ಅಪರೂಪದಲ್ಲಿ ಅಪರೂಪ ನಾಮದಾರಿ ಕುಲಗುರು ಬ್ರಹ್ಮಾನಂದ ಸರಸ್ವತಿ ಸ್ವಾಮಿಜೀ

ಮಾನವ ಕುಲದ ಅಭಿವೃದ್ದಿಗೆ ಸದಾ ಮಿಡಿಯುತ್ತಾರೆ ಬ್ರಹ್ಮಾನಂದ ಸರಸ್ವತಿ ಸ್ವಾಮಿಜೀ

ಭಟ್ಕಳ :ನಾಮದಾರಿ ಕುಲಗುರುಗಳಾದ ಬ್ರಹ್ಮಾನಂದ ಸರಸ್ವತಿ ಸ್ವಾಮಿಜೀ ಮಾನವಿಯತೆ ಸಮಾನತೆ ಭಾವೈಕ್ಯತೆ ಪ್ರತೀಕದಂತಿದ್ದು ಮಾನವ ಕುಲಕೋಟಿಯ ಅಭಿವೃದ್ದಿಗೆ ಇವರ ಹೃದಯ ಸದಾ ಮಿಡಿಯುತ್ತದೆ ಇವರ ದೈವತ್ವದ ಬಗ್ಗೆ ಒಂದು ಸವಿಸ್ತಾರ ಚಿತ್ರಣದ ಒಂದು ವರದಿ ಇಲ್ಲಿದೆ ನೋಡಿ

ಬಾವೈಕ್ಯತಾವಾದಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

ಈ ಸಮಾಜಗಳ ಕುಲಗುರುಗಳೆಂದರೆ ಅವರು ಕೇವಲ ಒಂದು ಸಮಾಜಕಷ್ಟೆ ಸಿಮಿತವಾಗಿರುತ್ತಾರೆ ಎಂಬುವುದು ಜಗಜ್ಜಾಹಿರ ತಾನಾಯಿತು ತನ್ನ ಸಮಾಜವಾಯಿತು ಎಂಬತ್ತಿರುವ ಇಂದಿನ ಸಮಾಜಕ್ಕೆ ಮಾತ್ರ ಸಿಮಿತರಾಗಿರುವ ಸ್ವಾಮಿಗಳಿರುವಾಗ ನಾಮದಾರಿ ಕುಲಗುರುಗಳಾದ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿಗಳು ಮಾತ್ರ ಇದಕ್ಕೆ ವ್ಯತಿರಿಕ್ತ ಇವರು ತಮ್ಮ ನಾಮದಾರಿ ಸಮಾಜದ ಜೊತೆಗೆ ಇತರ ಸಣ್ಣಪುಟ್ಟ ಸಮಾಜವನ್ನು ಸಮಾನವಾಗಿ ನೋಡುವ ಬಾವೈಕ್ಯತವಾದಿ ಸಮಾಜವಾದಿ ಗುರುಗಳು ಎಂದರೆ ಸಮಂಜಸ

