ಭಟ್ಕಳಕ್ಕೆ ಎಂಟ್ರಿಕೊಟ್ಟ ಲೇಡಿ ಸಿಂಗಂ ಉತ್ತರ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಡಾ: ಸುಮನ್ ಡಿ ಪೆನ್ನೆಕರ್

ಭಟ್ಕಳದಲ್ಲಿ ಅಕ್ರಮ ಚಟುವಟಿಕೆಗಳಾದ ಇಸ್ಪಿಟ್ ಅಡ್ಡಾ ಮಟ್ಕಾದಂದೆ ಹೇಳ ಹೆಸರಿಲ್ಲದಂತಾಗುತ್ತದೆ ಸುಮನ್ ಡಿ ಪೆನ್ನೆಕರ್

ಭಟ್ಕಳ: ಉತ್ತರ ಕನ್ನಡ ಜಿಲ್ಲಾ ಪೋಲೀಸ್, ಭಟ್ಕಳ ಶಹರ, ಗ್ರಾಮೀಣ ಹಾಗೂ ಮುರುಡೇಶ್ವರ ಪೋಲಿಸ್ ಠಾಣೆ ವ್ಯಾಪ್ತಿಯ ಜನಸಂಪರ್ಕ ಸಭೆಯು ಸೋಮವಾರದಂದು
ತಾಲೂಕಿನ ಅರ್ಬನ್ ಬ್ಯಾಂಕ್‌ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ.ಸುಮನ್ ಡಿ ಪೆನ್ನೆಕರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯ ಆರಂಭದಲ್ಲಿ ಸಾರ್ವಜನಿಕರಿಂದ ತಾಲೂಕಿನಲ್ಲಿನ ಪೋಲೀಸ್ ‌ಇಲಾಖೆಗೆ ಸಂಬಂಧಿಸಿದಂತೆ ಸಮಸ್ಯೆ ಹಾಗೂ ಸಲಹೆಗಳನ್ನು ತಿಳಿಸಲು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಸೂಚಿಸಿದರು.

ಭಟ್ಕಳದಲ್ಲಿ ದಿನದಿಂದ ದಿನಕ್ಕೆ ವಾಹನದ ಸಂಖ್ಯೆ ಹೆಚ್ಚುತ್ತಿದೆ. ಅದಕ್ಕಾಗಿ ಭಟ್ಕಳದಲ್ಲಿ ಟ್ರಾಫಿಕ್ ಠಾಣೆ ತೆರೆಯಬೇಕೆಂಬ ಶಾಂತಾರಾಮ‌ ಭಟ್ಕಳ ಬೇಡಿಕೆ ಇಟ್ಟರು. ಇನ್ನು ವಾರದಲ್ಲಿ ಒಂದು ಬಾರಿ ವಾಹನ ತಪಾಸಣೆ ಮಾಡದೇ ಮೂರು ಮೂರು ಬಾರಿ ವಾಹನ ತಪಾಸಣೆ ಮಾಡುತ್ತಿದ್ದಾರೆ. ಇದರಿಂದ ಕೋವಿಡ್ ಬಳಿಕ ವ್ಯಾಪಾರ ಸುಧಾರಣೆಯಾಗುತ್ತಿದ್ದು ಚಿಕ್ಕ ಪುಟ್ಟ ವ್ಯಾಪಾರಸ್ಥರಿಗೆ ಸಮಸ್ಯೆಯಾಗುತ್ತಿದೆ‌ ಎಂದು ಇರ್ಷಾಧ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳ ಬಳಿ ಮನವಿ ಮಾಡಿದರು.

