ಭಟ್ಕಳ ತಾಲೂಕಿನಲ್ಲಿ ಜನ ಸಾಮಾನ್ಯರಿಗೊಂದು ಕಾನೂನು ಪ್ರಭಾವಶಾಲಿ ಅಧಿಕಾರಿಗಳಿಗೊಂದು ಕಾನೂನೆ?

ಡಾ: ಸವಿತಾ ಕಾಮತ್‌ ಕಾನೂನು ಬಾಹಿರವಾಗಿ ತಾಲೂಕ ಆಸ್ಪತ್ರೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡು ವರ್ಷ ಕಳೆಯುತ್ತಿದ್ದರು ಯಾವುದೆ ಕ್ರಮ ಕೈಗೊಳ್ಳದ ಆರೋಗ್ಯ ಇಲಾಖೆ

ವಿಚಾರಣೆಗೆ ಬಂದ ಅಧಿಕಾರಿಗಳಿಂದ ತಲೆತಪ್ಪಿಸಿಕೊಳ್ಳಲು ರಜೆಯ ನೆಪವೊಡ್ಡಿದರೆ ತಾಲೂಕ ಪ್ರಭಾರೆ ಟಿ ಎಚ್‌ ಓ ಸವಿತಾ ಕಾಮತ್‌ ?

ಭಟ್ಕಳ ತಾಲೂಕಿನ ಸರಕಾರಿ ಆಸ್ಪತ್ರೆಯ ಅರವಳಿಕೆ ತಜ್ಞೇ, ಆಸ್ಪತ್ರೆಯ ಆಡಳಿತ ಅಧಿಕಾರಿ , ತಾಲೂಕ ಪ್ರಭಾರೆ ಟಿ ಎಚ್‌ ಓ ಸವಿತಾ ಕಾಮತ್‌ ಈ ಹಿಂದೆ ತಾಲೂಕ ಆಸ್ಪತ್ರೆಯಲ್ಲಿ ನಡೆದ ಅವ್ಯಹಾರದ ಬಗ್ಗೆ ತನಿಖೆಗೆ ಬಂದ ಅಧಿಕಾರಿಗಳಿಗೆ ತನಿಖೆಗೆ ಅಡ್ಡಿಪಡಿಸಿ ತನಿಖಾಧಿಕಾರಿಗಳಿಂದ ಕಾನೂನು ಭಾಹಿರವಾಗಿ ಪ್ರಶಂಸನಾ ಪತ್ರ ಪಡೆದಿದ್ದಲ್ಲದೆ ನಾಗರಿಕ ಸೇವಾ ನಿಯಮಾವಳಿಗೆ ವಿರುದ್ದವಾಗಿ ಕಾನೂನು ಬಾಹಿರವಾಗಿ ತಾಲೂಕ ಆಸ್ಪತ್ರೆಯಲ್ಲೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ಈ ಎಲ್ಲಾ ಈ ಪ್ರಕರಣದ ಬಗ್ಗೆ ಆರೋಗ್ಯ ಇಲಾಖೆಯಿಂದ ಹತ್ತು ಜನ ಅಧಿಕಾರಿಗಳ ತಂಡ ತನಿಖೆಗೆ ಆಗಮಿಸಿದ್ದು ಈ ಸಂದರ್ಬದಲ್ಲೆ ಡಾ: ಸವಿತಾ ಕಾಮತ್‌ ಕರ್ತವ್ಯಕ್ಕೆ ರಜೆಯನ್ನು ಹಾಕಿರುವುದು ತಾಲೂಕಿನಲ್ಲಿ ಹಲವಾರು ವೂಹಾಪೋಹಗಳು ಹರಿದಾಡುತ್ತಿದು ಈ ಬಗ್ಗೆ ಇವರನ್ನು ಟ್ರೋಲ್‌ ಪೇಜ್‌ ಒಂದು ಟ್ರೋಲ್‌ ಮಾಡಿರುವು ಕೂಡ ಬೆಳಕಿಗೆ ಒಂದಿದೆ ಡಾ: ಸವಿತಾ ಕಾಮತ್‌ ಮಾಡಿರುವುದಾದದರು ಏನು ಅಧಿಕಾರಿಗಳು ಮಾಡುತ್ತಿರುವುದಾದದರು ಏನು ಎಂಬ ಸತ್ಯವನ್ನ ತಿಳಿಯೋಣ ಬನ್ನಿ

