ಈಜು ಕೊಳವಾಗಿ ಪರಿವರ್ತನೆಯಾದ ಪುರಸಭಾ ಬೇಸ್ಮೆಂಟ್

ಅಪಾಯದ ಅಂಚನ್ನು ತಲುಪಿದೆಯೇ ಪುರಸಭಾ ಕಟ್ಟಡ ?

ವಿವಾದಗಳನ್ನು ಹುಟ್ಟುಹಾಕುವುದರಲ್ಲೆ ಕಾಲಕಳೆಯುತ್ತಿದೆಯೆ ಭಟ್ಕಳ ಪುರಸಭೆ

ಭಟ್ಕಳ ಪುರಸಭೆ ಕಟ್ಟಡದ ನೆಲಮಾಳಿಗೆ ಈಜು ಕೊಳದಂತೆ ಪರಿವರ್ತನೆಯಾಗಿದ್ದು ಕಟ್ಟಡದ ನೇಲ ಮಾಳಿಗೆಯಲ್ಲಿ ಕರೆಂಟ್ ಮಿಟರ್ ಬೊರ್ಡಗಳು ಅಳವಡಿಸಲಾಗಿದ್ದು ವಿದ್ಯುತ್ ಅರ್ಥಿಂಗ್ ಉಂಟಾದಲ್ಲಿ ಸಾವು ನೊವುಗಳು ಸಂಬವಿಸುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತಿದೆ ಈ ಬಗ್ಗೆ ಒಂದು ವಿಷೇಶ ವರದಿ ಇಲ್ಲಿದೆ ನೋಡಿ

ಭಟ್ಕಳ ಪುರಸಭೆ ವಿಖ್ಯಾತಿಗಿಂತ ಕುಖ್ಯಾತಿಗೆ ಪ್ರಸಿದ್ದಿಯನ್ನು ಪಡೆದಿದೆ ಎಂದರೆ ತಪ್ಪಿಲ್ಲಾ ಪುರಸಭೆ ಅಭಿವೃದ್ದಿಗಳ ಕಡೆ ಗಮನಹರಿಸ ಬೇಕಾಗಿರುವುದು ತುಂಬ ಅವಶ್ಯಕ ಆದರೆ ನಮ್ಮ ಪುರಸಭೆ ಕೆವಲ ಗೊಂದಲಗಳನ್ನೆ ಹುಟ್ಟುಹಾಕುತ್ತದೆ ಹಾಗು ಆ ಗೊಂದಲಗಳನ್ನು ಪರಿಹರಿಸುವುದರಲ್ಲೆ ಕಾಲ ಕಳೆಯುತ್ತದೆ ಹಾಗಾದರೆ ಪುರಸಭೆ ಅಭಿವೃದ್ದಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದು ಯಾವಾಗ ಎನ್ನುವುದು ಮುಖ್ಯ ಪ್ರಶ್ನೆಯಾಗಿದೆ .

ಇನ್ಬು ಪುರಸಭೆಯ ಈಗಿನ ಪರಿಸ್ಥಿತಿ ತುಂಬ ಶೊಚನಿಯ ಎಂದರೆ ತಪ್ಪಾಗಲಿಕ್ಕಿಲ್ಲಾ ಕಾರಣ ಮಳೆ ಬಂತೆಂದರೆ ಪುರಭೆಯ ನೆಲ ಮಾಳಿಗೆ ಸ್ವಿಮ್ಮಿಂಗ್ ಪೂಲ್ ಆಗಿ ಪರಿವರ್ತನೆಯಾಗಿ ಬಿಡುತ್ತದೆ ದಶಗಳಿಂದ ಪುರಸಭೆ ನೆಲಮಾಳಿಗೆ ಸಮಸ್ಯೆ ಪರಿಹರಿಸುವ ಗೋಜಿಗೆ ಯಾರು ಹೊಗಿರುವುದಿಲ್ಲಾ ಮಳೆಗಾಲ ಪ್ರಾರಂಬವಾಯಿತೆಂದರೆ ಪುರಸಭಾ ನೆಲಮಾಳಿಗೆಯಲ್ಲಿ ನೀರು ತುಂಬಿ ಸ್ವಿಮ್ಮಿಂಗ್ ಪೂಲ್ ಆಗಿ ಬದಲಾಗುತ್ತದೆ ವಿಕ್ಷಕರೆ ನೀವು ಕೆಳಬಹುದು ಕೆವಲ ಮಳೆಗಾಲವಲ್ಲವೆ ಆಗಲಿ ಬಿಡಿ ಎನು ಸಮಸ್ಯೆ ಎಂದು ಆದರೆ ಸಮಸ್ಯೆ ಇದೆ ವಿಕ್ಷಕರೆ ಪ ಇಡಿ ಕಟ್ಟಡದ ವಿಧ್ಯುತ್ ಮೀಟರ್ ಬೊರ್ಡಗಳು ಪ್ಯೂಸ್ ಎಮ್ ಸಿ ಬಿ ಜೆನರೆಟರ್ ಇರುವುದು ಇದೆ ಪುರಸಭಾ ನೆಲಮಾಳಿಗೆಯಲ್ಲಿ ದುರಾದ್ರಷ್ಟವಶಾತ್ ಒಂದು ವೇಳೆ ಈ ನೆಲಮಾಳಿಗೆಯಲ್ಲಿ ನಿಂತ ನೀರಿಗೆ ವಿದ್ಯುತ್ ಸ್ಪರ್ಷವಾಗಿ ಬಿಟ್ಟರೆ ? ಕಲ್ಪಿಸಿಕೊಳ್ಳಲು ಭಯವಾಗುತ್ತದೆ ಅಲ್ಲವೆ ಒಂದು ವೇಳೆ ಹಾಗಾದಲ್ಲಿ ಇಡಿ ಪುರಸಭಾ ಕಟ್ಟಡಕ್ಕೆ ವಿದ್ಯುತ್ ಅರ್ಥಿಂಗ್ ಉಂಟಾಗಿ ಸಾವು ನೋವುಗಳು ಸಂಬವಿಸುತ್ತದೆ ಅಲ್ಲದೆ ನೆಲಮಾಳಿಗೆಯಲ್ಲಿ ನಿಂತ ನೀರಲ್ಲಿ ಸಾರ್ವಜನಿಕರು ಇಳಿದಲ್ಲಿ ಬದುಕುಳಿಯುವ ಸಾಧ್ಯತೆಗಳೆ ಇರುವುದಿಲ್ಲಾ ಗಮನಿಸಿ ನಮ್ಮ ಪುರಸಭೆ ಕಟ್ಟಡ ಮಳೆಗಾಲದಲ್ಲಿ ಎಷ್ಟು ಅಪಾಯಕಾರಿ ಎಂದು

