ಬೆಂಗಳೂರು ಪ್ರೀಡಮ್ ಪಾರ್ಕಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ವತಿಯಿಂದ ಪ್ರತಿಭಟನೆ

ಎಸಿಬಿ ರದ್ದುಗೊಳಿಸಿ ಲೋಕಾಯುಕ್ತ ಬಲಪಡಿಸುವಂತೆ  ಬೇಡಿಕೆ ಮುಂದಿಟ್ಟು ಪ್ರತಿಭಟನೆ

ಬೆಂಗಳೂರು: ಪ್ರೀಡಮ್ ಪಾರ್ಕಿನಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ವತಿಯಿಂದ ಎಸಿಬಿ ರದ್ದುಗೊಳಿಸಿ ಲೊಕಾಯುಕ್ತ ಬಲಪಡಿಸುವಂತೆ ಹಾಗು ಇನ್ನಿತರ ಸಮಾಜಮುಖಿ ಬೇಡಿಕೆಯನ್ನು ಮುಂದಿಟ್ಟುಕೊಂಡು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು

ಈ ಸಂದರ್ಬದಲ್ಲಿ ರಾಜ್ಯ ಮಾಹಿತಿ ಹಕ್ಕು ಸಂಘಟನಾ ಅಧ್ಯಕ್ಷರಾದ ಕುಣಿಗಲ್ ರಮೇಶ ಅವರು ಮಾತನಾಡಿ ಮಾಹಿತಿ ಹಕ್ಕು ನಿಗಮದ ಆಯುಕ್ತರು ಪ್ರಾಮಾಣಿಕರಾಗಿರ ಬೇಕು ಆದರೆ ನಮ್ಮ ರಾಜ್ಯದಾಧ್ಯಂತ ಬ್ರಷ್ಟರನ್ನೆ ಆಯ್ಕೆ ಮಾಡಲಾಗಿದೆ ರಾಜ್ಯದಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತರಿಗೆ ರಕ್ಷಣೆ ಇಲ್ಲದಾಗಿದೆ ಇನ್ನು ಬಿಜೆಪಿ ಸರಕಾರ ಅಧಿಕಾರ ಹಿಡಿಯುವ ಸಂದರ್ಬದಲ್ಲಿ ಎಸಿಬಿ ರದ್ದುಗೊಳಿಸಿ ಲೋಕಾಯುಕ್ತವನ್ನು ಬಲಪಡಿಸುವ ಮಾತನ್ನು ಕೊಟ್ಟಿದೆ ಆದರೆ ಅಧಿಕಾರ ಹಿಡಿದ ನಂತರ ಬಿಜೆಪಿ ತನ್ನ ವರಸೆಯನ್ನೆ ಬದಲಾಯಿಸಿದೆ ರಾಜ್ಯದಲ್ಲಿ ಭಟ್ಟಾಚಾರ ತಾಂಡವವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ಈ ಸಂದರ್ಬದಲ್ಲಿ ಸಾಮಾಜಿ ಹಿರಿಯ ಹೊರಾಟಗಾರೊಬ್ಬರು ಮಾತನಾಡಿ ಸಾಮಾಜಿಕ ಹೊರಾಟ ಮಾಡುವುದು ಅಷ್ಟು ಸುಲಭದ ಮಾತಲ್ಲಾ ನಮ್ಮ ಮಾಹಿತಿ ಹಕ್ಕು ಹೊರಾಟಗಾರರ ಹತ್ಯೆ ಮಾಡಲಾಗುತ್ತಿದೆ ಭ್ರಷ್ಟಾಚಾರದ ವಿರುದ್ದ ಮಾತನಾಡುವುದೆ ತಪ್ಪು ಎಂಬಂತೆ ಬಿಂಬಿಸಲಾಗುತ್ತಿದೆ ಇದಕ್ಕೆ ನಾವು ಸೊಪ್ಪನ್ನೆ ಹಾಕುವುದಿಲ್ಲಾ ಸಾವು ಬದುಕು ಬಗವಂತನ ಕೈಯಲ್ಲಿದೆ ಸಾವು ಒಂದು ದಿನ ನಿಶ್ಚಿತ ಅದಕ್ಕೆ ಹೆದರಿ ಸುಮ್ಮನೆ ಕುಳಿತುಕೊಳ್ಳಲು ಅಸಾಧ್ಯ ನಮ್ಮ ಹೊರಾಟ ನಿರಂತರವಾಗಿರುತ್ತದೆ ಎಂದು ಹೇಳಿದರು

ಈ ಸಂದರ್ಬದಲ್ಲಿ ಪ್ರತಿ ತಾಲೂಕು ಹಾಗು ಜಿಲ್ಲಾಘಟಕದ ಸದಸ್ಯರು ಪದಾದಿಕಾರಿಗಳು ಮಾತನಾಡಿದರು

ಈ ಸಂದರ್ಬದಲ್ಲಿ ರಾಜ್ಯದ ತಾಲೂಕ ಮತ್ತು ಜಿಲ್ಲಾ ಘಟಕದ ಅಧ್ಯಕ್ಷರು ಸದಸ್ಯರು ಮತ್ತು ಪಧಾಧಿಕಾರಿಗಳು ಪ್ರತಿಭಟನೆಯಲ್ಲಿ ಹಾಜರಾಗಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಿದರು

WhatsApp
Facebook
Telegram
error: Content is protected !!
Scroll to Top