ಭಟ್ಕಳ ತಾಲೂಕ ಮೀನುಗಾರಿಕೆ ಇಲಾಖೆಯಲ್ಲಿ ಭ್ರಷ್ಟಾಚಾರದ ವಾಸನೆ

ಹರಿಜನ ಗಿರಿಜನ ಯೋಜನೆಯ ದೋಣಿ ಹಂಚಿಕೆಯಲ್ಲಿ ಅವ್ಯವಹಾರದ ಆರೋಪ

ಐದು ಲಕ್ಷ ಬೆಲೆಬಾಳುವ ದೋಣಿ ಹಂಚಿಕೆ : ಪಲಾನುಭವಿಗಳಿಗೆ ತಲುಪಿಲ್ಲವೆ ದೋಣಿ?

ಭಟ್ಕಳ: ತಾಲೂಕಿನ ಮೀನುಗಾರಿಕೆ ಇಲಾಖೆಯಲ್ಲಿ ಹರಿಜನ ಗಿರಿಜನ ಯೋಜನೆಯಡಿ 14 ಮಶಿನ್‌ ದೋಣಿ ಮಂಜುರಾಗಿದ್ದು ದೋಣಿಗಳು ಫಲಾನುಭವಿಗಳಿಗೆ ತಲುಪದೆ ದೋಣಿ ಎಜೆಂಟ್ಗಳ ಪಾಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದು ಈ ಬಗ್ಗೆ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಜಿಲ್ಲಾ ಅಧ್ಯಕ್ಷ ರಾಜು ನಾಯ್ಕ ಮುಂಡಳ್ಳಿಯವರ ದೂರಿನ ಮೇಲೆ ಮೀನುಗಾರಿಕ ಇಲಾಖೆಯ ಜಂಟಿನಿರ್ದೇಶಕರು ಸ್ಥಳಕ್ಕಾಗಮಿಸಿ ಪರಿಶಿಲಿಸಿ ದೋಣಿ ಹಂಚಿಕೆಯಲ್ಲಿ ಕೆಲವು ಲೋಪದೋಶಗಳು ಕಂಡುಬಂದಿರುವುದು ತಿಳಿದುಬಂದಿದೆ

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಯೋಜನೆಯಡಿ ಮೇಶಿನ್‌ ದೋಣಿ 14 ಪಲಾನುಭವಿಗಳಿ ಮಂಜುರಾಗಿದ್ದು ತಲಾ ದೋಣಿಯ ಮೌಲ್ಯ 5 ಲಕ್ಷದಾಗಿದ್ದು ಒಟ್ಟು 700000 ಮೌಲ್ಯ ದೋಣಿ ಪಲಾನುಭವಿಗಳಿಗೆ ಮಂಜುರಾಗಿರುತ್ತದೆ ಮಂಜುರಾದ ಕೆಲವು ದೋಣಿ ಫಲಾನುಭವಿಗಳಿಗೆ ದೋರೆತಿರುವುದಿಲ್ಲಾ ಹಾಗು ದೋಣಿ ಮಂಜುರಾಗಿ ಒಂದುವರೆ ವರ್ಷಕಳೆಯುತ್ತಿದ್ದರು ಈವರೆಗೂ ಕೆಲವು ದೋಣಿಗಳ ನೊಂದಾವಣೆಯಾಗಿರುವುದಿಲ್ಲಾ ಅಲ್ಲದೆ ಈ ದೋಣಿ ಹಂಚಿಕೆಯಲ್ಲಿ ಏಜೆಂಟರ ಹಾವಳಿಯಿಂದ ಅವ್ಯವಹಾರ ನಡೆದಿದೆ ಫಲನುಭವಿಗೆ ದೋರೆಯ ಬೇಕಿದ್ದ ಕೇಲವೊಂದು ದೋಣಿಗಳನ್ನು ಒಬ್ಬನೆ ವ್ಯಕ್ತಿಯೋವ ಪಡೆದುಕೊಂಡಿದ್ದಾನೆ ಅಲ್ಲದೆ ಕೆಲವು ಕಟ್ಟಡ ಕಾರ್ಮಿಕರು ಈ ದೋಣಿಯ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ ಎಂಬ ಆರೋಪವನ್ನು ಮುಂದಿಟ್ಟುಕೊಂಡು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಜಿಲ್ಲಾ ಅಧ್ಯಕ್ಷ ರಾಜು ನಾಯ್ಕ ಮುಂಡಳ್ಳಿ ಇವರು ಮಿನುಗಾರಿಕ ಇಲಾಖೆಗೆ ದೂರನ್ನು ಸಲ್ಲಿಸಿದ್ದರು

