ಭಟ್ಕಳ ಕಾಸ್ಮೂಡಿ ಹನುಮಂತ ದೇವರ ಪವಾಡದಿಂದ ತಲೆ ಎತ್ತಿ ನಿಂತಿದೆ ಸ್ವಯಂವರ ಕಲ್ಯಾಣ ಮಂಟಪ.

ಕರಸೇವಾ ಕಾರ್ಯಕರ್ತರ ಶ್ರಮಕ್ಕೆ ಅಸ್ತು ಹೇಳಿದ ಕಾಸ್ಮೂಡಿ ಆಂಜನೇಯ

ಸ್ವಯಂವರ ಕಲ್ಯಾಣ ಮಂಟಪ ಉದ್ಗಾಟನೆಗೆ ಕ್ಷಣಗಣನೆ

ಭಟ್ಕಳ: ತಾಲೂಕ ಪುರಾಣ ಪ್ರಸಿದ್ದ ಪುಣ್ಯ ಸ್ಥಳ ಕಾಸ್ಮೂಡಿ ಹನುಮಂತ ದೇವರ ಪವಾಡದಿಂದ ಕೇವಲ ಐದು ತಿಂಗಳ ಒಳಗಾಗಿ ಸ್ವಯಂವರ ಕಲ್ಯಾಣ ಮಂಟಪ ತಲೆ ಎತ್ತಿ ನಿಂತಿದ್ದು ಕಲ್ಯಾಣ ಮಂಟಪ ಉದ್ಗಾಟನೆಗೆ ಕ್ಷಣಗಣನೆ ನಡೆಯುತ್ತಿದೆ

ಭಗವಂತನ ಕ್ರಪೆ ಇದ್ದರೆ ಎಂತಹ ಅಸಾಧ್ಯವನ್ನು ಸಾದಿಸಬಹುದು ಎಂಬುವುದಕ್ಕೆ ಭಟ್ಕಳ ತಾಲೂಕ ಕಾಸ್ಮೂಡಿ ಹನುಮಂತ ದೇವರ ಕ್ರಪೆಯಿಂದ ಎಂತಹ ಅಸಾಧ್ಯವನ್ನು ಕೂಡ ಸಾಧ್ಯವಾಗಿಸಬಹುದು ಇದಕ್ಕೆ ಉತ್ತಮ‌ ಉದಾಹರಣೆ ದೇವಸ್ಥಾನದ ಪಕ್ಕದಲ್ಲಿ ತಲೆ ಎತ್ತಿ ನಿಂತಿರುವ ಸ್ವಯಂವರ ಕಲ್ಯಾಣ ಮಂಟಪವೇ ಸಾಕ್ಷಿಯಾಗಿರುತ್ತದೆ ಈ ಕಲ್ಯಾಣ ಮಂಟಪ ನಿರ್ಮಾಣ ಮಾಡಬೇಕು ಎಂದು ದೇವಸ್ಥಾನ ಆಡಳಿತ ಕಮಿಟಿಯ ಗೌರವಾಧ್ಯಕ್ಷ ಈರಪ್ಪ ಗರ್ಡಿಕರ್ ದೇವಸ್ಥಾನ ಆಡಳಿತ ಕಮಿಟಿಯ ಅಧ್ಯಕ್ಷ ಅಣ್ಣಪ್ಪ ನಾಯ್ಕ ಅಬ್ಬಿತ್ಲು , ಪ್ರಕಾಶ ನಾಯ್ಕ ಎಂಬ ಮೂವರು ಕಲ್ಯಾಣ ಮಂಟಪ್ಪಕ್ಕಾಗಿ ಸಂಕಲ್ಪವನ್ನು ಈ ಆಂಜನೇಯ ಸ್ವಾಮಿಯಲ್ಲಿ ಮಾಡಿಕೊಳ್ಳುತ್ತಾರೆ ಇವರ ಸಂಕಲ್ಪ ಆ ಭಗವಂತನಿಗೆ ತಲುಪಿ ಇವರು ಸಂಕಲ್ಪ ಮಾಡಿ ಐದು ತಿಂಗಳ ಒಳಗಾಗಿ ಸ್ವಯಂವರ ಕಲ್ಯಾಣ ಮಂಟಪ ತಲೆ ಎತ್ತಿ ನಿಂತಿದೆ ಮುಖ್ಯವಾಗಿ ಈ ಕಲ್ಯಾಣ ಮಂಟಪ ನಿರ್ಮಾಣ ಮಾಡುವ ಸಂದರ್ಬದಲ್ಲಿ ಯಾವುದೆ ಮೂಲ ಬಂಡವಾಳವಿಲ್ಲದೆ ಜಿರೋ ಬ್ಯಾಲೆನ್ಸಿನಲ್ಲಿ ಕಲ್ಯಾಣ ಮಂಟಪವನ್ನು ನಿರ್ಮಾಣ ಮಾಡಲು ಹೊರಟಿದ್ದರು ಈ ಮೂವರು ತ್ರಿಮೂರ್ತಿಗಳು ಆ ಭಗವಂತ ಮನಸ್ಸು ಮಾಡಿದರೆ ಎಂತಹ‌ ಅಸಾಧ್ಯವನ್ನು ಕೂಡ ಸಾಧ್ಯವಾಗಿಸುತ್ತಾನೆ ಎಂಬುವುದು ಇಂದು ತಲೆ ಎತ್ತಿ ನಿಂತಿರುವ ಸ್ವಯಂವರ ಕಲ್ಯಾಣ ಮಂಟಪವೇ ಸಾಕ್ಷಿ ಹೇಳುತ್ತದೆ

