ನಾಮದಾರಿ ಸಮಾಜ ಗುರುಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಅವಮಾನ

ನಾಮದಾರಿ ಅಭಿವೃದ್ದಿ ಸಂಘದ ವತಿಯಿಂದ ಪತ್ರಿಕಾಗೋಷ್ಟಿ ನಡೆಸಿ ಖಂಡನೆ

ಭಟ್ಕಳ: ನಮ್ಮ ನಾಮಧಾರಿ ಸಮಾಜದ ಕುಲಗುರುಗಳಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿಗಳನ್ನು ಗುರಿಯಾಗಿಸಿಕೊಂಡು ಅವರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಕೆಲವು ಕಿಡಿಗೇಡಿಗಳು ಇಲ್ಲಸಲ್ಲದ ಮೇಸೆಜಗಳನ್ನು ಹರಿಬಿಡುತ್ತಿರುವುದನ್ನು ನಮ್ಮ ಸಮಾಜ ತಿವೃವಾಗಿ ಖಂಡಿಸುತ್ತದೆ ಎಂದು ಮಾವಳ್ಳಿ ಸಾರದಹೊಳೆ ನಾಮದಾರಿ ಅಭಿವೃದ್ದಿ ಸಂಘದ ಅಧ್ಯಕ್ಷ ಸುಬ್ರಾಯ ನಾಯ್ಕ ಹೇಳಿದರು.

ಅವರು ಈ ಕುರಿತು ಸಾರದಹೋಳೆ ಹಳೇ ಕೋಟೆ ಹನುಮಂತ ದೇವಸ್ಥಾನದ ಸಭಾಭವನದಲ್ಲಿ ಪ್ರತಿಕಾಗೋಷ್ಟಿಯಲ್ಲಿ ಮಾತನಾಡುತ್ತ ನಮ್ಮ ಸನಾಜದ ಕುಲಗುರುಗಳಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ನಮ್ಮ ಹಳೇ ಕೋಟೆ ಹನುಮಂತ ದೇವಸ್ಥಾನದ ಉತ್ಸವದಲ್ಲಿ ಯಾವುದೇ ಪ್ರತಿಪಲಾಪೇಕ್ಷೇ ಇಲ್ಲದೆ ಏಳು ದಿನಗಳ ಕಾಲ ಸಂತಸದಿಂದ ಕಾರ್ಯಕ್ರಮದ ದಿವ್ಯ ಉಪಸ್ಥಿತಿ ವಹಿಸಿದ್ದರು . ನಮ್ಮ ಗುರುಗಳ ಆಶಿರ್ವಾದ ಹನುಮಂತ ದೇವರ ಆಶಿರ್ವಾದದಿಂದ ನಮ್ಮ ಕಾರ್ಯಕ್ರಮ ನ ಭೂತೋ ನ ಭವಿಷ್ಯತಿಃ ಎನ್ನುವಂತೆ ಕಾರ್ಯಕ್ರಮ ಎಲ್ಲರ ಮನ ಗೆಲ್ಲುವಂತಾಯಿತು. ನಮ್ಮ ಈ ಉತ್ಸವದ ಯಶಸ್ಸನು ಜೀರ್ಣಿಸಿಕೊಳ್ಳಲು ಸಾದ್ಯವಾಗದ ಕೆಲವು ವಿಕ್ರತ ಮನಸ್ಸಿನ ಕುಹಕಿಗಳು ಇಂತಹ ಧರ್ಮ ವಿರೋದಿ ಕೆಲಸಕ್ಕೆ ಕೈ ಹಾಕಿರುವುದು ಖಂಡನಿಯ ಇಂತಹ ಅಮಾನವಿಯ ಧರ್ಮವಿರೋದಿ ಕೆಲಸ ಮುಂದುವರಿದಲ್ಲಿ ಸಮಾಜ ಅಂತವರ ವಿರುದ್ದ ಕಠಿಣ ನಿರ್ದಾರವನ್ನು ಕೈಗೊಳ್ಳುತ್ತದೆ. ಎಂದು ಎಚ್ಚರಿಕೆ ನೀಡಿದರು .