ಪ್ರತಿ ವರ್ಷ ಮಾರಿಗುಡಿ ರಸ್ತೆಯಲ್ಲಿ ರಂಜಾನ್ ಪೇಟೆ ನಡೆಯುತ್ತದೆ. ಇದರಿಂದ ಮುಂಡಳ್ಳಿ, ಚೌಥನಿ ಹಾಗೂ ಆ ಮಾರ್ಗದಿಂದ ಸಂಪರ್ಕವಾಗುವ ಊರಿನವರಿಗೆ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ. ಇದರಿಂದಾಗಿ ಅಲ್ಲಿ ನಡೆಯುವ ರಂಜಾನ್ ಮಾರ್ಕೆಟ್ ಸ್ಥಳಾಂತರ ಮಾಡಬೇಕು. ಅದೇ ರೀತಿ ಸರ್ಕಾರದಿಂದ ಗೋ ಹತ್ಯೆ ನಿಷೇಧವಿದ್ದರು ಮಾರಿಕಾಂಬಾ ದೇವಸ್ಥಾನದ ರಸ್ತೆಯಲ್ಲಿರುವ ಮಟನ್ ಮಾರ್ಕೆಟ್ ನಲ್ಲಿ ಗೋ ವಧೆ ಮಾಡುತ್ತಿದ್ದಾರೆ ಇದನ್ನು ಪೊಲೀಸರು ಪರಿಗಣಿಸಿ ಅಂತವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹಿಂದೂ ಕಾರ್ಯಕರ್ತ ಶ್ರೀನಿವಾಸ ನಾಯ್ಕ ಆಗ್ರಹಿಸಿದರು.

ಮುಂಜಾನೆಯಿಂದ ಸಂಜೆ ತನಕ ಭಟ್ಕಳದ ಶಂಸುದ್ದಿನ್ ಸರ್ಕಲ್ ನಲ್ಲಿ ಸಿಗ್ನಲ್ ವ್ಯವಸ್ಥೆಯ ಮಾಡಬೇಕು ಎಂದು ಎ. ಎಂ. ಮುಲ್ಲಾ ಹೇಳಿದರು.

ಮುರುಡೇಶ್ವರ ಬೀಚ್ ನಲ್ಲಿ ಪ್ರವಾಸಿಗರು ಸಾವನ್ನಪ್ಪುತ್ತಿದ್ದು ಅಲ್ಲಿ ಪೋಲಿಸ ಇಲಾಖೆಯಿಂದ ಮೈಕ್ ಅಳವಡಿಸಬೇಕು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಲೈಫ್ ಗಾರ್ಡ್ ಗಳನ್ನು ನೇಮಿಸುವುದರ ಜೊತೆ ವಿಶೇಷ ದಿನದಂದು ಟ್ರಾಫಿಕ್ ವ್ಯವಸ್ಥೆ ಕಲ್ಪಿಸಬೇಕು ಎಂದು ಕೃಷ ನಾಯ್ಕ ಜಮೀನ್ದಾರ ಹೇಳಿದರು.

ಮಾವಿನ ಕುರ್ವೆ ಬಂದರ ವ್ಯಾಪ್ತಿಯಲ್ಲಿ ಕಿರಾಣಿ ಹಾಗೂ ಗೂಡಂಗಡಿಗಳಲ್ಲಿ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದು ಇದನ್ನು ತಡೆಗಟ್ಟಬೇಕೆಂದು ಅಲ್ಲಿಯ ಸ್ಥಳಿಯ ಮಹೇಶ ಖಾರ್ವಿ ಮನವಿ ಮಾಡಿದರು.

ಮಟ್ಕಾ, ಜೂಜಾಟ, ಗಾಂಜಾ ತಡೆಗೆ ಖಾಸಗಿಯಾಗಿ ಒಂದು ಸಮಿತಿ ರಚಿಸಿ ಅದರ ಮೇಲೆ ಕ್ರಮ ಜರುಗಿಸಲಿದ್ದೇವೆ ಎಂದು ಮುನೀರಿ ಹೇಳಿದರು.

