ಬೆಳ್ಳಂಬೆಳಿಗ್ಗೆ ಮಿನು ಮಾರಾಟಗಾರ ಮಹಿಳೆಯರಿಂದ ಪುರಸಭೆಗೆ ಮುತ್ತಿಗೆ

ಗಬ್ಬುನಾರುತ್ತಿರುವ ಮೀನು ಮಾರುಕಟ್ಟೆ ಸ್ವಚ್ಚತೆಗೆ ಒತ್ತಾಯಿಸಿ ಪುರಸಭೆಗೆ ಮುತ್ತಿಗೆ

ಭಟ್ಕಳ:  ತಾಲೂಕಿನ ಪುರಸಭಾ ವ್ಯಾಪ್ತಿಯಲ್ಲಿರುವ ಮೀನು ಮಾರುಕಟ್ಟೆ  ಗಬ್ಬುನಾರುತ್ತಿದ್ದು ಮೀನು ಮಾರಾಟಗಾರ  ಮಹಿಳೆಯರು  ಭಟ್ಕಳ ಪುರಸಭೆಯನ್ನು ಮುತ್ತಿಗೆ ಹಾಕಿರುವ ಘಟನೆ ನಡೆದಿದೆ

ಭಟ್ಕಳ ತಾಲೂಕಿನ ಪುರಸಭೆ ದಿನ ಬೆಳಗಾದರೆ ಒಂದಿಲ್ಲೋಂದು ಖ್ಯಾತಿ ಕುಖ್ಯಾತಿಗೆ ಒಳಗಾಗುತ್ತಿದೆ ಅಂಗಡಿ ಮಳಿಗೆ ಹರಾಜು ಇಲ್ಲವಾದಲ್ಲಿ ಮೀನು ಮಾರುಕಟ್ಟೆ ಸ್ಥಳಾಂತರ ಭ್ರಷ್ಟಾಚಾರದ ಆರೋಪ ಹೀಗೆ ಒಂದೆ ಎರಡೆ ನಮ್ಮ‌ ಪುರಸಭೆ ಖ್ಯಾತಿಗಿಂತ ಕುಖ್ಯಾತಿಗೆ ಹೆಸರುವಾಸಿ ಎಂದರೆ ತಪ್ಪಿಲ್ಲಾ .

ಹೀಗಿರುವಾ ಇಂದು ಬೆಳ್ಳಂಬೆಳಿಗ್ಗೆಯೆ ಪುರಸಭಾ ವ್ಯಾಪ್ತಿಯ ಮೀನು ಮಾರುಕಟ್ಟೆ ಗಬ್ಬು ನಾರುತ್ತಿರುವ ಕಾರಣ ಮೀನು ಮಾರಾಟಗಾರ ಮಹಿಳೆಯರು ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಲ್ಲದೆ ಮಾರಾಟಕ್ಕೆ ತಂದಿರುವ ಮೀನುಗಳನ್ನು ಪುರಸಭೆಯ ಮುಂದೆ ಚೇಲ್ಲಿ ಪ್ರತಿಭಟನೆ ನಡೆಸಿದರು

ಈ ಸಂದರ್ಬದಲ್ಲಿ ಮಿನುಮಾರಾಟಗಾರ ಮಹಿಳೆಯೊಬ್ಬರು ನಾವು ಎಷ್ಟೇಂದು ಪ್ರತಿಭಟನೆಯನ್ನು ನಡೆಸುವುದು ನಮಗೆ ಈ ಹಳೆಯ ಕಟ್ಟಡದಲ್ಲೆ ಮೀನು ಮಾರಾಟಕ್ಕೆ ಅವಕಾಶವನ್ನು ನೀಡಿ ಮೀನು ಮಾರುಕಟ್ಟೆಯನ್ನು ಸ್ವಚ್ಚಗೋಳಿಸದೆ ನಮಗೆ ತೊಂದರೆಯನ್ನು ನೀಡುತ್ತಾರೆ ಇದೋಂದು ವ್ಯವಸ್ಥಿತ ಸಂಚಾಗಿರುತ್ತದೆ ನಮಗೆ ಹೀಗೆ ತೊಂದರೆ ಕೊಟ್ಟಿದ್ದಲ್ಲೆ ನಾವು ಇನ್ನು ಹೇಚ್ಚಿನ ಪ್ರತಿಭಟನೆ ನಡೆಸುತ್ತೆವೆ ಈ

ಪ್ರತಿಭಟನೆಯ ಸಂದರ್ಬದಲ್ಲಿ ನಾಮಧಾರಿ ಸಮಾಜದ ಅಧ್ಯಕ್ಷ ಕ್ರಷ್ಣ ನಾಯ್ಕ ಆಸರಕೇರಿ ಅವರು ಪುರಸಭೆಗೆ ಬೇಟಿ ನೀಡಿ ಮೀನು ಮಾರುಕಟ್ಟೆಯನ್ನು ಈ ಕೂಡಲೆ ಸ್ವಚ್ಚಗೊಳಿಸಬೇಕು ಎಂಬ ಸೂಚನೆಯನ್ನು ನೀಡಿದ ತಕ್ಷಣ ಮೀನು ಮಾರುಕಟ್ಟೆಯನ್ನು ಸ್ವಚ್ಚಗೊಳಿಸಲಾಯಿತು ಇದರಿಂದ ಪ್ರತಿಭಟನಾ ನೀರತ ಮೀನು ಮಾರಾಟಗಾರ ಮಹಿಳೆಯರು ತಮ್ಮ ಹೋರಾಟವನ್ನು ಹಿಂತೆಗೆದುಕೊಂಡಿರುವುದು ತಿಳಿದು ಬಂದಿದೆ

ಭಟ್ಕಳ ಪುರಸಭೇ ಯಾವಾಗಲು ಒಂದಿಲ್ಲೊಂದು ಸುದ್ದಿಯಲ್ಲಿರುವುದು ಮಾತ್ರ ಕಟು ಸತ್ಯ ಒಟ್ಟಾರೆ ಭಟ್ಕಳ ಪುರಸಭೆಯಲ್ಲಿ ಯಾವಾಗಲು ಪ್ರತಿಭಟನೆಗಳನ್ನು ಎದುರಿಸಿಕೊಂಡೆ ಬರುತ್ತಿದ್ದು ಪ್ರತಿಭಟನಾ ಕಾರರು ಸುಕಾಸುಮ್ಮನೆ ಪ್ರತಿಭಟನೆಯನ್ನು ನಡೆಸಲು ಸಾದ್ಯವೆ ಇಲ್ಲವಾಗಿದ್ದು ಇಂಥ ಸ್ಥಿತಿ ಭಟ್ಕಳ ಪುರಸಭೇಗೆ ಯಾಕಾಗಿ ಪುನಃ ಪುನಃ ತಲೆದೂರುತ್ತದೆ ಎಂಬುವುದೆ ಯಕ್ಷ ಪ್ರಶ್ನೇಯಾಗಿದೆ

WhatsApp
Facebook
Telegram
error: Content is protected !!
Scroll to Top