ಭಟ್ಕಳದ ಕೊಡುಗೈದಾನಿ ಉಧ್ಯಮಿ, ಈಶ್ವರ ನಾಯ್ಕ ಅವರಿಗೆ ಹುಟ್ಟುಹಬ್ಬದ ಶುಭಾಷಯ

ಈಶ್ವರ ನಾಯ್ಕ ಹುಟ್ಟುಹಬ್ಬಕ್ಕೆ ಶುಭಕೋರಿದ ಅಭಿಮಾನಿ ಬಳಗ ಹಾಗು ಸಮಸ್ತ ಸಾರ್ವಜನಿಕರು

ಭಟ್ಕಳ ತಾಲೂಕಿನ ದಿಮಂತ ವ್ಯಕ್ತಿತ್ವ ಕೊಡುಗೈದಾನಿ ಎಂದೆ ಹೆಸರುವಾಸಿಯಾಗಿರುವ ಉಧ್ಯಮಿಗಳು ರಾಜಕಾರಣಿಗಳು ಆದ ಈಶ್ವರ ನಾರಾಯಣ ನಾಯ್ಕ ಅವರಿಗೆ 52 ನೆ ವಸಂತದ ಸಂಬ್ರಮ ಇವರ ಹುಟ್ಟಿದಹಬ್ಬಕ್ಕೆ ನಾಡಿನ ಸಮಸ್ತ ಜನತೆ ಶುಭವನ್ನುಕೊರಿದ್ದಾರೆ.

ಈಶ್ವರ ನಾಯ್ಕ ಇಂತಿನ ಯುವಜನತೆಗೆ ಪ್ರೇರಣೆ ಎಂದರೆ ತಪ್ಪಾಗಲಿಕ್ಕಿಲ್ಲಾ ಈಶ್ವರ ನಾಯ್ಕ ಹಂತಹಂತವಾಗಿ ಮೇಲೆ ಬಂದು ನಂತರ ಕ್ಲಾಸ್‌ ಒನ್‌ ಗುತ್ತಿಗೆದಾರರಾಗಿ ಗುರುತಿಸಿಕೊಂಡವರು ಇವರು ಸರಕಾರದ ಹಲವಾರು ರಸ್ತೆ ಯೋಜನೆಗಳು ನಡೆಸಿದ್ದು ಇವರು ನಡೆಸಿರುವ ಕಾಮಗಾರಿ ಗುಣಮಟ್ಟದಿಂದ ಕುಡಿರುತ್ತದೆ ಎಂದು ಸಾರ್ವಜನಿಕರು ಹಾಗು ಅಧಿಕಾರಿಗಳು ಕೂಡ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ ಇವರ ವ್ಯಕ್ತಿತ್ವ ಸರಳ ಸಜ್ಜನಿಕೆ ತುಂಬ ಅಪರೂಪದಲ್ಲಿ ಅಪರೂಪದ ವ್ಯಕ್ತಿತ್ವ ಈ ನಮ್ಮ ಈಶ್ವರ ನಾಯ್ಕ ಅವರು ಎಂದರೆ ತಪ್ಪಾಗಲಿಕ್ಕಿಲ್ಲಾ ಇವರು 2008 ರಿಂದ 2013 ರ ವರೆಗೆ ಭಟ್ಕಳ ಪಿ ಎಲ್‌ ಡಿ ಭ್ಯಾಂಕ್‌ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು ಅಂದು ಇವರು ಬ್ಯಾಂಕಿನ ಲಾಭ 80 ಲಕ್ಷ ದಿಂದ 2 ಕೋಟಿಗೆ ಏರಿಸಿ ಎಲ್ಲರೂ ಹುಬ್ಬೆರಿಸುವಂತೆ ಮಾಡಿರುವುದು ಎಲ್ಲರಿಗೆ ತಿಳಿದಿರುವ ಸಂಗತಿ ಕರ್ನಾಟಕ ರಾಜ್ಯದ ಸರ್ವಾಂಗಿಣ ಸಾದನೆಗೆ ಒಂದು ಭಾರಿ ಪ್ರಥಮ ಒಂದು ಭಾರಿ ದ್ವೀತಿಯ ಹೀಗೆ ಏರಡೆರಡು ಭಾರಿ ಪ್ರಶಸ್ತಿ ಪಡೆಯುವಂತೆ ಮಾಡಿರುವ ಸಾದನೆ ಈಶ್ವರ್‌ ನಾಯ್ಕ ಅವರದ್ದು

