ಹೆಬಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸಮಸ್ಯೆ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಮುಂದಾದ ಭಟ್ಕಳ ವೆಲ್ಪೇರ್‌ ಪಾರ್ಟ ಆಪ್‌ ಇಂಡಿಯಾ

ತಾಲೂಕ ತಹಶಿಲ್ದಾರ್‌ ಹಾಗು ಪೋಲಿಸ್‌ ಇಲಾಖೆಯ ಮನವಿಯ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈ ಬಿಟ್ಟ ವೆಲ್ಪೇರ್

ಭಟ್ಕಳ: ತಾಲೂಕ ಹೆಬ್ಳೇ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಸಮರ್ಪಕ ಕಸವಿಲೇವಾರಿಯಾಗದ ಕಾರಣ ಭಟ್ಕಳ ತಾಲೂಕ ವೆಲ್ಪೇರ್‌ ಪಾರ್ಟಿಯು ಪ್ರತಿಭಟನೆಗೆ ಮುಂದಾಗಿದ್ದು ತಾಲೂಕ ತಹಶಿಲ್ದಾರರು ಮತ್ತು ಪೋಲಿಸ ಇಲಾಖೆ ಮಧ್ಯ ಪ್ರವೇಶಿಸಿ ೧೦ ದಿನಗಳ ಒಳಗೆ ಕಸದ ಸಮಸ್ಯೆ ಬಗೆ ಹರಿಸುವ ಬರವಸೆಯನ್ನು ನೀಡಿದ ಹಿನ್ನೆಲೆಯಲ್ಲಿ ವೇಲ್ಪೇರ್‌ ಪಾರ್ಟಿ ಪ್ರತಿಭಟನೆ ಕೈ ಬಿಟ್ಟ ಪ್ರಸಂಗ ನಡೆದಿದೆ .

ಭಟ್ಕಳದ ಹೆಬಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸಮಸ್ಯೆ ಕಳದೆ ಹಲವಾರು ವರ್ಷಗಳಿಂದ ಇದರ ಈ ಸಮಸ್ಯ ಬಗ್ಗೆ ಕಳೆದ 6 ತಿಂಗಳ ಹಿಂದೆ ಇಂದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಭಟ್ಕಳ ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿದೆ, ತಾತ್ಕಾಲಿಕವಾಗಿ ಕಸ ತೆಗೆಯಲಾಗುತಿತ್ತು ಆದರೆ ಸಮಸ್ಯಯ ಶಾಶ್ವತ ಪರಿಹಾರ ಇನ್ನು ತನಕ ಸ್ಥಳೀಯ ಆಡಳಿತ ಮಾಡಿಲ್ಲ, ಹಾಗಾಗಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಭಟ್ಕಳ ಸದಸ್ಯರು ಸ್ಥಾನಿಯ ನಾಗರಿಕರ ಜೋತೆ ಸೇರಿ ರಸ್ತೆ ತಡೆಗೆ ಮುಂದಾಗಿದ್ದರು, ಈ ವಿಷಯವನ್ನು ತಿಳಿದ ಕೂಡಲೇ  ತಹಸೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಇತರೆ ಸಿಬಂಧಿಗಳು ಸ್ಥಳಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು ಮತ್ತು 10ದಿನದ ಒಳಗೆ ಸಮಸ್ಯೆ ಬಗೆ ಹರಿಸುವ ಆಶ್ವಾಸನೆ ನೀಡಿದ್ದು, ಪ್ರತಿಭಟನಾಕಾರ ಮನವೊಲಿಸಿ ರಸ್ತೆ ತಡೆ ಮಾಡದಂತೆ ಮನವರಿಕೆ ಮಾಡಿದರು.


ಈ ಸಂದರ್ಭದಲ್ಲಿ:ವೆಲ್ಫೇರ್ ಪಾರ್ಟಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಆಸಿಫ್ ಶೇಕ್ ಜಂಟಿ ಕಾರ್ಯದರ್ಶಿಯಾದ ಅಸ್ಲಾಂ ಶೇಕ್ ಮುಖಂಡರಾದ ಜಬ್ಬಾರ್ ಅಸದಿ ಹಾಗೂ ನಾಗರಿಕರು ಇದ್ದರು

WhatsApp
Facebook
Telegram
error: Content is protected !!
Scroll to Top