ಇನ್ನು ಈ ಕಲ್ಯಾಣ ಮಂಟಪ ನಿರ್ಮಾಣಕ್ಕಾಗಿ ಜಾತಿ ಅಂತಸ್ತು ರಾಜಕಿಯ ಎಂಬ ಯಾವುದೇ ಬೇದಭಾವ ಇಲ್ಲದೆ ಪ್ರತಿಯೊಂದು ಜಾತಿ ಸಮಾಜದವರು ಕರಸೇವಕರಾಗಿ ಇಲ್ಲಿ ನಿಸ್ವಾರ್ಥದಿಂದ ಸೇವೆಯನ್ನು ಸಲ್ಲಿಸಿದ್ದಾರೆ . ಇಂದು ಅಷ್ಟೆತ್ತರಕ್ಕೆ ಕಲ್ಯಾಣ ಮಂಟಪ ನಿರ್ಮಾಣವಾಗಿ ಉದ್ಗಾಟನೆಗೆ ಸಜ್ಜಾಗಿದೆ ಎಂದರೆ ಅದಕ್ಕೆ ಈ ಕರಸೇವಕರ ನಿಸ್ವಾರ್ಥ ಸೇವೆಯೆ ಕಾರಣವಾಗಿದೆ ಈ ಕರಸೇವಕರ ಬಗ್ಗೆ ಎಷ್ಟು ಹೇಳಿದರಿ ಕಡಿಮೆಯೆ ಕಾರಣ ಇವರು ಒಂದು ಪೈಸೆಯ ಪ್ರತಿಪಲಾಪೇಕ್ಷೇಯಿಲ್ಲದೆ ಕಲ್ಯಾಣ ಮಂಟಪದ ಅಡಿಪಾಯದಿಂದ ಹಿಡಿದು ಕಲ್ಯಾಣ ಮಂಟಪದ ಕಾಮಗಾರಿ ಸಂಪೂರ್ಣ ಮುಕ್ತಾಯವಾಗುವವರೆಗೂ ಸೇವಾ ಮನೋಭಾವನೆಯಿಂದ ಹಗಲಿರುಳು ದುಡಿಯುತ್ತಿದ್ದಾರೆ ವಿಕ್ಷಕರೇ ಇಂದು ನಮ್ಮ ಮಾನವ ಸಮಾಜದಲ್ಲಿ ಮಾನವಿಯತೆ ಸೇವಾ ಮನೊಭಾಮನೆ ಇದೆ ಎಂದರೆ ಇಂತಹ ಸೇವಾಮನೋಭಾವದ ಮಾನವಿಯ ಮೌಲ್ಯಗಳನ್ನು ಒಗ್ಗೂಡಿಸಿಕೊಂಡವರಿಂದಲೆ ಎಂದರೆ ತಪ್ಪಾಗಲಿಕ್ಕಿಲ್ಲಾ