ಇವರು ಭಟ್ಕಳ ತಾಲೂಕ ಗುತ್ತಿಗೆದಾರ ಸಂಘದ ಅಧ್ಯಕ್ಷರಾಗಿ ೪ ವರ್ಷ ಕಾರ್ಯ ನಿರ್ವಹಿಸಿದ್ದರು ಈ ಸಮಯದಲ್ಲಿ ಇವರು ಸಂಘದ ಎಲ್ಲಾ ಸದಸ್ಯರಿಗೂ ಸರಿಯಾಗಿ ಕಾಮಗಾರಿ ಸಿಗುವಂತೆ ಮಾಡುವ ಪ್ರಾಮಾಣಿಕ ಪ್ರಯತ್ನ ನಡೆಸಿದ್ದರು ಹಾಗು ಜಿಲ್ಲೆಯಲ್ಲೆ ಪ್ರಥಮ ಗುತ್ತಿಗೆದಾರರ ಬ್ಯಾಂಕ್‌ ತೇರೆದಿರುವುದು ಇವರ ಮತ್ತೊಂದು ಅತ್ಯದ್ಬುತ ಸಾದನೆ ಎಂದರೆ ತಪ್ಪಾಗಲಿಕ್ಕಿಲ್ಲಾ ಅಲ್ಲದೆ ಇವರು ರೊಟರಿ ಕ್ಲಬ್‌ ಅಧ್ಯಕ್ಷರಾಗಿ ಭಟ್ಕಳದಲ್ಲಿ ಡಯಾಲಿಸಸ್‌ ಸೆಂಟರ್‌ ತರುವಲ್ಲಿ ಮಹತ್ತರ ಪಾತ್ರ ವಹಿಸಿದ್ದು ಭಟ್ಕಳದ ಜನತೆಗೆ ಇವರ ಬಗ್ಗೆ ಇನ್ನಷ್ಟು ಗೌರವ ಇಮ್ಮಡಿಯಾಗಿದೆ ಇಷ್ಟಲ್ಲಾ ಸಾದನೆಗಳು ಮಾಡಿದ್ದರು ತಾವು ಏನು ಮಾಡೆ ಇಲ್ಲ ಎನ್ನುವಷ್ಟು ನಿಗರ್ವಿಗಳು ಸೌಜ್ಯಯುತರು ಸಜ್ಜನರು ಈಶ್ವರ ನಾಯ್ಕ ಇಂದು ಇವರು ತಮ್ಮ 52 ನೆ ವಸಂತಕ್ಕೆ ಕಾಲಿಟ್ಟಿದ್ದು ನಾಡಿನ ಜನತೆ ಹಾಗು ಇವರ ಅಭಿಮಾನಿ ಬಳಗವು ಈಶ್ವರ ನಾಯ್ಕ ಹುಟ್ಟುಹಬ್ಬಕ್ಕೆ ಶುಭವನ್ನು ಕೋರಿದ್ದಾರೆ.

ಈಶ್ವರ ನಾಯ್ಕ ಅವರು ತಮ್ಮ ಹುಟ್ಟುಹಬ್ಬವನ್ನು ತಾಲೂಕಿನ ವಿಷೇಶ ವಿಕಲ ಚೇತನರೊಂದಿಗೆ ಆಚರಿಸಿಕೊಂಡಿರುವುದು ತುಂಬ ಪ್ರಶಂಸನಿಯ ಬೆಳಿಗ್ಗೆಯೆ ದೇವಸ್ಥಾನಗಳಿಗೆ ಪೂಜೇ ಸಲ್ಲಿಸಿ ತಮ್ಮ ಅಭಿಮಾನಿಗಳೊಂದಿಗೆ ಭಟ್ಕಳ ಸರಕಾರಿ ಆಸ್ಪತ್ರೆಯನ್ನು ತಲುಪಿ ರೋಗಿಗಳಿಗೆ ಹಣ್ಣುಹಂಪಲುಗಳನ್ನು ವಿತರಿಸಿ ತಾಲೂಕಿನ ವಿಷೇಶ ವಿಕಲ ಚೇತನರೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು

ಈ ಸಂದರ್ಬದಲ್ಲಿ ಅವರು ಮಾತನಾಡಿ ನಾನು ಮೊದಲಿನಿಂದಲೂ ಸ್ನೇಹ ವಿಶೇಷ ವಿಕಲ ಚೇತನರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾ ಬಂದಿದ್ದು ಕೊರಾನಾ ಕಾರಣ ನಾನು ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ ಈಗ ಕೊರೋನಾ ನಂತರ ಮತ್ತೆ ನನಗೆ ಈ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ದೇವರು ಅವಕಾಶವನ್ನು ಮಾಡಿಕೊಟ್ಟಿದ್ದಾನೆ ಇದಕ್ಕಾಗಿ ನಾನು ಆ ಭಗವಂತನಿಗೆ ಚಿರಋಣಿ ಎಂದು ಹೇಳಿದರು

ತಾಲೂಕ ಆಸ್ಪತ್ರೆಯಲ್ಲಿ ಹಣ್ಣುಹಂಪಲು ವಿತರಿಸುವ ಸಂದರ್ಬದಲ್ಲಿ ತಾಲೂಕ ಆಸ್ಪತ್ರೆಯ ಆಡಳಿತಾಧಿಕಾರಿ ಸವಿತಾ ಕಾಮತ್‌ ಮಾತನಾಡಿ ಈಶ್ವರ ನಾಯ್ಕ ಅವರ ಸಮಾಜ ಮುಖಿಕಾರ್ಯವನ್ನು ಸಮಾಜ ಗುರುತಿಸುತ್ತಿದೆ ಅವರ ಹುಟ್ಟುಹಬ್ಬಕ್ಕೆ ಶುಭವನ್ನು ಕೊರುತ್ತಿದ್ದೆವೆ ಅವರಿ ಆ ಭಗವಂತ ಸುಖಶಾಂತಿಯನ್ನು ಕರುಣಿಸಲಿ ಎಂದು ಹೇಳಿದರು

ಹುಟ್ಟುಹಬ್ಬದ ಸಂದರ್ಬದಲ್ಲಿ ಶಂಕರ್‌ ನಾಯ್ಕ ನಾಗೇಂದ್ರ ನಾಯ್ಕ , ವಿಶ್ವ ನಾಯ್ಕ ಪಾಂಡುರಂಗ ನಾಯ್ಕ , ರಾಜ ಹಿಂದೂಸ್ಥಾನಿ , ಶಿನು ನಾಯ್ಕ ಸುರೇಶ ನಾಯ್ಕ ಮಣಿಕಂಠ ಆಚಾರಿ, ವಸಂತ ದೇವಾಡಿಗ, ನಾಗೇಶ ನಾಯ್ಕ ನಾಗಪ್ಪ ಗೊಂಡ , ಗಣೇಶ ನಾಯ್ಕ , ಪದ್ಮಯ್ಯ ನಾಯ್ಕ , ರಾಘು ನಾಯ್ಕ, ಸುರೇಶ ನಾಯ್ಕ , ಮುಂತಾದವರು ಉಪಸ್ಥಿತರಿದ್ದರು

ಒಟ್ಟಾರೆ ಈಶ್ವರ ನಾಯ್ಕ ಅವರು ತಮ್ಮ ಸಮಾಜ ಮುಖಿಕಾರ್ಯಗಳಿಂದ ಜನ ಮನ ಮನೆ ಮಾತಾಗಿದ್ದು ನಮ್ಮ ಕರಾವಳಿ ಸಮಾಚಾರವು ಅವರ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಾ ಅವರಿಗೆ ಆ ಭಗವಂತನು ಆಯುರಾರೋಗ್ಯವನ್ನು ಕರುಣಿಸಲಿ ಎಂದು ಆ ಭಗವಂತನಲ್ಲಿ ಕೇಳಿಕೊಳ್ಳುತ್ತದೆ

WhatsApp
Facebook
Telegram
error: Content is protected !!
Scroll to Top