ಭಟ್ಕಳ ಮಾವಿನಕುರ್ವೆ ಕೋಟೆ ಗುಡ್ಡೆ ಸಮೀಪ ಬೋಟ್‌ ಮುಳುಗಡೆ : 80 ಲಕ್ಷ ನಷ್ಟ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮಾವಿನಕುರ್ವೆ ಬಂದರಿನಿಂದ ಹೊರಗೆ ಭಟ್ಕಳದ ಕೋಟೆಗುಡ್ಡೆ ಸಮೀಪ ಮಲ್ಪೆಯ ತೊಟ್ಟಂ ನಿವಾಸಿ ದೀಕ್ಷಿತ್ ಎನ್ನುವವರಿಗೆ ಸೇರಿದ ಸಿಹಾನ್ ಫಿಶರೀಸ್ ಬೋಟ್ ಮುಳುಗಡೆಯಾಗಿದ್ದು .ಬೋಟಿನಲ್ಲಿದ್ದ 7 ಮಂದಿ ಮೀನುಗಾರರನ್ನು ರಕ್ಷಿಸಿರುವುದು ತಿಳಿದು ಬಂದಿದೆ


ಎ.3ರಂದು ರಾತ್ರಿ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೋಗಿದ್ದ ಬೋಟು ಎ.4ರಂದು ಬೆಳಗಿನಜಾವ ಭಟ್ಕಳ ತಾಲೂಕಿನ ಕೋಟೆಗುಡ್ಡೆ ಬಳಿಯಲ್ಲಿ ಮೀನುಗಾರಿಕೆಯನ್ನು ಮಾಡುತ್ತಿರುವಾಗ ಬೋಟಿನ ಅಡಿ ಭಾಗಕ್ಕೆ ಯಾವುದೋ ಒಂದು ಬಲವಾದ ವಸ್ತು ಡಿಕ್ಕಿ ಹೊಡೆದಿದ್ದರಿಂದ ಬೋಟಿನ ಅಡಿಭಾಗದಲ್ಲಿ ಒಟ್ಟೆಯಾಗಿ ನೀರು ಬರಲು ಪ್ರಾರಂಭವಾಗಿದ್ದು ತಕ್ಷಣ ಬೋಟಿನ ಚಾಲಕ ಅಳ್ವೇಕೋಡಿಯ ರವಿ ನಾಗಪ್ಪ ಮೊಗೇರ ಇವರು ಬೇರೆ ಬೋಟುಗಳನ್ನು ಕರೆದು ಅದಕ್ಕೆ ತಮ್ಮ ಬೋಟನ್ನು ಕಟ್ಟಿ ಎಳೆದುಕೊಂಡು ಬರಲು ಪ್ರಯತ್ನಿಸಿದರಾದರೂ ಸಹ ಬೋಟಿನೊಳಗಡೆ ನೀರು ಬರಲು ಆರಂಭವಾಗಿದ್ದರಿಂದ ಬೋಟು ಮುಳುಗಡೆಯಾಗಿದ್ದು ಎಳೆದುಕೊಂಡು ಬರಲಿಕ್ಕೂ ಸಾಧ್ಯವಾಗಿಲ್ಲ ಎಂದು ತಿಳಿಯಲಾಗಿದೆ.

ಈ ಬೋಟಿನಲ್ಲಿದ್ದ ಮೋಹನ, ಮಂಜುನಾಥ, ದೇವೇಂದ್ರ, ರಮೇಶ, ವೆಂಕಟೇಶ, ಕಲ್ಲೇಶಿ ಇವರುಗಳನ್ನು ಬೇರೆ ಬೋಟಿನವರು ರಕ್ಷಣೆ ಮಾಡಿದ್ದು ಬೋಟಿನಲ್ಲಿದ್ದ ಕೆಲವು ವಸ್ತುಗಳನ್ನು ಕೂಡಾ ರಕ್ಷಣೆ ಮಾಡಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಬೋಟು ಮುಳುಗಡೆಯಿಂದ ತಮಗೆ 80 ಲಕ್ಷ ರೂಪಾಯಿ ಹಾನಿಯಾಗಿದೆ” ಎಂದು ಬೋಟ್‌ ಮಾಲಕರಾದ ದೀಕ್ಷಿತ್ ಹೇ

WhatsApp
Facebook
Telegram
error: Content is protected !!
Scroll to Top