ಉಗ್ರ ಪ್ರತಿಭಟನೆಯತ್ತ ಮುಖ ಮಾಡಿದೆಯೇ ಮೊಗೇರ ಸಮುದಾಯ?

ಪರಿಶಿಷ್ಟ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ತಾಲೂಕಾಡಳಿತದ ಮುಂದೆ ಅರೆಬೆತ್ತಲೆ ಮೇರವಣಿಗೆ, ಉರುಳು ಸೇವೆ,ಆತ್ಮಹತ್ಯೆಗೆ ಪ್ರಯತ್ನ

ಭಟ್ಕಳ : ಜಿಲ್ಲೆಯಾಧ್ಯಂತ ಮೊಗೇರ ಸಮಾಜ ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕಾಗಿ ಹೋರಾಟವನ್ನು ನಡೆಸುತ್ತಿದ್ದು ಮೊಗೇರ್‌ ಸಮಾಜವು ಶನಿವಾರ ತಾಲೂಕಾಡಳಿತದ ಮುಂದೆ ಉರುಳು ಸೇವೆ ನಡೆಸಿ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿದ ಘಟನೆ ನಡೆದಿದೆ

ಮೊಗೇರ ಸಮುದಾಯವು ಕೆಲವು ದಿನಗಳಿಂದ ತಮ್ಮ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡುವಂತೆ ಶಾಂತಿಯುತವಾಗಿ ಪ್ರತಿಭಟನೆಯನ್ನು ನಡೆಸಿಕೊಂಡು ಬರುತ್ತಿದ್ದು ಇವರ ಪ್ರತಿಭಟನೆ ಶಾಂತಿಯುತ ಪ್ರತಿಭಟನೆಯಿಂದ ಉಗ್ರ ಸ್ವರೂಪವನ್ನು ಪಡೆದುಕೊಳ್ಳುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ ಇದಕ್ಕೆ ಉತ್ತಮ ಉದಾಹರಣೆ ಎಂದರೆ ಶನಿವಾರವಾದ ಇಂದು ಬೆಳಿಗ್ಗೆಯಿಂದಲೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕಾಗಿ ಮೋಗೆರ್‌ ಸಮುದಾಯದ ಪುರುಷರು ತಾಲೂಕಿನಲ್ಲಿ ಅರೆಬೆತ್ತಲೆ ಮೇರವಣಿಗೆಯನ್ನು ನಡೆಸಿದ್ದು ತಾಲೂಕಾಡಳಿತದ ಕಛೇರಿಯ ಮುಂದೆ ಉರುಳು ಸೇವೆಯನ್ನು ಮಾಡಿದ್ದು ಪ್ರತಿಭಟನಾಕಾರರಲ್ಲಿ ಓರ್ವನು ಸಿಮೇ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ ಪ್ರಸಂಗ ಎದುರಾಯಿತು ಈ ಸಂದರ್ಬದಲ್ಲಿ ಇತರ ಪ್ರತಿಭಟನಾಕಾರರು ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದ ಯುವಕನನ್ನು ರಕ್ಷಿಸಿದ್ದಾರೆ

ಪ್ರತಿಭಟನೆಯ ಸಂದರ್ಬದಲ್ಲಿ ತಿಲಕ್ ಮೊಗೇರ್‌ ಮಾತನಾಡಿ ನಾವು ಶಾಂತಿಯುತವಾಗಿ ಹೊರಾಟ ನಡೆಸುತ್ತೆವೆ ಎಂದು ನಮ್ಮನ್ನು ಕೇವಲವಾಗಿ ನೋಡಬೇಡಿ ನಮ್ಮ ಹೋರಾಟ ಉಗ್ರ ಸ್ವರೂಪವನ್ನು ಪಡೆದುಕೊಳ್ಳುವ ಮೊದಲೆ ಸರಕಾರ ಎಚ್ಚೆತ್ತುಕೊಳ್ಳ ಬೇಕು ಇನ್ನು ನಮ್ಮ ಹೋರಾಟ ಉಗ್ರ ಸ್ವರೂಪವನ್ನು ಪಡೆದುಕೊಳ್ಳುತ್ತದೆ ಎಂದು ಹೇಳಿದರು

ಬಾಸ್ಕರ್‌ ನಾಯ್ಕ ಸೋಡಿಗದ್ದೆ ಅವರು ಮಾತನಾಡಿ ಸರಕಾರಕ್ಕೆ ಸ್ವಲ್ಪವು ಮಾನವಿಯತೆಯಿಲ್ಲವೆ ಕೊರ್ಟ ಆದೇಶ ನೀಡಿದರು ಕೂಡ ನಮಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಮೀನಾ ಮೇಷ ಎಣಿಸುತ್ತಿರುವುದಾದರು ಏಕೆ ನಮ್ಮ ಹೊರಾಟ ಇಷ್ಟು ದಿನ ಶಾಂತರೂಪದಲ್ಲಿ ನಡೆಯುತ್ತಿತ್ತು ಇನ್ನು ಮುಂದೆ ನಾವು ಉಗ್ರ ಪ್ರತಿಭಟನೆ ನಡೆಸುವ ಅನಿವಾರ್ಯತೆ ಎದುರಾಗಿದೆ ಸರಕಾರ ಕೂಡಲೆ ಎಚ್ಚೆತ್ತುಕೊಳ್ಳ ಬೇಕು ಇಲ್ಲವಾದಲ್ಲಿ ಇದರ ಪರಿಣಾಮ ಏದುರಿಸ ಬೇಕಾಗುತ್ತದೆ ಎಂದು ಹೇಳಿದರು

ಪ್ರತಿಭಟನೆಯಲ್ಲಿ ಮೊಗೇರ್‌ ಸಮುದಾಯದ ಮುಖಂಡರು ಮಹಿಳೆಯರು ಮಕ್ಕಳು ಹಾಜರಿದ್ದರು

WhatsApp
Facebook
Telegram
error: Content is protected !!
Scroll to Top