ರೋಹಿತ್  ಚಕ್ರತೀರ್ಥ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮನವಿ

ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ವಿಸರ್ಜಿಸುವಂತೆ ಮನವಿ

ಮನವಿಯಲ್ಲಿ ರಾಷ್ಟ್ರಕವಿ ಕುವೆಂಪು ರಚನೆಯ ನಾಡಗೀತೆ ಇತರ ಕವನಗಳಂತೆ ಒಂದು ಪದ್ಯವಲ್ಲ. ಅದು ಈ ರಾಜ್ಯದ ಅಧಿಕೃತ ನಾಡಗೀತೆ ಎನ್ನುವುದನ್ನು ತಿಳಿಯದೇ ವಿಕೃತ ಮತ್ತು ಅವಹೇಳನಕಾರಿ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವ ಆಪಾದನೆಗೆ ಒಳಗಾಗುವಂತಹ ವ್ಯಕ್ತಿಗೆ ಪಠ್ಯಪುಸ್ತಕ ಪರಿಷ್ಕರಣೆ ಜವಾಬ್ದಾರಿ ನೀಡಿರುವುದು ತಪ್ಪು.

ಚಕ್ರತೀರ್ಥ ಅವರ ನಾಡದ್ರೋಹ ಕೆಲಸಕ್ಕೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌, ಸಂಸದ ಪ್ರತಾಪ ಸಿಂಹ ಸಮರ್ಥನೆ ನೀಡಿ ತಪ್ಪು ಮಾಡಿದ್ದಾರೆ. ಕಣ್ಣಿಗೆ ಕಾಣುವ ಮತ್ತು ಕಾಣದ ಮತೀಯಪರ ಶಕ್ತಿಗಳು ಹಾಗೂ ಸಂವಿಧಾನ ವಿರೋಧಿಗಳು ಮಕ್ಕಳ ಮನಸು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ಶಾಲಾ ಮಕ್ಕಳಿಗೆ ಬೋಧಿಸಲಾಗುವ ಪಠ್ಯ ಧರ್ಮ, ಜಾತಿ ಅಸಮಾನತೆಗಳನ್ನು ಮೀರಿದ ಸನ್ಮಾರ್ಗ ತೋರುವ ದಿಕ್ಸೂಚಿಯಾಗಬೇಕು.

ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯ ಹಾಲಿ ಪಠ್ಯ ಮರುಪರಿಷ್ಕರಣೆಯ ಸಮಿತಿಯನ್ನು ವಿಸರ್ಜಿಸಿ ಅರ್ಹ ಮತ್ತು ಜವಾಬ್ದಾರಿಯುತ ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಬೇಕು. ಅಲ್ಲಿಯವರೆಗೂ ಮಕ್ಕಳ ದೈನಿಕ ಬೋಧನೆಗೆ ತೊಂದರೆಯಾಗದಂತೆ ಈಗಿರುವ ಪಠ್ಯ ವಿಷಯವನ್ನೇ ಮುಂದುವರಿಸಬೇಕು ಎಂದು ವಿನಂತಿಸುತ್ತೇವೆ.

‘ರಾಷ್ಟ್ರಕವಿ ಕುವೆಂಪು ಅವರಿಗೆ ಮತ್ತು ಇಡೀ ರಾಜ್ಯದ ಜನರಿಗೆ ಅವಮಾನವಾಗುವಂತೆ ನಡೆದುಕೊಂಡಿರುವ ರೋಹಿತ್‌ ಚಕ್ರತೀರ್ಥ ಅವರ ಮೇಲೆ ಸರ್ಕಾರವೇ ಮುಂದಾಗಿ ಕಾನೂನು ಕ್ರಮಕ್ಕಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಬೇಕು. ಈ ಪಠ್ಯ ಪುಸ್ತಕ ರಚನೆ ಮತ್ತು ಮುದ್ರಣಕ್ಕೆ ಆಗಿರಬಹುದಾದ ವೆಚ್ಚವನ್ನು ವಸೂಲಿ ಮಾಡಬೇಕು’ ಎಂದು ಆಗ್ರಹಿಸುತ್ತೇವೆ. ಎಂದು ಮನವಿಯನ್ನು ಸಲ್ಲಿಸಲಾಯಿತು.

ಸಂದರ್ಬದಲ್ಲಿ ಜಿಲ್ಲಾಧ್ಯಕ್ಷರು/ಜಿಲ್ಲಾ ಪ್ರಧಾನ ಕಾರ್ಯದರ್ಶಿ
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಭಟ್ಕಳ, ಜಿಲ್ಲೆ: ಉತ್ತರ ಕನ್ನಡ.

WhatsApp
Facebook
Telegram
error: Content is protected !!
Scroll to Top