ನಿಷ್ಟುರವಾದಿಗಳು

ಮುಖ್ಯವಾಗಿ ಈ ನಾಮದಾರಿ ಕುಲಗುರುಗಳು ನಿಷ್ಠುರವಾದಿಗಳಾಗಿದ್ದು ಅಲ್ಲದೆ ಇವರು ಕೇವಲ ಪೀಠಕ್ಕೆ ಅಂಟಿಕೊಂಡು ಕುಳಿತುಕೊಳ್ಳುವ ಜಾಯಮಾನದ ಗುರುಗಳಲ್ಲಾ ಇದು ಇವರ ನಿಷ್ಠುರವಾದತ್ವವನ್ನು ನೋಡಿದರೆ ಎಲ್ಲರಿಗು ತಿಳಿಯುತ್ತದೆ. ಇನ್ನು ಈ ನಾಮದಾರಿ ಗುರುಗಳು ನಿಷ್ಟುರವಾದಿಗಳು ಇವರು ನಿಷ್ಟುರವಾದಿಗಳು  ಎನ್ನಲು ಉತ್ತಮ‌ ಉದಾಹರಣೆ ಎಂದರೆ  ರಾಜಕಾರಣಿಗಳು ಹಾಗು ಜನಪ್ರತಿನಿದಿಗಳ ಬಗ್ಗೆ  ಇವರಾಡಿದ  ಬಿಚ್ಚು ನುಡಿಗಳೆ ಸಾಕ್ಷಿ ರಾಜ್ಯದಲ್ಲಿ ಜನಪ್ರತಿನಿದಿಗಳು ಕೇವಲ ಸ್ವಹಿತಾಸಕ್ತಿಗಳಿಗಾಗಿ ನೈತಿಕ ಅಧಃ ಪಥನಕ್ಕೆ ಇಳಿದಿದ್ದಾರೆ ಕಾರಣ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ತಾವು 50 ಕ್ಷೇತ್ರದಲ್ಲಿ ಸಾದು ಸಂತರೊಂದಿಗೆ  ಚುನಾವಣಾ ಕಣಕ್ಕಿಳಿಯುವುದಾಗಿ  ಈ ಪ್ರಕ್ರಿಯೆ ಭಟ್ಕಳದಿಂದಲೆ ಪ್ರಾರಂಬವಾಗಲಿದೆ ಎಂದು ಹೇಳಿದರು ಇತರ ಸಮಾಜದ  ಕುಲಗುರುಗಳ ಹಾಗೆ ತಾವು ನಿಷ್ಟುರವಾದಿಗಳಾಗಿ ಮಾತನಾಡಿದರೆ ತಮ್ಮನ್ನು  ಕುಲಗುರುಗಳ ಸ್ಥಾನದಿಂದ  ಕೆಳಗಿಳಿಸುತ್ತಾರೆ ಎಂಬ ಸ್ವಲ್ಪ ಅಳುಕು ಕೂಡ ಈ ನಾಮದಾರಿ ಕುಲಗುರುಗಳಲ್ಲಿ ಇಲ್ಲ  ಬ್ರಹ್ಮಾನಂದ ಸರಸ್ವತಿ ಸ್ವಾಮಿಜೀ ಸರ್ವಸಂಗ ಪರಿತ್ಯಾಗಿ ಸಂತ ಎಂಬ ಪದಕ್ಕೆ ಸೂಕ್ತವಾದ ವ್ಯಕ್ತಿತ್ವವನ್ನು ಹೊಂದಿದವರಾಗಿದ್ದಾರೆ .

ಹಠಬಿಡದ ತ್ರಿವಿಕ್ರಮ

ಇವರನ್ನು ಹಟಬಿಡದ ತ್ರಿವಿಕ್ರಮ ಎಂದರೆ ತಪ್ಪಾಗಲಿಕ್ಕಿಲ್ಲಾ ಇವರು ಯಾವುದಾದದರು ಒಂದು ನಿರ್ದಾರ ಮಾಡಿದರೆಂದರೆ ಆ ನಿರ್ದಾರ ಮಾಡಿದ ಕೆಲಸ ಮಾಡಿ ಮುಗಿಸದೆ ವಿರಮಿಸದ ಸ್ವಾಮಿಜಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಗಿದ್ದಾರೆ ಉತ್ತಮ ಉದಾಹರಣೆ ಎಂದರೆ ಕರಿಕಲ್ ಕಡಲತಡಿಯಲ್ಲಿ ಜ್ಞಾನ ಮಂದಿರದ ನಿರ್ಮಾಣಕ್ಕಾಗಿ ಸ್ವಾಮಿಜಿ ತೆಗೆದುಕೊಂಡ ಸಂಕಲ್ಪದ ಕಾರಣ ಇಂದು ಕೋಟಿ ವೆಚ್ಚದಲ್ಲಿ ಕರಿಕಲ್ಲಿನ ಕಡಲತಡಯಲ್ಲಿ ಜ್ಞಾನ ಮಂದಿರ ತಲೆ ಎತ್ತಿನಿಂತಿದೆ