ಭಟ್ಕಳ ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ಕೋರೋನಾ ಸಂದರ್ಬದಲ್ಲಿ ಅವ್ಯವಹಾರ ನಡೆದಿದೆ ಎಂದು ಸರಕಾರಿ ಆಸ್ಪತ್ರೆಯ ಆಡಳಿತ ವೈಧ್ಯಾಧಿಕಾರಿ ಡಾ: ಸವಿತಾ ಕಾಮತ್‌ ಅವರ ಮೇಲೆ ತಾಲೂಕಿನ ವ್ಯಕ್ತಿಯೋರ್ವರು ಆರೋಗ್ಯ ಇಲಾಖೆಗೆ ದೂರನ್ನು ಸಲ್ಲಿಸಿದ್ದರು ಈ ದೂರಿನ ಹಿನ್ನೆಲೆಯಲ್ಲಿ ಬೆಳಗಾವಿಯಿಂದ ತನಿಖೆಗಾಗಿ ತಾಲೂಕ ಆಸ್ಪತ್ರೆಗೆ ಅಧಿಕಾರಿಗಳ ತಂಡ ಆಗಮಿಸುತ್ತದೆ ಆದರೆ ಇದೆ ಸವಿತಾ ಕಾಮತ್‌ ಅವರು ತಾಲೂಕಿನ ಕೆಲವು ಸಮಾಜದ ಮುಖಂಡರು ಸಾಮಾಜಿಕ ಸಂಘಟನೆಗಳು ಹಾಗು ಕೆಲವು ವ್ಯಕ್ತಿಗಳನ್ನು ಮುಂದಿಟ್ಟುಕೊಂಡು ಅಧಿಕಾರಿಗಳಿಗೆ ತನಿಖೆ ನಡೆಸಲು ಬಿಡದೆ ತನಿಖೆಗೆ ಬಂದ ಅಧಿಕಾರಿಗಳಿಂದಲೆ ಪ್ರಶಂಸನಾ ಪತ್ರವನ್ನು ಬಲವಂತವಾಗಿ ಪಡೆದುಕೊಳ್ಳುತ್ತಾರೆ ಇದು ಶುದ್ದ ಕಾನೂನು ಉಲ್ಲಂಘನೆ ಹಾಗು ಅಧಿಕಾರಿಗಳ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿರುದು ಎಂದರೆ ತಪ್ಪಾಗಲಿಕ್ಕಿಲ್ಲಾ

