ಭಟ್ಕಳ: 2021 ಮತ್ತು2022 ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆ ಮತ್ತ ಅಂಬೇಡ್ಕರ ನಿವಾಸ ಯೋಜನೆಯ ವಿತರಣಾ ಪತ್ರ ವಿತರಣಾ

ಭಟ್ಕಳ: 2021 ಮತ್ತು2022 ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆ ಮತ್ತ ಅಂಬೇಡ್ಕರ ನಿವಾಸ ಯೋಜನೆಯ ಮನೆ ಮಂಜುರಾದ ಫಲಾನುಭವಿಗಳಿಗೆ ಇಂದು ಶಾಸಕ ಸುನಿಲ್‌ ನಾಯ್ಕ ಕಾಮಗಾರಿ ವಿತರಣಾ ಪತ್ರವನ್ನು ವಿತರಿಸುವ ಕಾರ್ಯಕ್ರಮ ಭಟ್ಕಳ ತಾಲೂಕಿನ ವಿವಿಧ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಇಂದು ನಡೆಯಿತು.

ಈ ಯೋಜನೆಯಲ್ಲಿ ಸಾಮಾನ್ಯ ವ್ರ್ಗದಲ್ಲಿ ಬರುವವರಿಗೆ 2,70,000 ರೂ ಸಂಪೂರ್ಣ ಸಹಾಯ ಧನ ದೊರಕುತ್ತದೆ ಹಾಗೂ ಪ.ಜಾ ಮತ್ತ ಪ.ಪಂದವರಿಗೆ 3,50,000 ರೂ ಹಣ ಮಂಜುರಾಗುವ ಹಣವನ್ನು 4 ವಿಭಾಗಗಲ್ಲಿ ಜಿಪಿಎಸ್‌ ಮುಖಾಂತರ ಹಣ ಪಾವತಿ ಯಾಗುತ್ತದೆ ಎಂದು ಜಾಲಿ ಪಂಚಾಯತ್‌ನ ಮುಖ್ಯಾಧಿಕಾರಿ ವರ್ಣೆಕರ ತಿಳಿಸಿದರು.

ಶಾಸಕ ಸುನಿಲ್‌ ನಾಯ್ಕ ಮಾತನಾಡಿ ಮನೆ ನಿರ್ಮಾಣ ಪ್ರತಿಯೊಬ್ಬ ಬಡವನ ಕನಸಾಗಿರುತ್ತದೆ. ಈ ಕನಸನ್ನು ನನಸು ಮಾಡುವ ಸದುದ್ದೇಶದಿಂದ ನಮ್ಮ ಸರ್ಕಾರ ಬಡವರವ ಮನೆ ನಿರ್ಮಾಣಕ್ಕೆ ವಿವಿಧ ಯೋಜನೆಗಳ ಅಡಿಯಲ್ಲಿ ಧನ ಸಹಾಯ ಮಾಡುತ್ತಿದೆ. .ಕಳೆದ ಬಾರಿ ಮನೆ ಹಂಚಿಕೆಯಲ್ಲಿ ಆದ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ, ಅವರೆಲ್ಲರಿಗೂ ಮನೆ ನಿರ್ಮಾಣಕ್ಕೆ ಅನುವುಮಾಡಿಕೊಡಲಾಗಿತ್ತು.

ಈಗ ನನ್ನ ಮತ ಕ್ಷೇತ್ರದ ಭಟ್ಕಳ ತಾಲೂಕಿನಲ್ಲಿ ಜಾಲಿ ಪಟ್ಟಣ ಪಂಚಾಯತ್ – 40 ಮನೆ, ತಲಾ 2.80 ಲಕ್ಷ ,ಮುಟ್ಟಳ್ಳಿ, ಬೆಳ್ಕೆ, ಯಲ್ವಡಿಕವೂರ್, ಪಂಚಾಯತ್ – 63 ಮನೆ, ತಲಾ 1.58 ಲಕ್ಷ, ಹಾಡುವಳ್ಳಿ, ಮಾರುಕೇರಿ, ಕೋಣಾರ – 49 ಮನೆ, ತಲಾ 1.58 ಲಕ್ಷ, ಮುಂಡಳ್ಳಿ, ಮಾವಿನಕುರ್ವೆ, ಹೆಬಳೆ – 54 ಮನೆ, ತಲಾ 1.58 ಲಕ್ಷ., ಶಿರಾಲಿ, ಬೇಂಗ್ರೆ, ಕೊಪ್ಪ – 79 ಮನೆ, ತಲಾ 1.58 ಲಕ್ಷ ,ಬೈಲೂರ್, ಮಾವಳ್ಳಿ-1, ಮಾವಳ್ಳಿ-2, ಕಾಯ್ಕಿಣಿ – 94 ಮನೆ, ತಲಾ 1.58 ಲಕ್ಷ. ದಂತೆ 379 ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು ಎಲ್ಲರಿಗೂ ಕಾರ್ಯದೇಶ ಪತ್ರವನ್ನು ನೀಡುದಾಗಿ ತಿಳಿಸಿದರು. ಹೆಚ್ಚುವರಿ ಮನೆಗಳಿಗೆ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು ಇನ್ನೂ ಕೆಲವೇ ದಿನಗಳಲ್ಲಿ ಇನ್ನೂ ಹೆಚ್ಚಿನ ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರಿಗೂ ಕಾರ್ಯದೇಶವನ್ನು ನೀಡಲಾಗುವುದು ಎಂದರು.

WhatsApp
Facebook
Telegram
error: Content is protected !!
Scroll to Top