ಭಟ್ಕಳ ಪುರಸಭಾ ಉರ್ದು ಬೊರ್ಡ ಅಳವಡಿಕೆ ಸಂಬಂದ ಜಿಲ್ಲಾಧಿಕಾರಿಗಳ ಸಭೆ

ಕನ್ನಡ ಮತ್ತು ಇಂಗ್ಲೀಷ ಬೊರ್ಡ ಹೊರತು ಪಡಿಸಿ ಪುರಸಭೆಗೆ ಬೇರೆ ಭಾಷೆಗಳ ಬೊರ್ಡ ಅಳವಡಿಸುವಂತಿಲ್ಲಾ : ಜಿಲ್ಲಾಧಿಕಾರಿ ಮುಲೈ ಮುಗಿಲನ್.

ಪುರಸಭೆಗೆ ಅಳವಡಿಸಿದ್ದ ಉರ್ದು ಬೋರ್ಡ ತೇರವುಗೋಳಿಸಲು ಆದೇಶಿಸಿದ ಜಿಲ್ಲಾಧಿಕಾರಿ

ಕಾನೂನಿನ ಅರಿವಿಲ್ಲದೆ ಅಧ್ಯಕ್ಷ ಪರ್ವೇಜ್ ಕಾಶಿಮ್ ಪುರಸಭೆಗೆ ಉರ್ದು ಬೋರ್ಡ ಅಳವಡಿಸಿದರೆ? ಅಧ್ಯಕ್ಷ ಪರ್ವೇಜ್‌ ಕಾಶಿಮ್ಗೆ ಮುಖ ಭಂಗ

ಭಟ್ಕಳ : ತಾಲೂಕಿನ ಪುರಸಭೆಗೆ ಉರ್ದು ಬೊರ್ಡ ಅಳವಡಿಕೆ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಗೊಂದಲಗಳು ಏರ್ಪಟ್ಟ ಕಾರಣ ತಾಲೂಕಾಡಳಿತ ಸೌದದಲ್ಲಿ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಅವರ ನೆತ್ರತ್ವದಲ್ಲಿ ಸಭೆ ನಡೆಸಿ ಉರ್ದು ಬೊರ್ಡ ತೆರವು ಗೊಳಿಸಬೇಕು ಎನ್ನುವ ತಿರ್ಮಾನವನ್ನು ಕೈಗೊಳ್ಳಲಾಗಿದ್ದು ಅದರಂತೆ ಪುರಸಭಾ ಮುಖ್ಯಾಧಿಕಾರಿ ಉರ್ದು ಬೋರ್ಡ ತೇರವು ಗೋಲೀಸಿದ್ದಾರೆ

ಭಟ್ಕಳ ಪುರಸಭೆಗೆ ಅಧ್ಯಕ್ಷ ಪರ್ವೇಜ್ ಕಾಶಿಮ್ ಉರ್ದು ಬೊರ್ಡ ಅಳವಡಿಸಿರುವ ಕಾರಣ ತಾಲೂಕಿನಲ್ಲಿ ಗೊಂದಲಗಳು ಎರ್ಪಟ್ಟು ಎರಡು ಕೋಮುಗಳ ಮದ್ಯ ಸಂಘರ್ಷ ಏರ್ಪಡುವ ಎಲ್ಲಾ ಲಕ್ಷಣಗಳು ಕಂಡು ಬಂದಿತ್ತು ಇದರಿಂದ ಎಚ್ಚೆತ್ತ ಜಿಲ್ಲಾಡಳಿತ ಮದ್ಯ ಪ್ರವೇಸಿ ಗುರುವಾರ ಜಿಲ್ಲಾಧಿಕಾರಿಗಳ ನೇತ್ರತ್ವದಲ್ಲಿ ಪುರಸಭಾ ಅಧ್ಯಕ್ಷರು ಮತ್ರು ಸದಸ್ಯರನ್ನೊಳಗೊಂಡಂತೆ ಸಭೆಯನ್ನು ಕರೆಯಲಾಯಿತು. ಸಭೆಯಲ್ಲಿ ಸರಕಾರಿ ಕಛೇರಿಗಳಿಗೆ ಕನ್ನಡ ಮತ್ತು ಇಂಗ್ಲೀಷ ಬೊರ್ಡ ಹೊರತು ಪಡಿಸಿ ಉಳಿದ ಬಾಷೇಯ ಬೊರ್ಡಗಳನ್ನು ಅಳವಡಿಸುವಂತಿಲ್ಲಾ ಆದ್ದರಿಂದ ಭಟ್ಕಳ ತಾಲೂಕ ಪುರಸಭೆಗೆ ಅಳವಡಿಸಿರುವ ಉರ್ದು ಬೊರ್ಡನ್ನು ತೇರವುಗೊಳಿಸ ಬೇಕು ಎಂಬ ಆದೇಶವನ್ನು ಜಿಲ್ಲಾಧಿಕಾರಿಗಳು ಮಾಡಿದ್ದಾರೆ.

