ಭಟ್ಕಳ ಪುರಸಭೆಯ ಉರ್ದು ಬೋರ್ಡ ತೆರವು ಗೊಳಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷ ಪರ್ವೇಜ್‌ ಕಾಶಿಂ ನೆತ್ರತ್ವದಲ್ಲಿ ಸಭೇ

ಜಿಲ್ಲಾಧಿಕಾರಿಗಳ ಉರ್ದು ಬೋರ್ಡ ತೆರವು ಆದೇಶವನ್ನು ನಾವು ಖಂಡಿಸುತ್ತೆವೆ : ಅಧ್ಯಕ್ಷ ಪರ್ವೇಜ್‌ ಖಾಶೀಂ ಹೇಳಿಕೆ

ಪುರಸಭೆ ನಾಮ ನಿರ್ದೇಶಿತ ಚುನಾಯಿತ ಅಭ್ಯರ್ಥಿಗಳನ್ನೊಳಗೊಂಡಂತೆ ೮ ಸದಸ್ಯರಿಂದ ಜಿಲ್ಲಾಧಿಕಾರಿಗಳ ಆದೇಶ ಸ್ವಾಗತ

ಭಟ್ಕಳ ತಾಲೂಕ ಪುರಸಭೆಗೆ ಅಳವಡಿಸಿದ್ದ ಉರ್ದು ಬೋರ್ಡ ತೇರವುಗೋಳಿಸು ಆದೇಶ ನೀಡಿದ ಹಿನ್ನೆಲೆಯಲ್ಲಿ ಭಟ್ಕಳ ಪುರಸಭೆಯ ಅಧ್ಯಕ್ಷ ಸದಸ್ಯರನ್ನೋಳಗೊಂಡಂತೆ ತುರ್ತು ಸಭೆಯನ್ನು ಕರೆಯಲಾಯಿತು ಈ ಸಂದರ್ಬದಲ್ಲಿ ಪುರಸಭಾ ಅಧ್ಯಕ್ಷ ಪರ್ವೇಜ್‌ ಖಾಶಿಮ್‌ ಸೇರಿದಂತೆ ಹೆಚ್ಚಿನ ಸಂಖ್ಯೆಯ ಸದಸ್ಯರು ಜಿಲ್ಲಾಧಿಕಾರಿಗಳ ಆದೇಶವನ್ನು ಖಂಡಿಸುವುದಾಗಿ ಹೇಳಿ ಕಾನೂನು ಸಮರವನ್ನು ಕೈಗೊಳ್ಳುವುದಾಗಿ ಹೆಳಿದ್ದಾರೆ . ಇದೆ ಸಂದರ್ಬದಲ್ಲಿ ನಾಮ ನಿರ್ದೇಶಿತ ಹಾಗು ಕೆಲವು ಚುನಾಯಿತ ಸದಸ್ಯರನ್ನು ಸೇರಿದಂತೆ 8 ಸದಸ್ಯರು ಜಿಲ್ಲಾಧಿಕಾರಿಗಳ ಆದೇಶವನ್ನು ಸ್ವಾಗತಿಸಿದ ಪ್ರಸಂಗ ಎದುರಾಗಿದೆ .

