ರಾಜ್ಯ ಆರ್‌ ಟಿ ಆಯ್‌ ಸಂಘಟನೆಯ‌ ವತಿಯಿಂದ ತಹಶಿಲ್ದಾರರಿಗೆ ಮನವಿ

ಭಟ್ಕಳ : ರಾಜ್ಯ ಆರ್‌ ಟಿ ಆಯ್‌ ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಭಟ್ಕಳ ಘಟಕದ ವತಿಯಿಂದ ಸಹಾಯಕ ಆಯುಕ್ತರ ಅನುಪಸ್ಥಿತಿಯಲ್ಲಿ ತಹಶಿಲ್ದಾರರ ಮೂಲಕ ಜಿಲ್ಲಾ ಧಿಕಾರಿಗಳಿಗೆ ಹೆಬಳೆ ಪಂಚಾಯತನಲ್ಲಿ ಭ್ರಷ್ಟಾಚಾರ ನಡೆಸಿದ ಅಧಿಕಾರಿಗಳ ಮೆಲೆ ಶೀಘ್ರ ಶಿಸ್ತು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಯಿತು.

ಭಟ್ಕಳದ ಹೆಬಳೆ ಪಂಚಾಯತನಲ್ಲಿ ಕಾಮಗಾರಿ ಹಾಗೂ ನಿಧಿ 2ರಲ್ಲಿ ಭ್ರಷ್ಟಾಚಾರ ನಡೆದಿರುವುದರ ಬಗ್ಗೆ, ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ತಾಲೂಕು ಕಾರ್ಯದರ್ಶಿಗಳಾದ ನಾಗೇಶ ನಾರಾಯಣ ನಾಯ್ಕ ಅವರು ಜಿಲ್ಲಾ ಪಂಚಾಯತ್‌ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರನ್ನು ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಅದೇಶದಂತೆ ತಾಲೂಕ ಪಂಚಾಯತ ವಿಶೆಷ ತನಿಖಾ ತಂಡ ರಚಿಸಿ ದಿನಾಂಕ 11/05/2022 ರಂದು ಹೆಬಳೆ ಪಂಚಾಯತಗೆ ಆಗಮಿಸಿ ಕುಲಂಕೂಶ ವಾಗಿ ತನಿಖೆ ನಡೆಸಿದಾಗ ಮುಂಗಡ ರಶೀದಿ ಹಾಗು ಚೆಕ್‌ ಸ್ವೀಕೃತಿಗಳಲ್ಲಿ ಸಹಿ ವ್ಯತ್ಯಾಸವಿರುವುದು ಹಾಗೂ ದಾಖಲೆಯಗಳ ನಿರ್ವಹಣೆಯಲ್ಲಿ ಕ್ರಮ ಬದ್ಧತೆ ಇಲ್ಲದೆ ಅವ್ಯವಹಾರ ಆಗಿರುವ ಬಗ್ಗೆ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗೆ ವರದಿ ಸಲ್ಲಿಕೆಯಾಗಿತ್ತು. ಆದರೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಇದರ ಬಗ್ಗೆ ಕ್ರಮ ಕೈಗೊಳ್ಳಲು ವಿಳಂಬ ಮಾಡಿರುದರಿಂದ ತನಿಖೆಯಲ್ಲಿ ಪಾರದರ್ಶಕತೆ ಇರುವುದು ಸಂಶಯಕ್ಕೆ ಇಡುಮಾಡಿದೆ. ಹೆಬಳೆ ಗ್ರಾಮ ಪಂಚಾಯತ ನಲ್ಲಿ ನಡೆದ ಬ್ರಷ್ಟಾಚಾರದ ಬಗ್ಗೆ ಸೂಕ್ತ ಕ್ರಮ ಕೈಗೊಂಡು ತಪ್ಪಿತಸ್ಥರಿಗೆ ಶೀಘ್ರವಾಗಿ ಶಿಕ್ಷೆ ದೊರೆಯುವಂತೆ ಮನವಿ ಸಲ್ಲಿಸಿದರು.

ಮನವಿ ಯನ್ನು ನೀಡಿದ ನಂತರ ಮಾಧ್ಯಮ ದೊಂದಿಗೆ ಮಾತನಾಡಿದ ಆರ್.ಟಿ ಆಯ್‌ ನ ಜಿಲ್ಲಾಧ್ಯಕ್ಷರಾದ ರಾಜು ನಾಯ್ಕ ಮಾತನಾಡಿ ಸಂಭಂದ ಬ್ರಷ್ಟ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾಧ್ಯಕ್ಷರಾದ ರಮೇಶ ಕುಣಿಗಲ್‌ ಅವರ ನೇತೃತ್ವದಲ್ಲಿ ಕಾರವಾರದ ಜಿಲ್ಲಾ ಪಂಚಾಯತ ಕಛೇರಿಯ ಮುಂಭಾಗದಲ್ಲಿ ಉಗ್ರಪ್ರತಿಭಟನೆ ಕೈಗೊಳ್ಳುವುದಾಗಿ ತಿಳಿಸಿದರು.

ಈ ಸಂಧರ್ಭದಲ್ಲಿ ನಾಗೇಂದ್ರ ನಾಯ್ಕ ರಾಜು ನಾಯ್ಕ ಶಂಕರ ನಾಯ್ಕ ವಾಸುದೇವ ಮೊಗೇರ ಸೇರಿದಂತೆ ಆರ್‌ ಟಿ ಆಯ್‌ ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top