ಭಟ್ಕಳದ ಕಡಸಲಗದ್ದೆಯ ಹಳೆಯ ಕ್ಯಾಶ್ಯು ಗೋದಾಮನಲ್ಲಿ ಅಕ್ರಮ ಪಡಿತರ ಅಕ್ಕಿ ಪತ್ತೆ

ತಹಸೀಲ್ದಾರ ಹಾಗೂ ಪೋಲಿಸ್ ಇಲಾಖೆ ಜಂಟಿ ಕಾರ್ಯಾಚರಣೆಯಲ್ಲಿ ಗೋದಾಮ ಮೇಲೆ‌ ದಾಳಿ


900ಕ್ಕೂ ಅಧಿಕ ಅಕ್ರಮ ಚೀಲ ಪತ್ತೆ ತನಿಖೆಯಿಂದ ಇನ್ನಷ್ಟೇ ಮಾಹಿತಿ ಲಭ್ಯ ಸಾಧ್ಯತೆ


ಭಟ್ಕಳ: ತಾಲೂಕಿನ ಮುಟ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಸಲಗದ್ದೆಯ ನಿರ್ಜನ ಪ್ರದೇಶದಲ್ಲಿನ ಪಾಳು ಬಿದ್ದ ಕ್ಯಾಶ್ಯು ಗೋದಾಮಿನಲ್ಲಿ ಅಕ್ರಮವಾಗಿ 900ಕ್ಕೂ ಅಧಿಕ ಪಡಿತರ ಅಕ್ಕಿಯ ಚೀಲವು ಪತ್ತೆಯಾಗಿದ್ದು, ಸ್ಥಳಕ್ಕೆ ತಹಸೀಲ್ದಾರ ಹಾಗೂ ಸಿಪಿಐ ಮತ್ತು ಪೋಲಿಸ್ ಸಿಬ್ಬಂದಿಗಳು ದಾಳಿ ನಡೆಸಿ ವಶಕ್ಕೆ ಪಡೆಯಲಾದ ಘಟನೆಯು ಶುಕ್ರವಾರದಂದು ಸಂಜೆ ವರದಿಯಾಗಿದೆ.
ಸಾರ್ವಜನಿಕರ ದೂರಿನ್ವಯದಂತೆ ಭಟ್ಕಳ ತಹಸೀಲ್ದಾರ ಡಾ. ಸುಮಂತ ಹಾಗೂ ನಗರ ಠಾಣೆ ಸಿಪಿಐ ದಿವಾಕರ ಹಾಗೂ ಗ್ರಾಮೀಣ ಠಾಣೆ ಸಿಪಿಐ ಮಹಾಬಲೇಶ್ವರ ನಾಯ್ಕ ಅವರ ನೇತೃತ್ವದಲ್ಲಿ ಅಕ್ರಮ ಪಡಿತರ ಅಕ್ಕಿಯನ್ನು ಸಂಗ್ರಹಿಸಿಟ್ಟ ಗೋದಾಮ ಮೇಲೆ ದಾಳಿ‌ ನಡೆಸಲಾಗಿದೆ. ಅಕ್ರಮ ಅಕ್ಕಿಯನ್ನುತಾಲೂಕಿನ ನಾನಾ ಕಡೆಗಳಿಂದ ಜನರಿಂದ ಪಡೆದು ಸಂಗ್ರಹಿಸಿ ಕಡಸಲಗದ್ದೆಯಲ್ಲಿನ ನಿರ್ಜನ ಪ್ರದೇಶದ ಹಳೆಯ ಕ್ಯಾಶ್ಯು ಗೋದಾಮಿನಲ್ಲಿ ಸಂಗ್ರಹಿಸಿಡಲಾಗುತ್ತಿತ್ತು ಎಂಬ ಮಾಹಿತಿ ತಿಳಿದು ಬಂದಿದೆ. ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಅಧಿಕಾರಿಗಳು ಪೋಲೀಸರು ಗೋದಾಮು ಒಳಗೆ ಪರಿಶೀಲಿಸಿದಾಗ ಒಂದು ಸಲಕ್ಕೆ ಹೌಹಾರಿದ್ದಾರೆ. ಗೋದಾಮಿನೊಳಗೆ ಅಂದಾಜು 900ಕ್ಕೂ ಅಧಿಕ ಚೀಲದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕ್ವಿಂಟಾಲ್ ಅಕ್ಕಿಯನ್ನು ಸಂಗ್ರಹಿಸಿಡಲಾಗಿದೆ ಎನ್ನುವ ಮಾಹಿತಿ ಮೇಲ್ನೋಟಕ್ಕೆ ತಿಳಿದು ಬಂದಿದೆ.