ಸರ್ವಧರ್ಮ ಸಹಿಷ್ಣು

ಅಲ್ಲದೆ ಈ ನಾಮದಾರಿ ಕುಲಗುರುಗಳು ಸರ್ವದರ್ಮ ಸಹಿಷ್ಣುಗಳಾಗಿದ್ದಾರೆ ಎಲ್ಲಾ ಜಾತಿ ಧರ್ಮಗಳನ್ನು ಸಮಾನವಾಗಿ ನೋಡುವ ಮಹಾನ್‌ ಧರ್ಮಸಹಿಷ್ಣುಗಳಾಗಿದಾರೆ , ಇವರು ಯಾವುದಾದದರು ಕಾರ್ಯಕ್ರಮಕ್ಕೆ ಭಟ್ಕಳ ಬಂದರೆಂದರೆ ಮುಸಿಂ ಜನಾಂಗವರು ಭಟ್ಕಳ ಗಡಿಭಾಗದಲ್ಲೆ ಇವರನ್ನು ಹೂವಿನ ಹಾರ ಹಾಕಿ ಸ್ವಾಗತಿಸುತ್ತಾರೆ ಇದು ಇವರ ಸರ್ವದರ್ಮ ಸಹಿಷ್ಣುತೆಗೆ ಹಿಡಿದ ಕನ್ನಡಿ ಎಂದರೆ ತಪ್ಪಿಲ್ಲಾ

ಮುಖ್ಯವಾಗಿ ಈ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನಾಮಧಾರಿ ಸಮಾಜದ ಹಾಗು ಸದ್ಬಕ್ತರ ಪ್ರೀಯ ಜಗದ್ಗುರುಗಳಾಗಿದ್ದಾರೆ ಇವರಿಗೆ ಅವಮಾನ ಸನ್ಮಾನಗಳೆರಡು ಒಂದೆ ಅವಮಾನವಾದಾಗ ಕುಗ್ಗದೆ ಸನ್ಮಾನಗಳಾದಗ ಹಿಗ್ಗದೆ ಎಲ್ಲವನ್ನು ಸಮಚಿತ್ತದಿಂದ ಸ್ವೀಕರಿಸುತ್ತಾರೆ ಇದಕ್ಕೆ ಉತ್ತಮ ಉದಾಹರಣೆ ಎಂದರೆ ತಾಲೂಕಿನ ಜನ ಪ್ರತಿನಿದಿ ಎನ್ನಿಸಿಕೊಂಡವರೊರ್ವರು ಹಾಗು ಅವರ ಸಮರ್ಥಕರು ತಮ್ಮದೆ ಕುಲಗುರುಗಳ ಮುಂದೆ ಅಮಾನವಿಯ ರೀತಿಯಲ್ಲಿ ಅತಿರೇಕವಾಗಿ ವರ್ತಿಸಿದರು ನಸುನಗುತ್ತಲೆ ಸ್ವೀಕರಿಸುರುವುದು ನಾಮದಾರಿ ಕುಲಗುರುಗಳಾದ ಬ್ರಹ್ಮಾನಂದ ಸರಸ್ವತಿ ಗುರುಗಳ ದೈವತ್ವ ಉದಾರಮನೊಭಾವನೆ ಎಂಬುವುದು ಸುಳ್ಳಲ್ಲಾ ಆದರೆ ಕುಲಗುರುಗಳ ಮನಸ್ಸು ನೊಯಿಸಿ ಗುರುಗಳು ನೊಂದುಕೊಳ್ಳುವಂತೆ ಮಾಡಿದವರು ತಮ್ಮ ಕರ್ಮಗಳನ್ನು ಅನುಭವಿಸುವುದು ಹೆಚ್ಚುದಿನಗಳಿಲ್ಲಾ ಎನ್ನುವುದು ಸದ್ಬಕ್ತರ ಮಾತಾಗಿದೆ ಯಾಕೆಂದರೆ ಕರ್ಮಾ ವಿಲ್ ಬಿ ರಿಟರ್ನ್ ಎನ್ನುವುದು ಇಲ್ಲಿ ಪ್ರಸ್ತುತ ಹಾಗು ಅದು ಜಗಜ್ಜಾಹಿರ

ಒಟ್ಟಾರೆ ನಾಮದಾರಿ ಕುಲಗುರುಗಳು ಅಪರೂಪದಲ್ಲಿ ಅಪರೂಪದ ಜಗದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮಿಜೀ ಆಗಿದ್ದಾರೆ ಎನ್ನುವುದು ಮಾತ್ರ ಸರ್ವಕಾಲಿಕ ಸತ್ಯ

WhatsApp
Facebook
Telegram
error: Content is protected !!
Scroll to Top