ಈ ಹಿನ್ನೆಲೆಯಲ್ಲಿ ಮಂಗಳವಾರ ಕಾರವಾರದ ಮಿನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು ತನಿಖೆಗಾಗಿ ಸ್ಥಳಕ್ಕೆ ಆಗಮಿಸಿದ್ದರು ಈ ಸಂದರ್ಬದಲ್ಲಿ ಕೆಲವು ದೋಣಿಗಳು ಪಲಾನುಭವಿಗಳಿಗೆ ತಲುಪದೆ ಇರುವುದು ಮೆಲ್ನೋಟಕ್ಕೆ ಕಂಡು ಬಂದಿರುತ್ತದೆ ಅಲ್ಲದೆ ದಾಖಲೆಗಳಲ್ಲಿ ಏರಡೆರಡು ಸಹಿಗಳು ತಾಲೂಕ ಮಿನುಗಾರಿಕಾ ಇಲಾಖೆ ಪಲಾನುಭವಿಗಳಿಗೆ ಕೊಟ್ಟ ನಕಲಿ ದ್ರಡಿಕರಣ ಪತ್ರ ಒಂದೆ ಕುಟುಂಬದ ತಾಯಿ ಮಗ ತಂದೆ ಮಗೆ ದೋಣಿಯನ್ನು ಪಡೆದುಕೊಂಡಿರುವುದು ಕಂಡು ಬಂದಿದೆ ಅಲ್ಲದೆ ಹಾಗು ದಾಖಲೆಯಲ್ಲಿ ೮೦ ವರ್ಷದ ವೃದ್ದನೊರ್ವನನ್ನು ೩೮ ವರ್ಷದ ಯುವಕನೆಂದು ಬಿಂಬಿಸಿ ದಾಖಲೆ ಸ್ರಷ್ಟಿ ಮಾಡಿರುವುದು ಕಂಡು ಬಂದಿದೆ ಪರಿಶಿಲನೆಯ ಸಂದರ್ಬದಲ್ಲಿ ವಿನೋದ ಕ್ರಷ್ಣ ಮೋಗೇರ್‌ ಎಂಬ ವ್ಯಕ್ತಿಯೋರ್ವ ಮಾಹಿತಿ ಹಕ್ಕು ಕಾರ್ಯಕರ್ತರ ಮೇಲೆ ಗುಂಡಾ ವರ್ತನೆ ತೋರಿಸಿದ್ದಾನೆ ಅಲ್ಲದೆ ಪಲಾನುಭವಿಗಳ ನಕಲಿ ದಾಖಲೆಗಳನ್ನು ಸ್ರಷ್ಟಿಮಾಡಲು ಇದೆ ವ್ಯಕ್ತಿ ಸಾಕ್ಷಿ ಸಹಿಗಳನ್ನು ಹಾಕಿರುವುದು ಗಮನಾರ್ಹ ಸಂಗತಿಯಾಗಿದೆ

ಇನ್ನು ಮುಖ್ಯವಾಗಿ ಈ ದೋಣಿ ಮಂಜುರಾಗಿ ಒಂದುವರೆ ವರ್ಷಗಳೆ ಕಳೆದು ಹೋಗಿದೆ ಆದರೆ ಈವರೆಗೂ ಕೆಲವು ದೋಣಿಗಳಿಗೆ ನೊಂದಣಿಯನ್ನೆ ಮಾಡಿರುವುದಿಲ್ಲಾ ಈ ಬಗ್ಗೆ ತಾಲೂಕ ಮೀನುಗಾರಿಕಾ ಇಲಾಖೆಯನ್ನು ಪ್ರಶ್ನಿಸಿದರೆ ನಾವೇನು ಮಾಡಲಾಗುತ್ತದೆ ಅವರು ನೋಂದಣಿಯನ್ನು ಮಾಡಿಕೊಳ್ಳದಿದ್ದರೆ ಎಂಬ ಬೆಜವಬ್ದಾರಿತನದ ಮಾತನ್ನು ತಾಲೂಕ ಮಿನುಗಾರಿಕಾ ಇಲಾಖಾ ನಿರ್ಶಕನೆಂದು ಅನ್ನಿಸಿಕೊಂಡಿರುವ ವ್ಯಕ್ತಿ ಹೇಳುತ್ತಾನೆ ಇದೆಂತಾ ಇಲಾಖೆ ಸ್ವಾಮಿ ಇಂತವರನ್ನು ಯಾಕಾದರೂ ಮಿನುಗಾರಿಕ ನಿರ್ದೇಶಕರ ಕುರ್ಚಿಯಲ್ಲಿ ಕುಳ್ಳಿಸುತ್ತಾರೆ ಒಂದು ವೇಳೆ ಮಿನುಗಾರಿಕೆಗೆ ಇದೆ ನೊಂದಾವಣಿಯಾಗದ ದೋಣಿ ತೇರಳಿದ ಸಂದರ್ಬದಲ್ಲಿ ಅವಘಡಗಳು ಸಂಬವಿಸಿ ಸಾವು ನೋವುಗಳು ಸಂಬವಿಸಿದರೆ ಆ ಮೀನುಗಾರರರ ಕುಟುಂಬಕ್ಕೆ ದಿಕ್ಯಾರು ಒಂದು ವೇಳೆ ಇಂಥಹ ನೊಂದಣಿಯಾಗದ ದೋಣಿಗಳ ಮೂಲಕ ಕಾನೂನು ಭಾಹಿರ ಚಟುವಟಿಕೆ ನಡೆದರೆ ಇದಕ್ಕೆ ಹೋಣೆಯಾರು ಇದರ ಹೋಣೆಯನ್ನು ಭಟ್ಕಳ ಮೀನುಗಾರಿಕ ಇಲಾಖೆಯ ನಿರ್ದೇಶಕರು ಹೊತ್ತುಕೊಳ್ಳುತ್ತಾರಾ ಎನ್ನುವುದು ರಾಜ್ಯ ಮಾಹಿತಿ ಹಕ್ಕು ಸಂಘಟನೆಯ ಪ್ರಶ್ನೇಯಾಗಿದೆ