ಗೋದಾಮಿನಲ್ಲಿ ನಾನಾ ಕಡೆಯಿಂದ ಸಂಗ್ರಹಿಸಿದ ಅಕ್ಕಿಯನ್ನು ಸಿಮೆಂಟ್ ಚೀಲದಲ್ಲಿ ತುಂಬಿಸಿ ಯಂತ್ರದಿಂದ ಚೀಲವನ್ನು ಹೊಲಿಗೆ ಮಾಡಿರುವುದು ಕಂಡು ಬಂದಿದೆ. ಹಾಗೂ ಸಾಕಷ್ಟು ಗೋಣಿ ಚೀಲಗಳನ್ನು ಸಹ ಸಂಗ್ರಹಿಸಿಟ್ಟಿರುವುದು ಕಂಡು ಬಂದಿದೆ. 
ಸದ್ಯ ಗೋದಾಮು ಸಹಿತ 900ಕ್ಕೂ ಅಧಿಕ ಅಕ್ಕಿ ಚೀಲ ಹಾಗೂ ಚೀಲ ಹೊಲಿಯುವ ಯಂತ್ರವನ್ನು ಜಪ್ತಿ ಮಾಡಲಾಗಿದೆ. 
ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ಇರುವ ಹಿನ್ನೆಲೆಯಲ್ಲಿ ಅಕ್ಕಿಯನ್ನು ಸರಕಾರಿ ಗೋದಾಮಿಗೆ ಸಾಗಾಟ ಮಾಡಲು ಸಾಧ್ಯವಾಗದ ಹಿನ್ನೆಲೆ ಸದ್ಯಕ್ಕೆ ಗೋದಾಮು ಜಪ್ತಿ ಮಾಡಲಾಗಿತ್ತಾದರು ಸಹ ರಾತ್ರಿ ಮುಂಜಾನೆಯ ತನಕ ಡಿಆರ್ ಪೋಲಿಸ ಸಿಬ್ಬಂದಿಗಳು ಹಾಗೂ ಗ್ರಾಮ ಸಹಾಯಕರು ಕಾವಲು‌ ಕಾದಿದ್ದಾರೆ. 
ಅಕ್ರಮ ಅಕ್ಕಿ ಸಂಗ್ರಹಿಸಿಟ್ಟ ಆರೋಪಿಗಳು ಮಾಹಿತಿ ತಿಳಿದು ಸ್ಥಳದಿಂದ ನಾಪತ್ತೆಯಾಗಿದ್ದು, ಪತ್ತೆಗೆ ಶೋಧ ಕಾರ್ಯ ಇನ್ನಷ್ಟೇ ನಡೆಯಬೇಕಾಗಿದೆ. 
ಸ್ಥಳದಲ್ಲಿ ಆಹಾರ ನಿರೀಕ್ಷಕ ಪಾಂಡು ನಾಯ್ಕ, ಕಂದಾಯ ನಿರೀಕ್ಷಕ ವಿಶ್ವನಾಥ ಗಾಂವಕರ್, ಗ್ರಾಮೀಣ ಠಾಣೆ ಪಿಎಸ್ಐ ಭರತಕುಮಾರ, ನಗರ ಠಾಣೆ ಪಿಎಸ್ಐಗಳಾದ ಸುಮಾ ಬಿ., ಹೆಚ್ ಕುಡಗುಂಟಿ ಹಾಗೂ ಸಿಬ್ಬಂದಿಗಳು ಇದ್ದರು.

WhatsApp
Facebook
Telegram
error: Content is protected !!
Scroll to Top