ನಾಮಧಾರಿ ಸಮಾಜದ ಕುಲಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಪೋಷ್ಟ ನಾಮಧಾರಿ ಸಮಾಜದವತಿಯಿಂದ ಡಿ ವೈ ಎಸ್‌ ಪಿ ಅವರಿಗೆ ಮನವಿ

ಭಟ್ಕಳ : ತಾಲೂಕಿನಲ್ಲಿ ನಾಮಧಾರಿ ಸಮಾಜದ ಕುಲಗುರುಗಳಾದ ಶ್ರೀ ಬ್ರಹ್ಮಾನಂದ ಸರಸ್ವತಿ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ಪಟ್ಟಬದ್ರ ಹಿತಾಸಕ್ತಿಗಳು ಅವಹೇಳನಕಾರಿ ಪೊಷ್ಟ ಮಾಡಿರುವುದರ ವಿರುದ್ದ ಸೂಕ್ತ ಕಠಿಣ ಕಾನೂನು ನಕ್ರಮ ಕೈಗೊಳ್ಳಬೇಕು ಎಂದು ತಾಲೂಕ ನಾಮಧಾರಿ ಸಮಾಜ ಹಾಗು ಶ್ರೀ ರಾಮ ಸೇವಾ ಸಮಿತಿಯ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು

ಭಟ್ಕಳ ತಾಲೂಕಿನಲ್ಲಿ ನಾಮಧಾರಿ ಸಮಾಜದ ಕುಲಗುರುಗಳಾದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತ ಕರ್ನಾಟಕ ವಿಧಾನಸೌದ ಚುನಾವಣೆಯಲ್ಲಿ 50 ಕ್ಷೇತ್ರದಲ್ಲಿ ಸಾದುಸಂತರು ಚುನಾವಣಾ ಕಣಕ್ಕಿಳಿಯುತ್ತಾರೆ ಎಂಬ ಕ್ರಾಂತಿಕಾರಿ ಹೇಳಿಕೆಯನ್ನು ನೀಡಿದ್ದರು ಇದರ ಬೆನ್ನಲ್ಲೆ ಈ ಗುರುಗಳನ್ನು ಅಮಾನವಿಯವಾಗಿ ಜನಪ್ರತಿನಿದಿ ಎನ್ನಿಸಿಕೊಂಡವರೊಬ್ಬರು ಹಾಗು ಅವರ ಸಮರ್ಥಕರು ಅಮಾನವಿಯವಾಗಿ ನಿಂದಿಸಿದ್ದರು ಹಾಗು ಈ ಬಗ್ಗೆ ಕಾರ್ಯಕ್ರಮದಲ್ಲಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ತುಂಬ ನೊಂದುಕೊಂಡು ಕಾರ್ಯಕ್ರಮದಲ್ಲಿ ಮಾತನಾಡಿದ್ದರು ಇದರ ಬೆನ್ನಲ್ಲೆ ಕೆಲವೊಂದು ಪಟ್ಟಬದ್ರ ಹಿತಾಸಕ್ತಿಗಳು ನಾಮದಾರಿ ಸಮಾಜದ ಕುಲಗುರುಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಪೊಷ್ಟಗಳನ್ನು ಹಾಕಿರುವುದು ಬೆಳಕಿಗೆ ಬಂದಿದೆ ಇದರಿಂದ ತಾಲೂಕಿನಾಧ್ಯಂತ ಆಕ್ರೋಶಗಳು ಕೇಳಿಬರುತ್ತಿದ್ದು ಭಟ್ಕಳ ತಾಲೂಕ ನಾಮದಾರಿ ಸಮಾಜ ಹಾಗು ಶ್ರೀರಾಮ ಸೇವಾ ಸಮಿತಿಯ ಮುಖಂಡರು ಭಟ್ಕಳ ಪೋಲಿಸ್‌ ಅಧಿಕಾರಿಗಳನ್ನು ಭೆಟಿ ಮಾಡಿ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳ ಬೇಕು ಎಂದು ಆಗ್ರಹಿಸಿದರು .

ಪೇಸ್‌ ಬುಕ್ಕಿನಲ್ಲಿ ನಾಮದಾರಿ ಒಕ್ಕೂಟ ಎಂಬ ಪೇಜಿನಲ್ಲಿ ಸ್ವಾಮೀಜಿ ಅವರ ಹೆಸರನ್ನು ಕೆಡಿಸುವ ರೀತಿಯಲ್ಲಿ ಅವಹೇಳನಕಾರಿ ಪೋಷ್ಟ ಮಾಡಲಾಗಿದೆ ಇದರಿಂದ ಸ್ವಾಮೀಜಿ ಅವರ ಭಕ್ತರು ನಾಮಧಾರಿ ಸಮಾಜದವರ ಮನಸ್ಸಿಗೆ ನೋವಾಗಿದೆ ಇಂಥ ಪೊಷ್ಟ ಮಾಡುವುದನ್ನು ನಾವು ವಿರೋಧಿಸುತ್ತೆವೆ ಇಂಥ ಕಿಡಿಗೇಡಿಗಳ ವಿರುದ್ದ ತಕ್ಷಣ ಕ್ರಮಕೈಗೊಂಡು ಬಂದಿಸಬೇಕು ಎಂದು ಅವರು ಮನವಿಯನ್ನು ನೀಡಿ ಆಗ್ರಹಿಸಿದರು ಪೇಸ್‌ ಬುಕ್ನಲ್ಲಿ ಪೊಷ್ಟ ಮಾಡಿದ ತುಣುಕುಗಳನ್ನು ಪೋಲಿಸರಿಗೆ ದೂರಿನಲ್ಲಿ ಲಗತ್ತಿಸಿ ನೀಡಲಾಯಿತು

ಈ ಸಂದರ್ಬದಲ್ಲಿ ನಾಮದಾರಿ ಸಮಾಜದ ಅಧ್ಯಕ್ಷ ಕ್ರಷ್ಣ ನಾಯ್ಕ ಆಸರಕೇರಿ ಉಪಾಧ್ಯಕ್ಷ ಭವಾನಿ ಶಂಕರ್‌ ನಾಯ್ಕ, ಶ್ರೀ ರಾಮ ಸೇವಾ ಸಮೀತಿ ಅಧ್ಯಕ್ಷ ಶ್ರೀದರ ನಾಯ್ಕ ಮುಖಂಡರಾದ ಗೊವಿಂದನಾಯ್ಕ , ಗಿರೀಶ ನಾಯ್ಕ, ಕೇ ಆರ್‌ ನಾಯ್ಕ, ತಿಮ್ಮಪ್ಪ ನಾಯ್ಕ ಮುಂತಾದವರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top