ್ಯಂತ ಮೋದಿ ಅಲೆ ಎದ್ದಿತ್ತು ಹೊನ್ನಾವರ ಪರೆಸ್ ಮೆಸ್ತ ಕೊಲೆ ಸಂಬಂದ ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಮತದಾರರು ಆಕ್ರೋಶಿತರಾಗಿ ತಾವು ಬಿಜೆಪಿ ಅಭ್ಯರ್ಥಿಯನ್ನೆ ಗೆಲ್ಲಿಸುವ ನಿರ್ದಾರವನ್ನೆ ಮಾಡಿದ್ದು ಆ ಸಮಯದಲ್ಲಿ ಗೊವಿಂದ ನಾಯ್ಕ ಟಿಕೆಟ್ ಆಕಾಂಕ್ಷಿ ಎಂಬುವುದು ಗೊತ್ತಿದ್ದು ಬಿಜೆಪಿ ಪಕ್ಷ ಜೆಡಿಎಸ್ ಪಕ್ಷದ ಕರ‍್ಯಕರ್ತ ರಾಜಕಿಯದ ಗಂದಗಾಳಿಯನ್ನೆ ತಿಳಿಯದಿರದ ಅಂದು ಬಯಲಿನಲ್ಲಿ ಕಬಡಿ ಆಟ ಆಡಿಕೊಂಡಿದ್ದ ಇಂದಿನ ಶಾಸಕರಾದ ಸುನಿಲ್ ನಾಯ್ಕ ಅವರಿಗೆ ಟಿಕೆಟ್ ನೀಡಿತು . ಚುನಾಚಣೆಯಲ್ಲಿ ಸುನಿಲ್ ನಾಯ್ಕ ಗೆಲುವನ್ನು ಸುಲಭದಲ್ಲಿ ಪಡೆದರು ಕಾರಣ ಅಂದಿನ ಮೋದಿ ಅಲೆ ಹಾಗು ಪರೇಶ್ ಮೆಸ್ತ ಹತ್ಯೆಯ ಆಕ್ರೋಶ ಒಂದು ವೇಳೆ ಅಂದು ಗೊವಿಂದ ನಾಯ್ಕ ಅವರಿಗೆ ಟಿಕೆಟ್ ದೊರೆತಿದ್ದರೆ ನಿಶ್ವಿತವಾಗಿ ಗೊವಿಂದ ನಾಯ್ಕ ಗೇಲುವನ್ನು ಸಾದಿಸಿ ಇಂದು ಶಾಸಕರಾಗಿರುತ್ತಿದ್ದರು ಆದರೆ ಬಿಜೆಪಿ ಮಾಡಿದ್ದೆನು ತನ್ನ ಪಕ್ಷಕ್ಕಾಗಿ ಹಗಲಿರುಳು ದುಡಿದ ಗೋವಿಂದ ನಾಯ್ಕ ಅವರನ್ನು ಬಿಟ್ಟು ಪಕ್ಷಕ್ಕೆ ಸಂಬಂದ ಪಡದ ರಾಜಕಿಯ ಅನುಭವವೆ ಇಲ್ಲದ ಯಾರನ್ನೊ ತಂದು ಚುನಾವಣೆಗೆ ನಿಲ್ಲಿಸಿ ನಿಷ್ಟಾವಂತ ಕಾರ‍್ಯಕರ್ತರನ್ನು ಮೂಲೆಗುಂಪು ಮಾಡಿತು ಈ ಪ್ರಕ್ರಿಯೇಯಿಂದ ತಾಲೂಕಿನ ಎಲ್ಲಾ ಹಿಂದೂ ಸಂಘಟನೆಗಳು ಕಾರ‍್ಯಕರ್ತರು ಬಿಜೆಪಿ ಪಕ್ಷನಿಷ್ಟರು ಆಕ್ರೋಶ ವ್ಯಕ್ತಪಡಿಸಿದ್ದರು ಮುಖ್ಯವಾಗಿ ಹಿಂದೂ ಸಂಘಟನೆಯ ಮಾತೃ ಸಂಸ್ಥೆಯಾದ ಆರ್ ಎಸ್ ಎಸ್ ನ ಕೆಲವು ಮುಖಂಡರು ತಮ್ಮ ಜವಾಬ್ದಾರಿಯನ್ನು ಹಿರಿಯರಿಗೆ ಒಪ್ಪಿಸಿ ತಟಸ್ಥವಾಗೆ ಉಳಿದರು ಈಗಲೂ ಕೂಡ ಭಟ್ಕಳ ತಾಲೂಕಿನಲ್ಲಿ ಆರ್ ಎಸ್ ಎಸ್ ಸಂಪೂರ್ಣ ತಟಸ್ಥವಾಗೆ ಹೊಗಿದೆ ಎಂದರೆ ತಪ್ಪಾಗಲಿಕ್ಕಿ