ಕಾನೂನು ಬಾಹಿರವಾಗಿ ತಾಲೂಕ ಆಸ್ಪತ್ರೆಯಲ್ಲೆ ಹುಟ್ಟುಹಬ್ಬದ ಆಚರಣೆ

ಒಂದು ಜವಾಬ್ದಾರಿಯುತ ಹುದ್ದೆಯಲ್ಲಿದ್ದುಕೊಂಡು ಡಾ: ಸವಿತಾ ಕಾಮತ್‌ ತಪ್ಪಿನ ಮೇಲೆ ತಪ್ಪೆಸಗುತ್ತಿದ್ದು ಇವರು ಕಾನೂನಿನ ಬಗ್ಗೆ ಅರಿವಿದ್ದು ಕಾನೂನು ಭಾಹಿರವಾಗಿ ಸರಕಾರದ ಸ್ಪಷ್ಟ ನಿರ್ದೇಶನವಿದ್ದರು ನಾಗರಿಕ ಸೇವಾ ನಿಯಮಕ್ಕೆ ವಿರುದ್ದವಾಗಿ ತಮ್ಮ ಹುಟ್ಟುಹಬ್ಬವನ್ನು ಆಸ್ಪತ್ರೆಯಲ್ಲಿ ಆಚರಿಸಿಕೊಳ್ಳುತ್ತಾರೆ ಕಾರಣ ಈ ಬಗ್ಗೆ ಕರಾವಳಿ ಸಮಾಚಾರವು ಸುದ್ದಿಯನ್ನು ಪ್ರಸಾರ ಮಾಡುತ್ತದೆ ಇದೆ ನಮ್ಮ ವಾಹಿನಿ ಮಾಡಿದ ದೊಡ್ಡ ಅಪರಾದ ಎಂಬಂತೆ ಡಾ: ಸವಿತಾ ಕಾಮತ್‌ ನಮ್ಮ ಸುದ್ದಿವಾಹಿನಿಯ ಪ್ರಧಾನ ಸಂಪಾದಕ ಅರ್ಜುನ್‌ ಮಲ್ಯ ಅವರ ಮನೆಗೆ ತಮ್ಮ ಕೆಲವು ಸಮರ್ಥಕರನ್ನು ಕಳುಹಿಸಿ ಹತ್ಯೆಗೆ ಪ್ರಯತ್ನಿಸುತ್ತಾರೆ ಈ ಬಗ್ಗೆ ಗ್ರಾಮಿಣ ಪೊಲಿಸ್‌ ಠಾಣೆಯಲ್ಲಿ ಅವರ ಸಮರ್ಥಕರ ಮೇಲೆ ದೂರು ಕೂಡ ದಾಖಲಾಗಿದ್ದು ಮಾನವ ಹಕ್ಕು ಆಯೋಗದಲ್ಲಿ ಸವಿತಾ ಕಾಮತ್‌ ಹಿಡಿದು ಅವರ ಸಮರ್ಥಕರೆಲ್ಲರ ಮೇಲು ದೂರು ದಾಖಲಾಗಿದೆ ಇವರು ಹುಟ್ಟುಹಬ್ಬ ಆಚರಿಸಿಕೊಂಡ ಬಗ್ಗೆ ಡಿ ಎಚ್‌ ಓ ಅವರು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಟಿ ಎಚ್‌ ಓ ಮೂರ್ತಿರಾಜ್‌ ಭಟ್ಟ ಅವರಿಗೆ ತನಿಖೆಗೆ ಆದೇಶ ನೀಡುತ್ತಾರೆ ಇವರ ತನಿಖೆಯ ಸಂದರ್ಬದಲ್ಲಿ , ಈ ಸವಿತಾ ಕಾಮತ್‌ ತಾನು ಆಸ್ಪತ್ರೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿರುವುದು ಹೌದು ಎಂಬುವುದನ್ನು ಬರೆದುಕೊಟ್ಟಿದ್ದು ಟಿ ಎಚ್‌ ಓ ಮೂರ್ತಿರಾಜ್‌ ಭಟ್ಟ ತನಿಖೆ ನಡೆಸಿ ಡಾ: ಸವಿತಾ ಕಾಮತ್‌ ಸರಕಾರಿ ಆಸ್ಪತ್ರೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಬಗ್ಗೆ ದಾಖಲೆ ಒದಗಿಸಿ ಮುಂದಿನ ಕ್ರಮಕ್ಕಾಗಿ ಡಿ ಎಚ್‌ ಓ ಅವರಿಗೆ ತನಿಖಾ ವರದಿಯನ್ನು ಕಳಿಸಿರುತ್ತಾರೆ ನೋಡಿ ವೀಕ್ಷಕರೆ ನಮ್ಮ ಕಾನೂನು ತಪ್ಪಿತಸ್ಥರಿಗೆ ಶಿಕ್ಷೇಯನ್ನು ಒದಗಿಸಬೇಕು ಎಂದು ಹೇಳುತ್ತದೆ ಆದರೆ ನಮ್ಮ ಸರಕಾರಿ ಆಸ್ಪತ್ರೆಯ ವೈಧ್ಯಾಧಿಕಾರಿ ಸವಿತಾ ಕಾಮತ್‌ ವಿಷಯದಲ್ಲಿ ಇದು ತಲೆ ಕೆಳಗಾಗಿದೆ ಶಿಕ್ಷೆಯನ್ನು ಅನುಭವಿಸಬೇಕಾಗಿದ್ದ ಡಾ: ಸವಿತಾ ಕಾಮತ್‌ ಅವರಿಗೆ ಮೊದಲೆ ತಾಲೂಕ ಸರಕಾರಿ ಆಸ್ಪತ್ರೆಯ ವೈಧ್ಯಾಧಿಕಾರಿ ಹುದ್ದೆ ಇದ್ದರು ಕೂಡ ಇವರ ವಿರುದ್ದ ತನಿಖೆ ನಡೆಸಿದ ಟಿ ಎಚ್‌ ಓ ಮೂರ್ತಿರಾಜ್‌ ಭಟ್‌ ಅವರನ್ನು ಡೆಪ್ಯೂಟೇಷನ್‌ ಮೇಲೆ ದೂರದ ಜೊಯ್ಯಡಾಕ್ಕೆ ಹಾಕಿ ಅವರನ್ನು ಭಟ್ಕಳ ತಾಲೂಕ ಟಿ ಎಚ್‌ ಓ ಹುದ್ದೆಯಿಂದ ತೆಗೆದು ಅವರ ಸ್ತಾನಕ್ಕೆ ಅಪರಾದಿ ಸ್ಥಾನದಲ್ಲಿರುವ ಸವಿತಾ ಕಾಮತ್‌ ಅವರನ್ನು ಪ್ರಭಾರೆ ಟಿ ಎಚ್‌ ಓ ಆಗಿ ನೇಮಿಸುತ್ತಾರೆ. ಇದೆಂತಾ ಕಾನೂನು ಸ್ವಾಮಿ? ಟಿ ಎಚ್‌ ಓ ಮೂರ್ತಿರಾಜ್‌ ಭಟ್ಟ ಅವರು ಡಾ: ಸವಿತಾ ಕಾಮತ್‌ ಬರ್ತಡೆ ಪಾರ್ಟಿ ಆಚರಿಸಿಕೊಂಡ ಪ್ರಕರಣ ತನಿಖೆ ನಡೆಸಿದ್ದೆ ತಪ್ಪಾ ಹಾಗಾದರೆ ಡಿ ಎಚ್‌ ಓ ತನೀಖೆ ನಡೆಸಲು ಆದೇಶ ಕೊಟ್ಟಿದ್ದಾದರು ಏಕೆ ಇಲ್ಲಿ ಡೆಪ್ಯೂಟೆಶನ್‌ ಅರ್ಥವಾದರು ಏನು ಡೆಪ್ಯೂಟೆಷನ್‌ ಹೆಸರಲ್ಲಿ ಮೂರ್ತಿರಾಜ್‌ ಭಟ್‌ ಅವರನ್ನು ಟಿ ಹೆಚ್‌ ಓ ಹುದ್ದೆಯಿಂದ ತೆಗೆದಿರುವುದಾದರು ಏಕೆ

