ಸಾರ್ವಜನಿಕರ ಮೇಲೆ ಮೊಟ್ಟೆ ಎಸೆದು ಭಟ್ಕಳ ತಾಲೂಕಿನಲ್ಲಿ ಶಾಂತಿ ಕದಡುವ ಪ್ರಯತ್ನ

ಮೊಟ್ಟೆ ಎಸೆತ ನಡೆಸಿದ ಮೂವರು ಯುವಕರ ಗುಂಪಿನಲ್ಲಿ ಓರ್ವನ ಬಂದನ

ಭಟ್ಕಳ: ತಾಲೂಕಿನಲ್ಲಿ ಕೆಲವು ಅನ್ಯಕೋಮಿನ ಯುವಕರ ಗುಂಪು ಸಾರ್ವಜನಿಕರ ಮೇಲೆ ಮೊಟ್ಟೆಗಳನ್ನು ಎಸೆದು ಕೊಮು ಸೌಹಾರ್ದ, ಶಾಂತಿ ಕದಡುವ ಶಡ್ಯಂತ್ರದ ನಡೆಸಿದ್ದು ಕಾರಣ ಓರ್ವನನ್ನು ಸಾರ್ವಜನಿಕರು ಪೊಲಿಸರಿಗೆ ಒಪ್ಪಿಸಿದ್ದು ಭಟ್ಕಳ ಬುದಿ ಮುಚ್ಚಿದ ಕೆಂಡದಂತಾಗಿದ್ದು ತಾಲೂಕಿನಾಧ್ಯಂತ ಪೊಲೀಸ್‌ ಕಟ್ಟೆಚ್ಚರ ವಹಿಸಲಾಗಿದೆ

ಭಟ್ಕಳ ತಾಲೂಕು ಶಾಂತವಾಗಿದೆ ಎನ್ನುತ್ತಿರುವಾಗಲೆ ಭಟ್ಕಳ ಮತ್ತೆ ಪ್ರಕ್ಷುಬ್ದತ ಸ್ಥಿತಿಯನ್ನು ತಲುಪುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದ್ದು ಒಂದು ಕಡೆ ತಾಲೂಕಿನಲ್ಲಿ ಮೋಗೇರ್‌ ಸಮಾಜ ತಮಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಪ್ರತಿಭಟನೆಗೆ ಮುಂದಾಗಿದ್ದು ಇನ್ನೊಂದು ಕಡೆ ತಾವು ನೈಜ ಪರಿಷ್ಟರು ಮೊಗೇರ್‌ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬಾರದು ಎಂದು ದಲಿತ ಸಂಘಟನೆಗಳು ಪ್ರತಿಭಟನೆಯ ಹಾದಿಯನ್ನು ಹಿಡಿದಿದೆ ಇಂತಹ ಪರಿಸ್ಥಿತಿಯಲ್ಲಿ ಶುಕ್ರವಾರ ರಾತ್ರಿ ಕೆಲವು ಮುಸ್ಲಿಂ ಕಮಿನಿಟಿಯ ಯುವಕರು ಹಿಂದೂ ಸಮುಧಾಯದ ಯುವಕರನ್ನು ಗುರಿಯಾಗಿಸಿಕೊಂಡು ಮೊಟ್ಟೆಗಳನ್ನು ಎಸೆದು ತಾಲೂಕಿನ ಶಾಂತಿ ಕದಡುವ ಪ್ರಯತ್ನ ನಡೆಸಲಾಗಿದೆ ತಾಲೂಕಿನ ಹೆಬ್ಳೇ, ಹನುಮಾನ್‌ ನಗರ , ಗಾಂಧಿನಗರ, ಪುರವರ್ಗ ಮುಂತಾದ ಕಡೆಗಳಲ್ಲಿ ಅನ್ಯಕೋಮಿನ ಯುವಕರು ಶಾಂತಿ ಕದಡುವ ದೃಷ್ಟಿಯಲ್ಲಿ ಸಾರ್ವಜನಿಕರ ಮೇಲೆ ಮೊಟ್ಟೆಯಿಂದ ಹಲ್ಲೆ ನಡೆಸಿರುವುದು ಬೆಳಕಿಗೆ ಬಂದ್ದಿದ್ದು ಪುರವರ್ಗದಲ್ಲಿ ಹಲ್ಲೆ ನಡೆಸುವ ಸಂದರ್ಬದಲ್ಲಿ ಕೆಲವು ಯುವಕರು ಮೊಟ್ಟೆಯ ದಾಳಿಕೊರರನ್ನು ಬೆನ್ನಟ್ಟಿ ಬಂದು ತಾಲೂಕಿನ ರಾಘವೇಂದ್ರ ಸ್ವಾಮಿ ಮಠದ ಬಳಿ ಅಡ್ಡಗಟ್ಟಿ ಹಿಡಿದಿದ್ದಾರೆ ಮೂವರು ಯುವಕರ ಗುಂಪಿನಲ್ಲಿ ಇಬ್ಬರು ಪರಾರಿಯಾಗಿದ್ದು ಶಾಂತಿ ಕದಡುವ ಪ್ರಯತ್ನದಲ್ಲಿದ್ದ ಒಬ್ಬನನ್ನು ಯುವಕರು ಪೋಲಿಸರ ವಶಕ್ಕೆ ಒಪ್ಪಿಸಿದ್ದಾರೆ. ಈ ಸಂದರ್ಬದಲ್ಲಿ ಸ್ಥಳಿಯ ಯುವಕರು ಪರಾರಿಯಾದ ಇಬ್ಬರು ಯುವಕರನ್ನು ಬಂದಿಸುವಂತೆ ಪಟ್ಟುಹಿಡಿದಿದ್ದು ಈ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ಪೋಲಿಸರ ನಡುವೆ ಮಾತಿನ ಚಕಮಕಿ ನಡೆದಿರುವುದು ತಿಳಿದು ಬಂದಿದೆ

ಒಟ್ಟಾರೆ ಭಟ್ಕಳದಲ್ಲಿ ಪುನಃ ಶಾಂತಿ ಕದಡುವ ಷಡ್ಯಂತ್ರಗಳು ನಡೆಯುತ್ತಿದ್ದು ಮುಂದಿನ ದಿನಗಳಿಗೆ ಶಾಂತಿ ಭಂಗವಾಗಿ ಅಪಾಯಗಳು ಎದುರಾಗುವ ಮೊದಲೆ ಪೋಲಿಸ್‌ ಇಲಾಖೆ ಈ ಬಂಗೆ ಗಂಭಿರವಾಗಿ ಚಿಂತಿಸಿ ಸೂಕ್ತ ಕ್ರಮ ಕೈಗೊಂಡು ತಪ್ಪತಸ್ತರಿಗೆ ಕಠಿಣ ಶಿಕ್ಷೆಯನ್ನು ನೀಡಿ ಶಾಂತಿ ಕದಡುವ ದುಷ್ಕರ್ಮಿಗಳ ಪ್ರಯತ್ನಗಳನ್ನು ಮೊಳಕೆಯಲ್ಲೆ ಚಿವುಟಿ ಹಾಕಬೇಕಾಗಿದೆ

WhatsApp
Facebook
Telegram
error: Content is protected !!
Scroll to Top