ಸಾವಿರಾರು ಭಕ್ತಾಧಿಗಳ ಭವ್ಯ ಮೆರವಣಿಗೆಯಲ್ಲಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಪುರಪ್ರವೇಶ

ಸಾರದಹೊಳೆ ಹಳೇಕೋಟೆ ಶ್ರಿ ಹನುಮಂತ ದೇವಸ್ಥಾನದ ಪುನರ್ ನಿರ್ಮಾಣ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಅಂಗವಾಗಿ ಸ್ವಾಮೀಜಿಗಳ ಪುರಪ್ರವೇಶ


ಭಟ್ಕಳ: ಏಪ್ರಿಲ್ ೧೩ ರಿಂದ ೨೦ ರವರೆಗೆ ಶಿರಾಲಿ ಸಾರದಹೊಳೆ ಹಳೇಕೋಟೆ ಶ್ರಿ ಹನುಮಂತ ದೇವಸ್ಥಾನದ ಪುನರ್ ನಿರ್ಮಾಣ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಅಂಗವಾಗಿ ಶ್ರೀ ಕ್ಷೇತ್ರಕ್ಕೆ ಆಗಮಿಸಿದ ನಾಮಧಾರಿ ಸಮಾಜದ ಕುಲಗುರುಗಳಾದ ಶ್ರೀ ಬ್ರಹ್ಮಾನಂದ ಸರಸ್ವರತಿ ಸ್ವಾಮೀಜಿಯವರನ್ನು ಭಟ್ಕಳದ ಗಡಿ ಭಾಗವಾದ ಬೆಳಕೆಯಲ್ಲಿ ಸಾವಿರಾರು ಭಕ್ತರು ಹಾಗೂ ಬೈಕ್ ಸವಾರರು ಸ್ವಾಗತಿಸಿ ಬರಮಾಡಿಕೊಂಡರು.

ಸಾರದಹೊಳೆ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಬ್ರಾಯ ನಾಯ್ಕ, ಮೊಕ್ತೇಸರರಾದ ಸುಬ್ರಾಯ ನಾಯ್ಕ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಕೃಷ್ಣ ನಾಯ್ಕ ಬಿಜೆಪಿ ದುರಿಣರಾದ ಮುಕುಂದ್‌ ನಾಯ್ಕ ಸ್ವಾಮೀಜಿಯವರಿಗೆ ಹೂ ಹಾರ ಹಾಕಿ ಸ್ವಾಗತಿಸಿದರು. ಬೆಳಕೆ ಗಡಿಯಿಂದ ಸ್ವಾಮಿಜಿಗಳನ್ನು ಅಶ್ವಾರೂಡ ಸಿಂಗರಿಸಿದ್ದ ವಾಹನದಲ್ಲಿ ಕುಳ್ಳಿರಿಸಿ ಸಾವಿರಾರು ಭಕ್ತರು ಬೈಕ್ ರ‍್ಯಾಲಿಯ ಮೆರವಣಿಗೆ ನಡೆಸಿ ಸ್ವಾಮಿಜಿಯವರನ್ನು ವೆಂಕಟಾಪುರ ತನಕ ಬರಮಾಡಿಕೊಳ್ಳಲಾಯಿತು. ವೆಂಕಟಾಪುರದಿAದ ಮಹಿಳೆಯರು ಪೂರ್ಣಕುಂಭ ಸ್ವಾಗತದೊಂದಿಗೆ ಸ್ವಾಮೀಜಿಯವರನ್ನು ಮಾವಿನಕಟ್ಟೆ ಮಾರ್ಗದ ಮೂಲಕ ಹಳೇಕೋಟೆ ದೇವಸ್ಥಾನಕ್ಕೆ ಕಾಲ್ನಡಿಗೆಯ ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಯಿತು. ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಮಕ್ಕಳು ಹೆಂಗಸರು ಪಾಲ್ಗೊಂಡಿದ್ದರು. ಹುಲಿವೇಷದಾರಿಗಳು, ತಟ್ಟಿರಾಯ, ಚಂಡೆ ವಾಧ್ಯದ ತಂಡಮ ಬ್ರಹದಾಕಾರದ ಹನುಮಾನ,ಢಕ್ಕೆ ಕುಣಿತ , ಮರಾಠಿಗಳ ಗುಮ್ಟೆ ನೃತ್ಯ,ಮೆರವಣಿಗೆಯ ಶೋಭೆಯನ್ನು ಹೆಚ್ಚಿಸಿದವು. ರಸ್ತೆಯ ಇಕ್ಕೆಲೆಗಳಲ್ಲಿ ಕೇಸರಿಯ ಧ್ವಜದಿಂದ ಸಿಂಗರಿಸಲಾಗಿತ್ತು. ಶ್ವೇತ ವರ್ಣದ ಪಂಜೆ,ಶರ್ಟ ಧರಿಸಿದ್ದ ಹನುಮಂತನ ಭಕ್ತರಿಂದ ಜೈ ಶ್ರೀರಾಮ್ ಘೋಷಣೆ ಮೊಳಗಿಸಿದರು.


ಬೈಕ್ ರ‍್ಯಾಲಿ ಹಾಗೂ ಮೆರವಣಿಗೆಯಲ್ಲೂ ಕೇಸರಿ ದ್ವಜ ವನ್ನು ಯುವಕರು ಬೀಸುತ್ತಾ ಶ್ರೀರಾಮನ ನಾಮಸ್ಮರಣೆ ಮಾಡುತ್ತ ಮೆರವಣಿಗೆಯಲ್ಲಿ ಸಾಗಿದರು. ಮೆರವಣಿಗೆಯಲ್ಲಿ ಭಟ್ಕಳ ಶಾಸಕ ಸುನೀಲ್ ನಾಯ್ಕ, ಮಾಜಿ ಶಾಸಕ ಮಂಕಾಳ ವೈದ್ಯ ಸೇರಿದಂತೆ ಹಳೆ ಕೋಟೆ ದೇವಸ್ತಾನದ ಆಡಳಿತ ಮಂಡಳಿಯ ಸದಸ್ಯರು, ಭಟ್ಕಳದ ನಾಮಧಾರಿ ಕೂಟದ ಭಕ್ತರು ಇತರ ಸಮಾಜದ ಭಕ್ತರು ಸೇರಿದಂತೆ ೧೫ ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು.

WhatsApp
Facebook
Telegram
error: Content is protected !!
Scroll to Top