ಯಾಕೆ ಸ್ವಾಮಿ ನೀವು ನಿಮ್ಮ ಮನಸ್ಸಿಗೆ ಬಂದಂತೆ ಯಾರಿಗೆ ಬೇಕಾದರು ದೋಣಿಯನ್ನು ಕೊಡಬಹುದಾ ಸರಕಾರ ಬಡ ಪರಿಶಿಷ್ಟರನ್ನು ಗಮನದಲ್ಲಿ ಇಟ್ಟುಕೊಂಡು ಮೀನುಗಾರಿಕಾ ಉದ್ಯಮವನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಅನುಧಾನಗಳನ್ನು ಬಿಡುಗಡೆ ಮಾಡಿದರೆ ನೀವುಗಳು ಮಾಡುತ್ತಿರುವುದಾದರು ಏನು ಹಣಕ್ಕಾಗಿ ಸರಕಾರದ ಯೋಜನೆಯನ್ನೆ ಮಾರಿಕೊಂಡು ತಿನ್ನುತಿದ್ದಿರಾ ಎಂದು ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ

ತಾಲೂಕಿನ ಮೀನುಗಾರಿಕಾ ಇಲಾಖೆ ಲಕ್ಷಾಂತರ ಮೌಲ್ಯದ ಅನುಧಾನದಲ್ಲಿ ಗೋಲ್‌ ಮಾಲ್‌ ಮಾಡಿದ್ದು ತಿಳಿದುಬಂದಿದೆ ತನಿಖಾಧಿಕಾರಿಗಳು ತನಿಖೆಗೆ ಆಗಮಿಸಿ ತನಿಖೆಯನ್ನು ನಡೆಸಿದ್ದಾರೆ ಈ ಬಗ್ಗೆ ಅವರು ಪ್ರಾಮಾಣಿಕತೆಯಿಂದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ನಮ್ಮ ಸಂಘನೆ ಈ ಹೋರಾಟವನ್ನು ರಾಜ್ಯಮಟ್ಟದಲ್ಲಿ ನಡೆಸಲಿದೆ ಎಂಬ ಎಚ್ಚರಿಕೆಯನ್ನು ಜಿಲ್ಲಾಧ್ಯಕ್ಷ ರಾಜು ನಾಯ್ಕ ಮುಂಡಳ್ಳಿ ತಿಳಿಸಿದ್ದಾರೆ

ಒಟ್ಟಾರೆ ಈ ಪ್ರಕರಣ ಮುಂದೆ ಯಾವ ಮಟ್ಟದಲ್ಲಿ ನಡೆಯಲಿದೆ ತಪ್ಪಿತಸ್ಥರಿಗೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆಯೋ ಅಥವಾ ಇಡಿ ಪ್ರಕರಣವನ್ನು ಅಧಿಕಾರಿಗಳೆ ಮುಚ್ಚಿಹಾಕುತ್ತಾರೋ ಎಂದು ಕಾದುನೋಡಬೇಕಾಗಿದೆ

WhatsApp
Facebook
Telegram
error: Content is protected !!
Scroll to Top