ಈ ಎಲ್ಲಾ ಅಂಶಗಳು ಸತ್ಯವಾಗಿದ್ದು ಈಗಲೂ ಕಾರ‍್ಯಕರ್ತರು ಆಕ್ರೋಶವನ್ನು ವ್ಯಕ್ತಪಡೆಸುತ್ತಿದ್ದಾರೆ ತಡವಾಗಿಯಾದರು ಪಕ್ಷಕ್ಕೆ ತಾನು ಮಾಡಿದ ತಪ್ಪಿನ ಅರಿವಾಗಿರಬೇಕು ಈಗಾಗಲೆ ಬಿಜೆಪಿ ಪಕ್ಷದ ಕೆಲವು ಮುಖಂಡರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾವು ತಪ್ಪು ಮಾಡಿದೆವು ಎಂದು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ ಬಿಜೆಪಿ ತಮ್ಮ ತಪ್ಪಿನ ಪ್ರಯಶ್ಚಿತ ಎನ್ನುವಂತೆ ಈಗ ಗೊವಿಂದ ನಾಯ್ಕ ಅವರಿಗೆ ಕರ್ನಾಟಕ ರಾಜ್ಯ ಪಶ್ಚೀಮ ಘಟ್ಟಗಳ ಸಂರಕ್ಷಣಾ ಪಡೆ ನಿಗಮ ಅಧ್ಯಕ್ಷ ಪಟ್ಟ ನಿಡಿದೆ ಇದರಿಂದ ಪಕ್ಷದ ನಿಷ್ಟಾವಂತ ಕರ‍್ಯಕರ್ತರು ತಡವಾಗಿಯಾದರು ಬಿಜೆಪಿ ಸರಕಾರ ಪಕ್ಷ ನಿಷ್ಟರನ್ನು ಗುರುತಿಸಿದೆ ,ಒಂದು ಬೇಸರದ ಸಂಗತಿ ಎಂದರೆ ಪಕ್ಷಕ್ಕೆ ಪಕ್ಷ ನಿಷ್ಟರನ್ನು ಗುರುತಿಸಲು ಇಷ್ಟು ವರ್ಷಗಳೆ ಬೇಕಾಯಿತೆ ಎಂದು ಬೇಸರವನ್ನು ವ್ಯಕ್ತ ಪಡಿಸುತ್ತಿದ್ದಾರೆ.

ಒಟ್ಟಾರೆ ಇನ್ನಾದರು ಪಕ್ಷ ತನ್ನ ನಿಷ್ಟಾವಂತ ಕಾರ‍್ಯಕರ್ತರನ್ನು ಮೂಲೆ ಗುಂಪು ಮಾಡುವುದನ್ನು ನಿಲ್ಲಿಸಲಿ ನಮ್ಮಲ್ಲಿ ಪಕ್ಷನಿಷ್ಟರೆ ಹೆಚ್ಚಿದ್ದಾರೆ ಯಾವುದೆ ಅಧಿಕಾರವನ್ನು ಬಯಸದೆ ನಿಷ್ಟೆಯಿಂದ ದುಡಿಯುವವರು ಬಹಳಷ್ಟಿದ್ದಾರೆ ಅವರನ್ನು ಪಕ್ಷ ಮರೆಯದಿರಲಿ ಎಂದು ಕಾರ‍್ಯಕರ್ತರು ಪಕ್ಷಕ್ಕೆ ಮನವಿ ಮಾಡುತ್ತಿದ್ದಾರೆ ಎಂಬುವುದು ಸಾರ್ವಜನಿಕ ವಲಯದ ಮಾಹಿತಿಯಿಂದ ತಿಳಿದು ಬಂದಿದೆ

WhatsApp
Facebook
Telegram
error: Content is protected !!
Scroll to Top