ಸವಿತಾ ಕಾಮತ್‌ ವಿಚಾರಣೆಗೆ ಬಂದ ಅಧಿಕಾರಿಗಳ ವಿಚಾರಣೆಗೆ ತಡೆ ಒಡ್ಡಿರುವುದು

ಇದು ಒಂದು ಕಡೆಯಾದರೆ ಇನ್ನೊಂದು ಕಡೆ ನಮ್ಮ ಕರಾವಳಿ ಸಮಾಚಾರ ಈ ಹಿಂದೆ ಕಾನೂನು ಬಾಹಿರ ಇಸ್ಪಿಟ್‌ ಅಡ್ಡಾದ ಬಗ್ಗೆ ವರದಿ ಮಾಡಿತ್ತು ಈ ಕಾರಣ ಇಸ್ಪಿಟ್‌ ಅಡ್ಡಾದ ಮಾಲಕನೋರ್ವ ವಾಹಿನಿ ಪ್ರಧಾನ ಸಂಪಾದಕ ಅರ್ಜುನ್‌ ಮಲ್ಯ ಅವರನ್ನು ಕೊಲೆ ಮಾಡುವ ಸ್ಕೇಚ್‌ ರೂಪಿಸಿಕೊಂಡು ಎದೆ ನೋವೆಂದು ಇದೆ ಡಾ: ಸವಿತಾ ಕಾಮತ್‌ ಅವರು ಆಡಳಿತ ಅಧಿಕಾರಿಯಾಗಿರುವ ತಾಲೂಕ ಸರಕಾರಿ ಆಸ್ಪತ್ರೆಯ ಐಸಿಯುವಿನಲ್ಲಿ ಎದೆ ನೋವೆಂದು ದಾಖಲಾಗುತ್ತಾನೆ ದಾಖಲಾಗಿ ಪ್ರಧಾನ ಸಂಪಾದಕರ ಕೊಲೆಗೆ ಸಂಚು ರೂಪಿಸುತ್ತಾನೆ ಕೊಲೆಗೆ ಪ್ರಯತ್ನ ನಡೆಸಿ ವಿಪಲವಾಗುತ್ತಾನೆ ಈ ಬಗ್ಗೆ ಪೋಲಿಸ್‌ ಇಲಾಖೆಗೆ ಸಿ ಸಿ ಟಿ ವಿ ಪೋಟೆಜ್‌ ದೋರೆತಿರುವುದೆ ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ ನಂತರ ಇತನನ್ನು ಪೋಲಿಸರು ಆಸ್ಪತ್ರೆಯಿಂದಲೆ ಬಂದಿಸುತ್ತಾರೆ

ಹೀಗೆ ಡಾ: ಸವಿತಾ ಕಾಮತ್‌ ಇತಿಹಾಸ ಕೆದುಕುತ್ತಾ ಹೊದರೆ ಒಂದಾ ಎರಡಾ ಅನೇಕ ಪ್ರಕರಣ ದುತ್ತನೆ ಎದುರಿಗೆ ಬರುತ್ತದೆ ಡಾ: ಸವಿತಾ ಕಾಮತ್‌ ಅವರು ಕೊರೊನಾ ಸಂದರ್ಬದಲ್ಲಿ ವಿ ಟು ನಮ್ಮ ಟಿ ವಿ ಎನ್ನುವ ಖಾಸಗಿ ವಾಹಿನಿಯ ಪ್ರಧಾನ ಸಂಪಾದಕರಿಗೆ ಕೊಚ್ಚೆಯಲ್ಲಿ ಬಿದ್ದವನು ಎಂಬ ಅವಾಚ್ಯ ಶಬ್ದಗಳನ್ನು ಹೇಳಿದ್ದಲ್ಲದೆ ನನ್ನಲ್ಲಿ ಹಣ ಇದೆ ಸಮಯವಿದೆ ನೀವು ಈ ಇತನಿಗೆ ಏನು ಮಾಡುತ್ತಿರೋ ಮಾಡಿ ಎಂದು ಪೋಲಿಸರಿಗೆ ಪರೋಕ್ಷವಾಗಿ ಲಂಚದ ಆಮೀಷವನ್ನು ತೋರಿಸುತ್ತಾರೆ

