ಸಮಾನತೆ ಸಹಕಾರ ಸಹಬಾಳ್ವೆಯೇ ಜೀವನದ ಸಾರ : ಶ್ರೀ ಶ್ರಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

ಭಟ್ಕಳ: ಶಿರಾಲಿ ಸಾರದಹೊಳೆ ಹಳೇಕೋಟೆ ಹನುಮಂತ ದೇವರ ಈ ಉತ್ಸವ ನಡೆಯಲು ಮುಖ್ಯ ಕಾರಣ ಆ ಭಗವಂತನ‌ ಪ್ರೇರಣೆ ಹಾಗು ತ್ರಿಮೂರ್ತಿಗಳಂತಿರುವ,  ಕ್ರಷ್ಣ ಎಸ್ ನಾಯ್ಕ ಸುಬ್ರಾಯ ಜೆ ನಾಯ್ಕ , ಸುಬ್ರಾಯ ಎಂ ನಾಯ್ಕ ಅವರ ಶ್ರಮದ ಫಲ ಎಂದು ಸಾರದಹೊಳೆ ಹಳೇಕೋಟೆ ಹನುಮಂತ ದೇವರ ನಾಲ್ಕನೆ ದಿನದ ಉತ್ಸವದ ಸಂದರ್ಭದಲ್ಲಿ ಜಗದ್ಗುರು ಶ್ರೀ ಶ್ರಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು

ದಿ. ಜಟ್ಟ ತಿಮ್ಮಪ್ಪ ನಾಯ್ಕ ಹೆರಾಡಿ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದ ಅವರು ಉತ್ತಮ‌ ಸಮಾಜಕ್ಕೆ ಸಮಾನತೆ ಸಹಬಾಳ್ವೆ ಮುಖ್ಯವಾಗಿರುತ್ತದೆ ನಮಗೆ ಪಂಚ ಭೂತಗಳು ವೇದ ಉಪನಿಷತ್ತುಗಳು ಸಮಾನವಾದ ಅವಕಾಶವನ್ನು ಕೊಟ್ಟಿರುತ್ತದೆ ನಾವು ಸಹಭಾಳ್ವೆಯಿಂದ ಬದುಕಬೇಕು . ಈ ದೇವಸ್ಥಾನ ಜನರ ಹಣವಾದ ಆರು ಕೊಟಿಗಳಿಂದ ನಿರ್ಮಾಣವಾಗಿದೆ ಸರಕಾರದಿಂದ ಬರಬೇಕಾಗಿರುವ ಒಂದು ಕೊಟಿಗೆ ಇನ್ನೋಂದು ಕೋಟಿಯನ್ನು ಶಾಸಕರು ಸೇರಿಸಿ ಶ್ರೀ ಕ್ಷೇತ್ರದಲ್ಲಿ ರಥೋತ್ಸವಕ್ಕೆ ಅನುವು ಮಾಡಿಕೊಡಬೇಕು ಎಂದು ಹೇಳಿದರು

ಕಾರ್ಯಕ್ರಮದಲ್ಲಿ ಶಾಸಕ ಸುನಿಲ್ ನಾಯ್ಕ ಸೇರಿದಂತೆ ವಿವಿದ ಸಮಾಜದ ಮುಖಂಡರು ಮಾತನಾಡಿದರು

ಶಾಸಕ ಸುನಿಲ್ ನಾಯ್ಕ ಅವರು ದೇವಸ್ಥಾನದ ಹನುಮಂತ ದೇವರ ವಿಗ್ರಹಕ್ಕೆ ಬೆಳ್ಳಿ ಮತ್ತು ಚಿನ್ನ ಮಿಶ್ರಿತ ದೇವರ ಮುಖವಾಡವನ್ನು ಒಪ್ಪಿಸಿದರು ಹಾಗು ಈ ದಿನದ ಮಹಾ ಅನ್ನಸಂತರ್ಪಣೆಯ ಸಂಪೂರ್ಣ ವೆಚ್ಚ ಬರಿಸಿರುವುದು ತಿಳಿದು ಬಂದಿದೆ

ಕಾರ್ಯಕ್ರಮದಲ್ಲಿ ಹಳೇಕೋಟೆ ಹನುಮಂತ ದೇವಸ್ಥಾನದ ಧರ್ಮದರ್ಶಿ ಸುಬ್ರಾಯ ಜೇ ನಾಯ್ಕ , ಸಾರದಹೊಳೆ ಮಾವಳ್ಳಿ ಹೊಬಳಿ ನಾಮದಾರಿ ಸಮಾಜದ ಸುಬ್ರಾಯ ಎಂ ನಾಯ್ಕ, ಹಳೇಕೋಟೆ ಹನುಮಂತ ದೇವಸ್ಥಾನದ ಜಿರ್ಣೋದ್ದಾರ ಸಮೀತಿಯ ಅಧ್ಯಕ್ಷರಾದ ಕ್ರಷ್ಣ ಎಸ್ ನಾಯ್ಕ, ಮಾವಳ್ಳಿ ಹೊಬಳಿ ನಾಮದಾರಿ ಸಮಾಜದ ಗೌರವ ಕಾರ್ಯದರ್ಶಿ ಜೆ ಜೆ ನಾಯ್ಕ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಸದಸ್ಯರಾದ ಮುಕುಂದ ಎಂ ನಾಯ್ಕ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನ ಆಡಳಿತ ಕಮಿಟಿಯ ಅಧ್ಯಕ್ಷರಾದ ಕ್ರಷ್ಣ ನಾಯ್ಕ ಆಸರಕೇರಿ ಮುಂತಾದವರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top