ಇಂತಹ ಅವಹೇಳನಕಾರಿ ಪೋಷ್ಟನ್ನು ನಮ್ಮ ನಾಮದಾರಿ ಸಮಾಜ ತಿವ್ರವಾಗಿ ಖಂಡಿಸುತ್ತದೆ ಇಲ್ಲಿ ಇಂತಹ ಪೊಷ್ಟ ಮಾಡಿದವರ ವಿಕ್ರತ ಮನಸ್ಥಿತಿ ಎಲ್ಲರಿಗೂ ತೋರಿಸುತ್ತದೆ . ಇಂತಹ‌ ಧರ್ಮವಿರೋದಿ ಕ್ರತ್ಯ ಮರುಕಳಿಸಿದರೆ ನಾಮದಾರಿ ಸಮಾಜ ಸುಮ್ಮನೆ ಕುಳಿತುಕೊಳ್ಳುವುದಿಲ್ಲಾ ಎಂಬ ಎಚ್ಚರಿಕೆಯನ್ನು ನೀಡಿದರು.

ಪತ್ರಿಕಾಗೋಷ್ಟಿಯಲ್ಲಿ ಜಿರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಕ್ರಷ್ಣ ಎಸ್ ನಾಯ್ಕ ಮಾತನಾಡಿ ಸಾಮಾಜಿಕ ಜಾಲತಾಣದಲ್ಲಿ ಸ್ವಾಮಾಜಿಯವರ ವಿರುದ್ದ ಮಾಡಿರುವ ಧರ್ಮವಿರೋದಿ ಪೊಷ್ಟ ಖಂಡನಿಯ ನಮ್ಮ ಹನುಮನ‌ ಉತ್ಸವದ ಯಶಸ್ಸನ್ನು ಸಹಿಸ ಕೆಲವು ವಿಕ್ರತ ಮನಸ್ಸಿನವರು ವಿಕ್ರತವನ್ನು ಮೇರೆದಿದ್ದಾರೆ ನಮ್ಮ ಹಳೇ ಕೋಟೆ ಹನುಮಂತ ದೇವರ ಉತ್ಸವ ಗುರುಗಳ ಆಶಿರ್ವಾದ ಇತರ ಸಮಾಜಗಳ ಸಹಕಾರದಿಂದ ಯಶಸ್ವಿಯಾಗಿದೆ ಇದರ ಯಶಸ್ಸಿಗೆ ಎಲ್ಲರ ಶ್ರಮ ಇದೆ ನಮ್ಮ ಸಮಾಜದ ಗುರುಗಳಾದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಅನ್ಯ ಕಾರ್ಯಕ್ರಮಗಳಿದ್ದರು ಸತತ ಏಳು ದಿನಗಳ ಕಾಲ ತಮ್ಮ ದಿವ್ಯ ಉಪಸ್ಥಿತಿ ನೀಡುವುದರ ಮೂಲಕ ಉತ್ಸವಕ್ಕೆ ಆಗಮಿಸಿದ ಸರ್ವ ಸಮಾಜದವರನ್ನು ಪ್ರೀತಿ ವಿಶ್ವಾದದಿಂದ ನೋಡಿ ಆಶಿರ್ವದಿಸಿದ್ದಾರೆ.ಎಂದು ಹೇಳಿದರು

ಈ ಸಂದರ್ಬದಲ್ಲಿ ದೇವಸ್ಥಾನದ ಧರ್ಮಧರ್ಶಿ ಸುಬ್ರಾಯ ಜೆ ನಾಯ್ಕ ಆಡಳಿತ ಮಂಡಳಿ ಗೌರವ ಕಾರ್ಯಧರ್ಶಿ ಜೆ ಜೆ ನಾಯ್ಕ ಸದಸ್ಯರಾದ ಮಂಜುನಾಥ ನಾಯ್ಕ, ಮೊಹನ ನಾಯ್ಕ , ರಾಜು ನಾಯ್ಕ, ಟಿ ಆರ್ ನಾಯ್ಕ, ಚಂದ್ರಕಾಂತ ನಾಯ್ಕ , ಗಣಪತಿ ನಾಯ್ಕ , ಲಕ್ಷ್ಮಣ ನಾಯ್ಕ ಮುಂತಾದವರು ಉಪಸ್ತಿತರಿದ್ದರು.

WhatsApp
Facebook
Telegram
error: Content is protected !!
Scroll to Top