ಉಗ್ರ ಸ್ವರೂಪದತ್ತ ಮುಖ ಮಾಡಿದ ಮೊಗೇರ್‌ ಸಮಾಜದ ಪ್ರತಿಭಟನೆ ಮೈ ಮೇಲೆ ಪೆಟ್ರೋಲ್‌ ಎರಚಿಕೊಂಡ ಪ್ರತಿಟನಕಾರ

ಪ್ರತಿಭಟನಾ ನಿರತರನ್ನು ಮನವಲಿಸಲು ಯಶಸ್ವಿಯಾದ ಡಿ ಸಿ , ಎಸ್‌ ಪಿ

ಭಟ್ಕಳ: ಸತತ 21 ದಿನದಿಂದ ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕಾಗಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಮೊಗೇರ ಸಮಾಜದ ಪ್ರತಿಭಟನೆಯ ಬಿಸಿ ಹೆಚ್ಚಾದ ಹಿನ್ನೆಲೆ ಮಂಗಳವಾರದಂದು ಭಟ್ಕಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಮೊಗೇರ ಸಮಾಜದ ಮುಖಂಡರ ಜೊತೆಗೆ ಪ್ರವಾಸಿ ಮಂದಿರದಲ್ಲಿ ಸಭೆ ಕರೆದು ಮಾತುಕತೆ ನಡೆಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಸಭೆಯಲ್ಲಿ ಉಪಸ್ಥಿತರಿದ್ದ ಮೊಗೇರ ಸಮಾಜದ ಮುಖಂಡರಿಗೆ 21 ದಿನದಿಂದ ನಡೆಸಿಕೊಂಡು ಬರುತ್ತಿರುವ ಪ್ರತಿಭಟನೆಯ ದಿಕ್ಕು ಬದಲಾಗಿದ್ದು, ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು, ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಬೆಂಗಳೂರಿನಲ್ಲಿ ಏಪ್ರಿಲ್ 18 ಅಥವಾ 19 ರಂದು ಉನ್ನತ ಮಟ್ಟದ ಸಭೆ ನಡೆಸುವ ಭರವಸೆ ನೀಡಿದ್ದರ ಹಿನ್ನೆಲೆ ಮೊಗೇರ ಸಮಾಜ ಅಲ್ಲಿಯ ತನಕ ಸ್ಪಂದಿಸಿ ಉತ್ತಮ ರೀತಿಯಲ್ಲಿ ಜಿಲ್ಲಾಡಳಿತಕ್ಕೆ  ಸಹಕರಿಸಬೇಕಾಗಿದೆ ಎಂದರು. 
ಈಗಾಗಲೇ ಈ ಹೋರಾಟ ಆರಂಭಗೊಂಡ ಮಾರನೇ ದಿನದಂದೇ ಸಮಿತಿಯ ವತಿಯಿಂದ ಹೋರಾಟದ ಉದ್ದೇಶ, ಸಮಾಜದ ಬೇಡಿಕೆಯ ವಿವರ ಅದರ ದಾಖಲೆಗಳು ಹಾಗೂ ನ್ಯಾಯಾಲಯದ ಆದೇಶಗಳನ್ನು ಪಡೆದುಕೊಂಡು ಗಂಟೆಗಳ‌ ಕಾಲ ಸಮಾಜದವರೊಂದಿಗೆ ಸಂವಾದ ನಡೆಸಿದ್ದೇವೆ. ಮುಖ್ಯವಾಗಿ ಸಹಾಯಕ ಆಯುಕ್ತರಿಂದ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ಹಾಗೂ ಮೊಗೇರ ಸಮಾಜದ ಕಾನೂನು ಸಲಹೆಗಾರರಿಂದ ಲಿಖಿತ ರೂಪದಲ್ಲಿ ದಾಖಲೆಗಳ ಕ್ರೋಢಿಕರಣಕ್ಕೆ ತಿಳಿಸಲಾಗಿದೆ. ಅದರಂತೆ ಸಭೆಯನ್ನು ‌ಸಹ ನಡೆಸಿದ್ದೇವೆ. ಇದಾದ ಬಳಿಕ ಆರಂಭಗೊಂಡ ಹೋರಾಟದ ರೂಪರೇಷೆ ಹಾಗು ಬೇಡಿಕೆಯನ್ನು ಸರಕಾರಕ್ಕೆ ಲಿಖಿತ ರೂಪದಲ್ಲಿ ಕಳುಹಿಸಲಾಗಿದೆ. ಇದು 2008 ರಿಂದ ಆರಂಭಗೊಂಡ ವಿಚಾರದ ಹಿನ್ನೆಲೆ ಉಸ್ತುವಾರಿ ಸಚಿವರು ಬೆಂಗಳೂರಿನಲ್ಲಿ ಈ ಕುರಿತು ಸಮಾಜದವರಲ್ಲಿ ನಿಮ್ಮ ವಾದ ಪ್ರತಿವಾದ ಹಾಗೂ ನ್ಯಾಯಾಲಯದ ಆದೇಶಗಳ‌‌‌ ವಿವರಣೆಗೆ ಅವಕಾಶ ನೀಡಿದ್ದಾರೆ ಎಂದರು. 