ನಂತರ ಸಭೆಯ ಕೊನೆಯಲ್ಲಿ ಸಾರ್ವಜನಿಕ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ.ಸುಮನ್ ಡಿ ಪೆನ್ನೆಕರ್ ‘ಸಭೆಯಲ್ಲಿ ಚರ್ಚೆಯಾದ ಸಮಸ್ಯೆಗೆ ಪರಿಹರಿಸುವ ನಿಟ್ಟಿನಲ್ಲಿ ಸ್ಪಂದಿಸಿದರೆ ಜನಸಾಮಾನ್ಯರಿಗೆ ಪೊಲೀಸರ ಮೇಲೆ ನಂಬಿಕೆ ಮತ್ತು ವಿಶ್ವಾಸ ಬರಲಿದೆ. ವ್ಯವಸ್ಥೆಯ ಒಳಗೆ ಜನಸಾಮಾನ್ಯರನ್ನು ಕರೆ ತರುವುದರಿಂದ ಅದಕ್ಕೊಂದು ಸೂಕ್ತ ಪರಿಹಾರ ನೀಡುವುದರಿಂದ ವ್ಯವಸ್ಥೆ ಬದಲಾವಣೆ ಸಾಧ್ಯವಾಗುತ್ತದೆ. ಈ ಸಭೆಯ ಮುಖ್ಯ ಉದ್ದೇಶ ಸಮಸ್ಯೆಯ ಚರ್ಚೆ ಜನರ ಮುಂದೆ ಇಟ್ಟರೇ ಅದರ ಬಗ್ಗೆ ಅರಿವು ಮೂಡಲಿದೆ ಎಂದರು.

ಈ ಸಭೆಯಲ್ಲಿ ಕೇಳಿ ಬಂದ ಸಮಸ್ಯೆಯ ಪರಿಹಾರದ ಫಲಿತಾಂಶ ಇನ್ನು ಒಂದು ತಿಂಗಳ ನಂತರ ಮಾದ್ಯಮದ ಮುಖಾಂತರ ನಾವು ಏನು ಮಾಡಿದ್ದೇವೆ ಎಂಬುದನ್ನು ನ್ ನಿಮಗೆ ತಲುಪಿಸುತ್ತೇವೇ ಹಾಗೂ ಅಕ್ರಮ ಚಟುವಟಿಕೆ ನಿಂತಿದ್ದು ಮುಂದಿನ ದಿನಗಳಲ್ಲಿ ಮಟ್ಕಾ ಜೂಜಾಟ ಹಾಗೂ ಅಕ್ರಮ ಮದ್ಯ ಮಾರಾಟ ನಡೆಯದಂತೆ ಕ್ರಮ ಜರುಗಿಸಲು ತಿಳಿಸುತ್ತೇನೆ ಎಂದರು.

ಅತಿ ಶೀಘ್ರದಲ್ಲಿ ಭಟ್ಕಳದ ಶಾಲಾ ಕಾಲೇಜಿನಲ್ಲಿ  ಮೊಟ್ಟಮೊದಲು ಸೈಬರ್ ಅಪರಾಧದ ಬಗ್ಗೆ  ಜಾಗ್ರತಿ ಮೂಡಿಸುವ ಕಾರ್ಯಕ್ರಮವನ್ನು ಸೈಬರ್ ಅಪರಾಧ ತಡೆಯ ನೂರಿತರನ್ನು ಕರೆಸಿ ಜಾಗ್ರತಿ ಮುಡಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಡಿವೈಎಸ್ಪಿ ಕೆ.ಯು. ಬೆಳ್ಳಿಯಪ್ಪ ನಗರ ಠಾಣಾ ಸಿಪಿಐ ದಿವಾಕರ, ಗ್ರಾಮೀಣ ಠಾಣೆ ಸಿಪಿಐ ಮಹಾಬಲೇಶ್ವರ ನಾಯ್ಕ, ಪಿಎಸ್ಐ ಗಳು ಇದ್ದರು.

WhatsApp
Facebook
Telegram
error: Content is protected !!
Scroll to Top