ತಾಲೂಕಿನ ಪುರಸಭಾ ಉರ್ದು ಬೋರ್ಡ ಅಳವಡಿಕೆಯ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು ಕನ್ನಡಪರ ಸಂಘಟನೆ ಹಿಂದೂ ಪರ ಸಂಘಟನೆಗಳು ಹೊರಾಟದ ಹಾದಿಯನ್ನೆ ಹಿಡಿದಿತ್ತು ತಾಲೂಕಿನಲ್ಲಿ ಬೀಗುವಿನ ವಾತಾವರಣ ನಿರ್ಮಾಣವಾಗಿ ಪುರಸಭೆಗೆ ಪೋಲಿಸ್‌ ಬಂದೋ ಬಸ್ತ ಹಾಕಲಾಗಿತ್ತು ಪರಿಸ್ಥಿತಿಯ ಗಂಬಿರತೆಯನ್ನು ಅರಿತ ಜಿಲ್ಲಾಧಿಕಾರಿ ಪ್ರಕರಣವನ್ನು ಪರಿಶಿಲಿಸಿ ಪುರಸಭೆಗೆ ಅಳವಡಿಸಿರುವ ಉರ್ದು ಬೋರ್ಡನ್ನು ತೆರವುಗೋಳಿಸಲು ಆದೇಶವನ್ನು ಹೊರಡಿಸಿದ್ದರು ಈ ಹಿನ್ನೆಲೆಯಲ್ಲಿ ತಾಲೂಕ ಪುರಸಭೆಯ ಅಧ್ಯಕ್ಷರು ತುರ್ತು ಸಭೇಯನ್ನು ಕರೆದು ಜಿಲ್ಲಾಧಿಕಾರಿಗಳ ಉರ್ದು ಬೋರ್ಡ ತೆರವಿನ ಆದೇಶವನ್ನು ಖಂಡಿಸುತ್ತೆವೆ ಈ ಬಗ್ಗೆ ನಾವು ಮುಂದಿನ ದಿನಗಳಲ್ಲಿ ಕಾನೂನಿನ ಮೊರೆಹೋಗುತ್ತೆವೆ ಎಂಬ ಮಾತನ್ನು ಹೇಳಿರುತ್ತಾರೆ ಈ ಸಂದರ್ಬದಲ್ಲಿ ಪುರಸಭಾ ಹೆಚ್ಚಿನ ಸದಸ್ಯರು ಇವರ ಮಾತಿಗೆ ದನಿ ಗೂಡಿಸಿದ್ದಾರೆ

ಈ ತುರ್ತು ಸಭೆಯಲ್ಲಿ ನಾಮ ನಿರ್ದೇಶಿತ ಮತ್ತು ಕೆಲವು ಚುನಾಯಿತ ಸದಸ್ಯರು ಜಿಲ್ಲಾಧಿಕಾರಿಗಳ ಆದೇಶವನ್ನು ಸ್ವಾಗತಿಸಿದ್ದಾರೆ

ಪುರಸಭಾ ಉರ್ದು ಬೋರ್ಡ ತೆರವುಗೊಂಡ ಮೇಲು ಕೂಡ ಭಟ್ಕಳ ಮೆಲ್ನೋಟಕ್ಕೆ ಶಾಂತವಾಗಿ ಕಂಡರು ಭಟ್ಕಳ ಬುಡಿ ಮುಚ್ಚಿದ ಕೆಂಡದಂತಿದೆ ಎಂದರೆ ತಪ್ಪಾಗಲಿಕ್ಕಿಲ್ಲಾ ಕೆಲವು ಪಟ್ಟ ಬದ್ರ ಹಿತಾಸಕ್ತಿಗಳಿಗೆ ಭಟ್ಕಳ ಶಾಂತವಾಗಿರುವುದು ಬೇಕಿಲ್ಲವಾಗಿದೆ ಯಾವುದಾದದರು ವಿವಾದಗಳನ್ನು ತಾವೇ ಸ್ರಷ್ಟಿ ಮಾಡಿ ಅದಕ್ಕೆ ತುಪ್ಪವನ್ನು ಸುರಿದು ಅದರ ಲಾಭವನ್ನು ಪಡೆದುಕೊಳ್ಳುವ ಯೋಜನೆಗಳು ಭಟ್ಕಳದಲ್ಲಿ ಈಗಲೂ ನಡೆಯುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲಾ ಒಟ್ಠಾರೆ ಭಟ್ಕಳದ ಮಧ್ಯಮ ವರ್ಗದ ದಿನ ಬೇಳಗಾದರೆ ದುಡಿಮೆಯನ್ನೆ ನಂಬಿಕೊಂಡು ಬದುಕುತ್ತಿರುವ ಬಡ ವರ್ಗದವರಿಗೆ ಭಟ್ಕಳ ನುಂಗಲು ಆಗದ ಉಗಿಯಲು ಆಗದ ಬಿಸಿ ತುಪ್ಪದಂತೆ ಪರಿವರ್ತನೆಯಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲಾ

WhatsApp
Facebook
Telegram
error: Content is protected !!
Scroll to Top