ವೀಕ್ಷಕರೆ ಇಲ್ಲಿ ಮುಖ್ಯವಾಗಿ ಗಮನಿಸ ಬೇಕಾದ ಅಂಶ ಎನೆಂದರೆ ಪುರಸಭೇಗೆ ಉರ್ದು ಬೋರ್ಡ ಅಳವಡಿಸಲು ಪುರಸಭೆ ಹೊರಗಿಂದ ಯಾರು ಬರಲು ಸಾಧ್ಯವಿಲ್ಲಾ ಪುರಸಭೇ ವತಿಯಿಂದ ಪುರಸಭಾ ಅಧ್ಯಕ್ಷ ಅಥವಾ ಪುರಸಭಾ ಮುಖ್ಯಾಧಿಕಾರಿಗಳ ಒಪ್ಪಿಗೆಯ ಮೇರೆಗೆ ಉರ್ದು ಬೋರ್ಡ ಅಳವಡಿಸಿರುತ್ತಾರೆ ಈ ಅಧಿಕಾರಿಗಳಿಗೆ ಉರ್ದು ಬೋರ್ಡ ಅಳವಡಿಸುವ ಮೊದಲು ಕಾನೂನಿನ ಅರಿವಿರಲಿಲ್ಲವೆ ಉರ್ದು ಬೊರ್ಡ ಅಳವಡಿಸಿ ತಾಲೂಕಿನಲ್ಲಿ ಗೊಂದಲದ ವಾತಾವರಣ ಎರ್ಪಟ್ಟು ತಾಲೂಕಿನಲ್ಲಿ ಕೋಮು ಗಲಭೆಗೆ ಆಸ್ಪದವಾಗಿತ್ತು ಭಟ್ಕಳ ಉದ್ವಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು ಒಂದು ವೇಳೆ ಈ ಸಮಯದಲ್ಲಿ ಅವಗಡಗಳು ಸಂಬವಿಸಿದ್ದರೆ ಯಾರು ಜವಾಬ್ದಾರರಾಗುತ್ತಿದ್ದರು ಪುರಸಭಾ ಅಧ್ಯಕ್ಷರೆ ಪುರಸಭಾ ಮುಖ್ಯಾಧಿಕಾರಿಗಳೆ ಈಗ ಪುರಸಭಾ ಉರ್ದು ಬೋರ್ಡ ತೇರವು ಗೋಳಿಸಲಾಗಿದೆ ಆದರೂ ಭಟ್ಕಳದಲ್ಲಿ ಗೊಂದಲದ ವಾತಾವರಣ ಎರ್ಪಟ್ಟಿದ್ದು ಭಟ್ಕಳ ಬುದಿ ಮುಚ್ಚಿದ ಕೆಂಡದಂತಿದೆ ಇದಕ್ಕೆ ಹೋಣೆ ಯಾರು ಪುರಸಭೆ ನಮ್ಮದು ನಾನು ಪುರಸಭಾ ಅಧ್ಯಕ್ಷ ಎಂದು ಹಿಟ್ಲರ್‌ ನಂತೆ ವರ್ತಿಸುತ್ತಿದ್ದ ಪುರಸಭಾ ಅಧ್ಯಕ್ಷ ಪರ್ವೇಜ್‌ ಕಾಶಿಮ್‌ ಇದರ ಹೋಣೆಯನ್ನು ಹೋರುತ್ತಾರೋ ಸಾರ್ವಜನಿಕರು ಅರಿತೋ ಅರಿಯದೆಯೋ ಶಾಂತಿ ಭಂಗ ಮಾಡಿದರೆ ಅವರ ಮೇಲೆ ಶಾಂತಿ ಭಂಗ ಮಾಡಿದ್ದಾರೆ ಎಂದು ಸೆಕ್ಷನ್‌ಗಳನ್ನು ಹಾಕಿ ಕೇಸ್ಗಳನ್ನು ಹಾಕಲಾಗುತ್ತದೆ ಈಗ ಪುರಸಭಾ ಅಧ್ಯಕ್ಷರ ಕಾರಣ ಭಟ್ಕಳದಲ್ಲಿ ಶಾಂತಿ ಭಂಗವಾಗಿದೆ ಈ ಅಧ್ಯಕ್ಷ ಪರ್ವೇಜ್‌ ಕಾಶಿಮ್‌ ಅವರ ಮೇಲೆ ಯಾರು ಕ್ರಮ ಕೈಗೊಳ್ಳುತ್ತಾರೆ ಎನ್ನುವುದು ಅಧಿಕಾರಿಗಳೆ ಹೇಳಬೇಕಾಗಿದೆ

WhatsApp
Facebook
Telegram
error: Content is protected !!
Scroll to Top