ಭಟ್ಕಳ ಸಾರದಹೊಳೆ ಹಳೇಕೋಟೆ ಹನುಮಂತ ದೇವರ ಪುನರ್‌ ನಿರ್ಮಾಣ ಪ್ರತಿಷ್ಟಾ ಅಷ್ಟಬಂದ ಬ್ರಹ್ಮಕಲಶೋತ್ಸವದ ಮೂರನೆ ದಿನದ ಕಾರ್ಯಕ್ರಮದ ಸಂಭ್ರಮ

ಶಾಸ್ತ್ರೋಕ್ತ ದೇವತಾ ಪೂಜಾ ಕೈಂಕರ್ಯಗಳು ಸಂಪನ್ನ

ಅಧಿಕಾರಗಳು ಶಾಶ್ವತವಲ್ಲ ನಮ್ಮ ಧರ್ಮ , ಸಮಾಜ, ಗುರು ಪೀಠ ಇದಷ್ಟೆ ಶಾಶ್ವತ : ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

ಭಟ್ಕಳ: ಅಧಿಕಾರ ಯಾರಿಗು ಶಾಶ್ವತವಲ್ಲ ಇಂದು ಇರುವ ಅಧಿಕಾರ ನಾಳೆ ಇರಲಾರದು ನಮ್ಮ ಧರ್ಮ ಸಮಾಜ ಗುರುಪೀಠ ಇದಷ್ಟೆ ಶಾಶ್ವತ ಇಂದು ಇರುವ ಅಧಿಕಾರ ನಾಳೆ ಇರಲಾರದು ಇದನ್ನು ಅರಿತು ಮನುಕುಲವು ನಡೆದುಕೊಳ್ಳ ಬೇಕಾಗಿದೆ ಎಂದು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಸಾರದಹೊಳೆ ಹಳೇಕೋಟೆ ಹನುಮಂತ ದೇವರ ಉತ್ಸವದ ತಮ್ಮ ಪ್ರವಚನದ ಸಂದರ್ಬದಲ್ಲಿ ಹೇಳಿದರು

ಹಳೇಕೋಟೆ ಹನುಮಂತ ದೇವರ ಪುನರ್‌ ನಿರ್ಮಾಣ ಪ್ರತಿಷ್ಟಾ ಅಷ್ಟಬಂದ ಬ್ರಹ್ಮಕಲಶೋತ್ಸವದ ಮೂರನೆ ದಿನದ ಕಾರ್ಯಕ್ರಮ ಅತಿ ವಿಜ್ರಂಬಣೆಯಿಂದ ನಡೆಯುತ್ತಿದ್ದು ಬೆಳಿಗ್ಗೆ ಆರು ಘಂಟೇಯಿಂದ ಸುಪ್ರಭಾತ , ವೇದಪಠಣ, ಭಗವನ್ನಿತ್ಯಾರಾದನೆ ಷೋಡಷನ್ಯಾಸ ಹೋಮಗಳು ನಾಡಿ ಅನುಸಂದಾನ ಪೂರ್ವಕ ಜೀವಾದಿ ತತ್ವನ್ಯಾಸಾದಿ ಪ್ರಾಣಪ್ರತಿಷ್ಟಾಪನಾ ಹೋಮ , ಪ್ರಾಯಶ್ಚಿತ್ತಾಂಗ ಹೋಮ ಹಾಗು 9.30 ಕ್ಕೆ ಆಧಾರ ಶಕ್ತಿ ಪೀಠ ಪೂಜೆ, ಯಂತ್ರ ನವರತ್ನನಿಕ್ಷಪ್ಯ ಅಷ್ಟಬಂದ ಮುಂತಾದ ದೇವತಾ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು ಹಾಗು ಶ್ರೀ ಹಳೆಹೋಟೆ ಹನುಮಂತ ದೇವರ ನೂತನ ಭವ್ಯ ವಿಗ್ರಹ ಪ್ರತಿಷ್ಟಾಪನೆ ಪರಿವಾರಾದಿ ದೇವತಾ ವಿಗ್ರಹಗಳ ಪ್ರತಿಷ್ಟಾಪನೆಯನ್ನು ಜಗದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ನೆರವೇರಿಸಿ ಆಶೀರ್ವಚನವನ್ನು ನೀಡಿದರು

ಸಭಾ ಕಾರ್ಯಕ್ರಮದಲ್ಲಿ ದೇವಸ್ಥಾನದ ಧರ್ಮದರ್ಶಿಗಳಾದ ಸುಬ್ರಾಯ ಜೇ ನಾಯ್ಕ ಪ್ರಸ್ತಾವಿಕ ಮಾತನ್ನಾಡಿದರು

ಮಧ್ಯಾನ ಒಂದು ಘಂಟೆಗೆ ಮಹಾ ಅನ್ನಸಂತರ್ಪಣಾ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮದಲ್ಲಿ ಜಿರ್ಣೋದ್ದಾರ ಸಮೀತಿಯ ಅಧ್ಯಕ್ಷರಾದ ಕ್ರಷ್ಣಾ ನಾಯ್ಕ ಮತ್ತು ಪಧಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು

ಸಂಜೆ ಐದು ಗಂಟೆಗೆ ಆದಿತ್ಯ ಹ್ರದಯಪಾರಾಯಣ ವೇದಘೋಷ ಹೀಗೆ ಅನೇಕ ದೇವತಾ ಕಾರ್ಯಕ್ರಮಗಳು ನಡೆಯಲಿದ್ದು ಸಂಜೆ 4 ರಿಂದ 7 ಕ್ಕೆ ಭಜನಾ ಕಾರ್ಯಕ್ರಮ ಹಾಹು 7 ರಿಂದ 9 ರವರೆಗೆ ಭಜನಾ ಸ್ಪರ್ದಾ ಕಾರ್ಯಕ್ರಮ ಮತ್ತು ರಾತ್ರಿ 9 ರಿಂದ ಮೋಹನ ನಾಯ್ಕ ಕುಜಳ್ಳಿ ಇವರ ನೇತ್ರತ್ವದಲ್ಲಿ ಶ್ರೀಗಣರಾಜ ಯಕ್ಷಗಾನ ಮಂಡಳಿ ಇವರಿಂದ ಶ್ರೀ ಮಾರುತಿ ಪ್ರತಾಪ ಎಂಬ ಯಕ್ಷಗಾನ ಕಥಾ ಪ್ರಸಂಗವನ್ನು ಆಡಿ ತೋರಿಸಲಿದ್ದಾರೆ

WhatsApp
Facebook
Telegram
error: Content is protected !!
Scroll to Top