ಇನ್ನು ಈ ಕಲ್ಯಾಣ ಮಂಟಪ್ಪದ ನಿರ್ಮಾಣದಲ್ಲಿ ದಾನಿಗಳು ಕೂಡ ಮಹತ್ವವಾದ ಪಾತ್ರವನ್ನು ನಿರ್ವಹಿಸಿದ್ದಾರೆ ಯಾವುದೆ ಮೂಲ ಭಂಡವಾಳವಿಲ್ಲದೆ ಕೇವಲ ಭಗಂತನಲ್ಲಿ ಇಟ್ಟ ಸಂಕಲ್ಪವನ್ನು ನಂಬಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಮುಂದಾಗಲಾಗಿತ್ತು ಆದರೆ ಆ ಕಾಸ್ಮೂಡಿ ಹನುಮಂತ ದೇವರ ಆಶಿರ್ವಾದದಿಂದ ದಾನಿಗಳಿಂದ ದಾನಗಳು ಸಾಗರೋಪಾದಿಯಲ್ಲಿ ಹರಿದು ಬಂತು ಎಂದರೆ ತಪ್ಪಾಗಲಿಕ್ಕಿಲ್ಲಾ ನಮ್ಮ ಸಮಾಜದಲ್ಲಿ ಲೋಕ ಕಲ್ಯಾಣದಂತ ಕಾರ್ಯಗಳಿಗೆ ಕೊಡುಗೈಧಾನಿಗಳು ಮುಂಚುಣಿಯಲ್ಲಿರುತ್ತಾರೆ ಎನ್ನುವುದಕ್ಕೆ ಸ್ವಯಂವರ ಕಲ್ಯಾಣ ಮಂಟಪದ ನಿರ್ಮಾಣದಲ್ಲಿ ದಾನಿಗಳು ಮಾಡಿರುವ ಧಾನಗಳೆ ಸಾಕ್ಷಿಯಾಗಿರುತ್ತದೆ

ಒಟ್ಟಾರೆ ಕಾಸ್ಮೂಡಿ ಹನುಮಂತ ಸ್ವಯಂವರ ಕಲ್ಯಾಣ ಮಂಟಪ ನಾಳೆ ಅಂದರೆ ಗುರುವಾರ ಉದ್ಗಾಟನೆಗೆ ಸಜ್ಜಾಗಿದೆ ಉದ್ಗಾಟನೆಗೆ ಕ್ಷಣಗಣನೆಯಾಗುತ್ತಿದೆ ಎಂದರೆ ಕಾಸ್ಮೂಡಿ ಹನುಮಂತ ದೇವರ ಆಶೀರ್ವಾದವೆ ಮೂಲ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲಾ ನಾಳೆ ಅಂದರೆ 07/05/2022 ಗುರುವಾರ ನಡೆಯಲಿರುವ ಸ್ವಯಂವರ ಕಲ್ಯಾಣ ಮಂಟ್ಟಪ ಉದ್ಗಾಟನೆ ಹಾಗು ಕಾಸ್ಮೂಡಿ ಹನುಮಂತ ದೇವರ 26 ನೇ ವರ್ಷದ ಪ್ರತಿಷ್ಟಾ ವರ್ದಂತಿ ಉತ್ಸವಕ್ಕೆ ಸಮಸ್ತ ಸಾರ್ವಜನಿಕರು ಬಂದು ಕಾರ್ಯಕ್ರಮವನ್ನು ಯಶಸ್ವಿಗೋಳಿಸಬೇಕು ಎಂದು ಕಾಸ್ಮೂಡಿ ಹನುಮಂತ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಸದಸ್ಯರು ವಿನಂತಿಸಿಕೊಂಡಿದ್ದಾರೆ

WhatsApp
Facebook
Telegram
error: Content is protected !!
Scroll to Top