ಈಗ ಮತ್ತೆ ತಪ್ಪಿನ ಮೇಲೆ ತಪ್ಪು ಎನ್ನುವಂತೆ ಡಾ: ಸವಿತಾ ಕಾಮತ್‌ ಅವರು ತಮ್ಮ ಮೇಲೆ ಬಂದ ಆರೋಪದ ಬಗ್ಗೆ ತನಿಖೆಗೆಂದು ಆರೋಗ್ಯ ಇಲಾಖಾ ಅಧಿಕಾರಿಗಳ ತಂಡ ಆಗಮಿಸಿದರೆ ಡಾ: ಸವಿತಾ ಕಾಮತ್‌ ಅವರು ಮಾತ್ರ ರಜೆಯಲ್ಲಿರುತ್ತಾರೆ ತನಿಖೆಗೆ ಬರುವ ಅಧಿಕಾರಿಗಳು ಮೋದಲೆ ನೋಟಿಸ್‌ ಮಾಡಿರುತ್ತಾರೆ ಆದರೆ ಡಾ: ಸವಿತಾ ಕಾಮತ್ ಅವರು ಮಾತ್ರ ನೊಟಿಸ್‌ ಸ್ವಿಕರಿಸಿಯು ರಜೇಯಲ್ಲಿರುತ್ತಾರೆ ಇದೆಂತ ವ್ಯವಸ್ಥೆ ಸ್ವಾಮಿ ಇವರು ಆಡಿದ್ದೆ ಆಟವೆ ಮೊದಲು ಖಾಸಗಿ ವಾಹಿನಿ ಪ್ರಧಾನ ಸಂಪಾದಕನ ಮೇಲೆ ಅವಾಚ್ಯ ಶಬ್ದಗಳ ಪ್ರಯೋಗ ಮಾಡುತ್ತಾರೆ, ಪೋಲಿಸರಿಗೆ ಪರೋಕ್ಷವಾಗಿ ಲಂಚದ ಆಮೀಷವನ್ನು ತೋರಿಸುತ್ತಾರೆ, ಎರಡನೆಯದಾಗಿ ತನ್ನ ಮೇಲಿರುವ ಆರೋಪದ ತನಿಖೆಗೆ ಬಂದ ಅಧಿಕಾರಿಗಳ ಮೇಲೆ ಒತ್ತಡ ತಂದು ತನಿಖೆಗೆ ಅಡ್ಡಿಪಡಿಸಿದ್ದಲ್ಲದೆ ತನೀಖಾಧಿಕಾರಿಗಳಿಂದ ಬಲವಂತವಾಗಿ ಪ್ರಶಂಸನಾ ಪತ್ರವನ್ನು ಪಡೆದುಕೊಳ್ಳುತ್ತಾರೆ ನಂತರ ಕಾನೂನು ಬಾಹಿರವಾಗಿ ನಾಗರಿಕ ಸೇವಾ ಸಂಹಿತೆಗೆ ವಿರುದ್ದವಾಗಿ ತಾಲೂಕ ಆಸ್ಪತ್ರೆಯಲ್ಲಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಲ್ಲದೆ ವರದಿ ಮಾಡಿದ ವಾಹಿನಿ ಪ್ರಧಾನ ಸಂಪಾದಕನನ್ನು ಕೊಲೆಗೈಯ್ಯುವ ಉದ್ದೇಶದಿಂದ ತನ್ನ ಸಮರ್ಥಕರಿಂದ ಹಲ್ಲೆ ನಡೆಸುತ್ತಾರೆ , ಮೂರನೆಯದಾಗಿ ನಮ್ಮ ಕರಾವಳಿ ಸಮಾಚಾರದ ಪ್ರಧಾನ ಸಂಪಾದಕರನ್ನು ಕೊಲೆ ಗೈಯುವ ಸಂಚುರೂಪಿಸಿದ ಕೋಲೆಗಾರನೊಬ್ಬನನ್ನು ತಮ್ಮ ಆಸ್ಪತ್ರೆಯ ಐಸಿಯು ಅಲ್ಲಿ ದಾಖಲಿಸಿಕೊಳ್ಳುತ್ತಾರೆ ಇವರೆಂತ ವೈದ್ಯರು ಸ್ವಾಮಿ ನಾವು ಇವರನ್ನು ವೈಧ್ಯರೆಂದು ಕರೆಯುವುದೊ ಅಥವಾ ಎನೆಂದು ಕರೆದರೆ ಸೂಕ್ತ ಎನ್ನುವುದೆ ದೊಡ್ಡ ಪ್ರಶ್ನೆಯಾಗಿ ಉಳಿದಿದೆ