ಸದ್ಯಕ್ಕೆ ಉನ್ನತ ಮಟ್ಟದ ಸಭೆಯ ದಿನದ ತನಕ ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ಇರುವ ಅವಕಾಶದಲ್ಲಿಯೇ ಕಾನೂನು ಮೀರದಂತೆ ಮುಂದುವರೆಸಿಕೊಂಡು ಹೋದಲ್ಲಿ ಜಿಲ್ಲಾಡಳಿತಕ್ಕೆ ಸಹಕರಿಸಿದಂತೆ ಆಗಲಿದೆ. ಇಷ್ಟು ದಿನದ ಕಾನೂನಿನ ಚೌಕಟ್ಟಿನ ಒಳಗೆ ನಡೆಸಿಕೊಂಡು ಬಂದ ಹೋರಾಟಕ್ಕೊಂದು ಶಕ್ತಿ, ಗೌರವವಿದ್ದು ಅದು ದಾರಿ ತಪ್ಪಿದರೆ ಸಿಗಬೇಕಾದ ನ್ಯಾಯಕ್ಕೆ ಅಡೆ ತಡೆಯಾಗಲಿದೆ ಇವೆಲ್ಲವನ್ನು ಮೊಗೇರ ಸಮಾಜ ಗಮನಿಸಬೇಕು. ಇವೆಲ್ಲದರ ಮನವರಿಕೆಯನ್ನು ಸಮಾಜದ ಮುಖಂಡರು ಅವರ ಸಮಾಜದ ಯುವಕರಿಗೆ ತಿಳಿಸಬೇಕೆಂಬುದು ಮಾತ್ರ ಜಿಲ್ಲಾಡಳಿತದ್ದಾಗಿದೆ ಎಂದರು‌. 
ಸತತ 14 ವರ್ಷಗಳ ಹೋರಾಟ ಇದಾಗಿರುವ ಕಾರಣ ಒಂದೇ ದಿನಕ್ಕೆ ಇತ್ಯರ್ಥಗೊಳ್ಳುವುದು ಕಷ್ಟಕರವಾಗಿದ್ದು, ಕಾನೂನಿನ ಮಾನದಂಡದಲ್ಲಿ ಹೋರಾಟ ಮುಂದುವರೆಸುವುದು ಸೂಕ್ತ. ಇನ್ನು ಕೆಲ ದಿನದಲ್ಲಿ ಉನ್ನತ ಮಟ್ಟದ ಸಭೆಯ ದಿನಾಂಕ ನಿಗದಿಯನ್ನು ಉಸ್ತುವಾರಿ ಸಚಿವರೊಂದಿಗೆ ಮಾತುಕತೆ ನಡೆಸಿ ಸಮಾಜದ ಮುಖಂಡರಿಗೆ ತಿಳಿಸಲಾಗುವುದು ಎಂದು ತಿಳಿಸಿದರು. 
ಇದಕ್ಕೆ ಮೊಗೇರ ಸಮಾಜದ ಮುಖಂಡರು ಸಹ ಜಿಲ್ಲಾಧಿಕಾರಿಗಳ ಮಾತಿಗೆ ಸಹಮತ ವ್ಯಕ್ತಪಡಿಸಿದರು. 
ನಂತರ ಪ್ರತಿಭಟನಾ ಸ್ಥಳದಲ್ಲಿದ್ದ ಸಮಾಜದ ಯುವಕರು ಜಿಲ್ಲಾಧಿಕಾರಿಗಳು ಸಭೆ ನಡೆಸುತ್ತಿರುವ ಪ್ರವಾಸಿ ಮಂದಿರದ ಬಳಿ ಬರುವುದಕ್ಕೆ ಪ್ರಯತ್ನಿಸಿದ್ದ ಹಿನ್ನೆಲೆ ಸ್ಥಳಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿ ಅವರ ಅಹವಾಲಿಗೆ ಸ್ಪಂದಿಸಿದರು. 

ಈ ಸಂದರ್ಭದಲ್ಲಿ ಮೊಗೇರ ಸಮಾಜದ ಅಧ್ಯಕ್ಷ ಅಣ್ಣಪ್ಪ ಮೊಗೇರ, ಎಫ್. ಕೆ. ಮೊಗೇರ, ಭಾಸ್ಕರ ಮೊಗೇರ, ವೆಂಕಟರಮಣ ಮೊಗೇರ ಸೇರಿದಂತೆ ಸಮಾಜದ ಪ್ರಮುಖರು ಇದ್ದರು.

WhatsApp
Facebook
Telegram
error: Content is protected !!
Scroll to Top