ಇನ್ನು ಈ ಪುರಸಭೆ ಕಟ್ಟಡ ಉದ್ಗಾಟನೆ ಯಾದಂದಿನಿಂದಲೂ ಪ್ರತಿ ಮಳೆಗಾಲದಲ್ಲೂ ಇದೆ ಸಮಸ್ಯೆ ಅಂದರೆ ದಶಕಗಳ ಹಿಂದಿನಿಂದಲೂ ಪುರಸಭಾ ನೆಲಮಾಳಿಗೆಯಲ್ಲಿ ಮೊಣಕಾಲುದ್ದ ನೀರು ನಿಲ್ಲುತ್ತಲೆ ಬರುತ್ತಿದೆ ಇದರಿಂದ ಕಟ್ಟಡಕ್ಕೆ ಎಷ್ಟು ಹಾನಿಯಾಗಿರ ಬಹುದು ಆದರೆ ನಮ್ಮ ಪುರಸಭೆ ಇನ್ನು ಕೂಡ ಎಚ್ಚೆತ್ತುಕೊಂಡಿಲ್ಲಾ ಹಾಗಾದರೆ ಪುರಸಭೆ ಸಮಸ್ಯೆ ಬಗೆ ಹರಿಸುವುದಿಲ್ಲವೆ ಒಂದು ವೇಳೆ ದಶಕಗಳಿಂದ ನೀರು ನಿಂತು ಕಟ್ಟಡದ ತಳಪಾಯಕ್ಕೆ ಹಾನಿಯುಂಟಾಗಿ ಕಟ್ಟಡವೆ ದರಾಶಾಯಿಯಾದರೆ ಅದಕ್ಕೆ ಹೊಣೆಯಾರು

ಇಲ್ಲಿ ಮುಖ್ಯವಾಗಿ ಬೇಲಿಯೆ ಎದ್ದು ಹೊಲ ಮೆಂದಂತೆ ಆಗಿದೆ ಆಡಳಿತ ನಡೆಸಬೇಕಾದವರು ಯಾವಾಗಲು ವಿವಾದಗಳನ್ನು ಸ್ರಷ್ಟಿ ಮಾಡಿಕೊಂಡು ಅದನ್ನು ಬಗೆ ಹರಿಸುವುದರಲ್ಲೆ ವ್ಯಸ್ತವಾಗಿರುವಾಗ ಇನ್ನು ಇಂಥಹ ಗಂಭಿರ ಸಮಸ್ಯೆ ಬಗೆಹರಿಸುವ ಪುರುಸೊತ್ತಾದರು ಅವರಿಗೆಲ್ಲಿರುತ್ತದೆ ಎನ್ನುವುದು ಸಾರ್ವಜನಿಕರ ಆಕ್ರೋಶದ ಪ್ರಶ್ನೇಯಾಗಿದೆ

ಇನ್ನಾದರು ಇದಕ್ಕೆ ಸಂಬಂದಿಸಿದಂತೆ ಅಧಿಕಾರಿಗಳು ಜನಪ್ರತಿನಿದಿಗಳು ಸಮಸ್ಯೆಯ ಗಂಬಿರತೆಯನ್ನು ಮನಗಂಡು ಸಮಸ್ಯೆ ಬಗೆಹರಿಸುತ್ತಾರೋ ಇಲ್ಲವೊ ಎಂದು ಕಾದುನೋಡಬೇಕಾಗಿದೆ

WhatsApp
Facebook
Telegram
error: Content is protected !!
Scroll to Top