ಬಡ ಅಮಾಯಕರಿಗೆ ಸಾರ್ವಜನಿಕರಿಗೆ ಕಾನೂನಿನ ಪಾಠ ಮಾಡುವ ಅಧಿಕಾರಿಗಳು ಅಪರಾಧಿ ಸ್ಥಾನದಲ್ಲಿರುವ ಅರವಳಿಕೆ ತಜ್ಞೇ ಡಾ: ಸವಿತಾ ಕಾಮತ್‌ ಅವರ ವಿರುದ್ದ ತನಿಖೆ ನಡೆಸಿದ ಟಿ ಎಚ್‌ ಓ ಮೂರ್ತಿರಾಜ್‌ ಭಟ್ಟ್‌ ಅವರನ್ನು ಡೆಪ್ಯೂಟೇಷನ್‌ ಎಂಬ ನೆಪವನ್ನು ಮುಂದಿಟ್ಟುಕೊಂಡು ತಾಲೂಕ ಆರೋಗ್ಯ ಅಧಿಕಾರಿ ಹುದ್ದೆಯಿಂದ ತೆಗೆದು ಮೊದಲೆ ತಾಲೂಕ ಆಸ್ಪತ್ರೆಯ ಆಡಳಿತ ವೈಧ್ಯಾಧಿಕಾರಿಯಾಗಿರುವ ಇದೆ ಡಾ: ಸವಿತಾ ಕಾಮತ್‌ ಅವರನ್ನು ಪ್ರಭಾರೆ ತಾಲೂಕ ಆರೋಗ್ಯ ಅಧಿಕಾರಿಯನ್ನಾಗಿಸುತ್ತಾರೆ ಏನು ಸ್ವಾಮಿ ನಿಮಗೆ ಕಾನೂನಿನ ಅರಿವಿಲ್ಲವೆ ಅಥವಾ ಡಾ: ಸವಿತಾ ಕಾಮತ್‌ ಅವರು ಕೂನೂನಿಗೆ ನಿಲುಕದವರ ಅವರು ಏನು ಬೇಕಾದರು ಮಾಡಬಹುದಾ ಮೇಲಧಿಕಾರಿಗಳು ಸವಿತಾ ಕಾಮತ್‌ ಅವರ ಪ್ರಭಾವ ಹಾಗು ಹಣ ಬಲದ ಮುಂದೆ ಮಂಡಿಯುರಿ ಬಿಟ್ಟರೆ ಇದನ್ನು ಸಂಬಂದಿಸಿದ ಅಧಿಕಾರಿಗಳೆ ಉತ್ತರಿಸಬೇಕಾಗಿದೆ

ಜನಸಾಮಾನ್ಯರಿಗೆ ಪ್ರಭಾವಿಗಳು ಹಣವುಳ್ಳವರು ಏನು ಮಾಡಿದರು ನಡೆಯುತ್ತದೆ ಕಾನೂನು ಕೇವಲ ಪುಸ್ತಕದಲ್ಲಿ ಮಾತ್ರ ಎಂಬ ತಪ್ಪು ಸಂದೇಶ ಹೊಗುವುದರ ಮೊದಲು ಡಾ: ಸವಿತಾ ಕಾಮತ್‌ ಅವರ ಪ್ರಕರಣದ ಬಗ್ಗೆ ಸಂಬಂದಿಸಿದ ಅಧಿಕಾರಿ ಕೂಲಂಕುಷವಾಗಿ ತನಿಖೆ ನಡೆಸಿ ತಪ್ಪತಸ್ಥರಾಗಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳ ಬೇಕು ಎನ್ನುವುದೆ ಪ್ರಜ್ಞಾವಂತ ನಾಗರಿಕನ ಮಾತಾಗಿದೆ

WhatsApp
Facebook
Telegram
error: Content is protected !!
Scroll to Top